ಉದ್ದಿನಬೇಳೆ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುತ್ತದೆ, ಅದರಲ್ಲಿ ಹತ್ತಾರು ಆರೋಗ್ಯಕಾರಿ ಅಂಶಗಳು ಅಡಗಿವೆ ಹೌದು ಉದ್ದಿನಬೇಳೆಯನ್ನು ವಿವಿಧ ಬಗೆಯ ಅಡುಗೆ ತಯಾರಿಸಲು ಬಳಸುತ್ತಾರೆ, ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಕಾಡುವಂತ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸ ಉದ್ದಿನಬೇಳೆ ಮಾಡುತ್ತದೆ.

ಸ್ತ್ರೀಯರಲ್ಲಿ ಕಾಡುವಂತ ಬಿಳುಪು ರೋಗ ನಿವಾರಣೆಗೆ ಉದ್ದಿನಬೇಳೆ ಸಹಕಾರಿ ಹೌದು ಉದ್ದಿನ ಹಿಟ್ಟು, ಅತಿಮಧುರ, ಹಾಗೂ ಅಶ್ವಗಂಧ ಇವುಗಳನ್ನು ಸಮವಾಗಿ ಕುಟ್ಟಿ ಶೋಧಿಸಿ ಹಲವು ದಿನಗಳವರೆಗೆ ಬಿಡದೆ ಒಂದೊಂದು ಚಮಚದಂತೆ ಜೇನುತುಪ್ಪದೊಡನೆ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಸ್ತ್ರೀಯರಲ್ಲಿ ಕಾಡುವಂತ ಬಿಳುಪು ರೋಗ ನಿವಾರಣೆ ಆಗುವುದು.

ಪುರುಷರಲ್ಲಿ ವೀರ್ಯ ವೃದ್ಧಿಗೆ ಉದ್ದಿನಬೇಳೆ ಸಹಕಾರಿ ಹೌದು ಪುರುಷರಲ್ಲಿ ವೀರ್ಯ ವೃದ್ಧಿಸುವ ಜೊತೆಗೆ ದೇಹಕ್ಕೆ ಬಲನೀಡುವಂತ ಕೆಲಸ ಮಾಡುತ್ತದೆ, ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ನೋಡುವುದಾದರೆ ಉದ್ದಿನಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಸಕ್ಕರೆ ಏಲಕ್ಕಿ ಸೇರಿಸಿ ಪಾಯಸ ಮಾಡಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗುವುದು ಅಷ್ಟೇ ಅಲ್ದೆ ದೇಹಕ್ಕೆ ಬಲ ಹೆಚ್ಚುವುದು. ಉದ್ದಿನ ಬೆಳೆಯ ತೇವ್ವೆಯನ್ನು ತಯಾರಿಸಿ ಊಟದ ಜೊತೆ ಸೇವಿಸಿದರೆ ಅಂಗಾಂಗಗಳು ಬಲಗೊಳ್ಳುವದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!