Ultimate magazine theme for WordPress.

ನಿಶ್ಯಕ್ತಿ, ನೆಗಡಿ ನಿವಾರಣೆಗೆ ಕಡಲೆಕಾಳು

0 1

ಸಾಮಾನ್ಯವಾಗಿ ಮನೆಯಲ್ಲಿ ಅಡುಗೆಗೆ ಬಳಸುವಂತ ಹತ್ತಾರು ದವಸ ದಾನ್ಯಗಳು ಹಾಗೂ ಹಣ್ಣು ತರಕಾರಿ ಸೊಪ್ಪು ಮುಂತಾದವುಗಳು ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಕಾಡುವಂತ ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತ ಕೆಲಸ ಮಾಡುತ್ತವೆ. ಅದೇ ನಿಟ್ಟಿನಲ್ಲಿ ಕಡಲೆಕಾಳು ಕೂಡ ದೇಹಕ್ಕೆ ಶಕ್ತಿ ವೃದ್ಧಿಸುವ ಜೊತೆಗೆ ನಿಶ್ಯಕ್ತಿ ನಿವಾರಿಸಿ ದೇಹವನ್ನು ಬಲವಾಗಿ ಬೆಳೆಯಲು ಸಹಕರಿಸುತ್ತದೆ.

ಹೌದು ನಿಶ್ಯಕ್ತಿಯಿಂದ ಬಳಲುವವರು ಹೆಚ್ಚು ವ್ಯಾಯಾಮ ಮಾಡುವರು ಎರಡು ಮೂರೂ ಚಮಚದಷ್ಟು ಕಡಲೆಕಾಳನ್ನು ತಣ್ಣೀರಲ್ಲಿ ರಾತ್ರಿ ನೆನಸಿತ್ತು ಬೆಳಗ್ಗೆ ಒಣದ್ರಾಕ್ಷಿ ಜೊತೆ ಅಗಿದು ಸೇವಿಸಿ ನಂತರ ಹಾಲು ಕುಡಿದರೆ ನಿಶ್ಯಕ್ತಿ ಕಡಿಮೆಯಾಗುವುದು.

ಇನ್ನು ನೆಗಡಿ ಇರುವವರು ಬಿಸಿಯಾದ ಕಡಲೆಯನ್ನು ತಿನ್ನುವುದರಿಂದ ಶೀತ ಕಡಿಮೆಯಾಗಿ ನೆಗಡಿ ನಿವಾರಣೆಯಾಗುತ್ತದೆ. ದೇಹಕ್ಕೆ ಯಾವುದೇ ಸೈಡ್ ಎಫೆಕ್ಟ್ ಆಗದಂತೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಕಡಲೆಕಾಳು.

ಅಷ್ಟೇ ಅಲ್ಲದೆ ಕಡಲೆಕಾಳು ಕೂಡ ದೇಹಕ್ಕೆ ಹತ್ತಾರು ಲಾಭಗಳನ್ನು ನೀಡುವಂತ ಗುಣಗಳನ್ನು ಹೊಂದಿದೆ, ಹೌದು ಮಧುಮೇಹ ರೋಗಿಗಳು ಸ್ವಲ್ಪ ಹಸಿ ಕಡಲೆಕಾಯಿಯನ್ನು ಪ್ರತಿದಿನ ಸೇವಿಸಿದರೆ ಅರೋಗ್ಯ ಸುಧಾರಿಸುವುದು. ಇನ್ನು ಹುರಿದ ಕಡಲೆಕಾಯಿಯನ್ನು ಬೆಲ್ಲದೊಡನೆ ತಿಂದರೆ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಅತ್ಯುತ್ತಮ ಪೌಷ್ಠಿಕ ಆಹಾರವಾಗುವುದು.

ಮುಖದ ಕಾಂತಿ ಹೆಚ್ಚಿಸುವ ಕಡಲೆಕಾಯಿ, ಹೌದು ಒಂದು ಚಮಚ ಕಡಲೆಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖಕ್ಕೆ ಕಾಂತಿ ಹೆಚ್ಚುವುದು.

Leave A Reply

Your email address will not be published.