ಕೆಲವರಲ್ಲಿ ಮರೆವು ಸಮಸ್ಯೆ ಅನ್ನೋದು ಹೆಚ್ಚಾಗಿರುತ್ತೆ ಅಂತವರಿಗೆ ಈ ಮನೆಮದ್ದು ಉತ್ತಮ ಅನ್ನೋದನ್ನ ಹೇಳಬಹುದಾಗಿದೆ. ಹೌದು ಈ ತಂಬುಳಿ ಯಾವುದೇ ತೊಂದರೆ ಇಲ್ಲದೆ ಶರೀರಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಮರೆವು ಸಮಸ್ಯೆಗೆ ಕಡಿವಾಣ ಹಾಕುತ್ತದೆ. ಅಷ್ಟೇ ಅಲ್ದೆ ನೆನಪಿನ ಶಕ್ತಿ ಹೆಚ್ಚಿಸುವಂತ ಲಾಭವನ್ನು ಈ ತಂಬುಳಿಯಿಂದ ಪಡೆಯಬಹುದಾಗಿದೆ.
ಅಷ್ಟಕ್ಕೂ ಈ ತಂಬುಳಿ ಯಾವುದು ಹಾಗು ಇದನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ನೋಡುವುದಾದರೆ, ಈ ತಂಬುಳಿಯನ್ನು ಬ್ರಾಹ್ಮೀ ತಂಬುಳಿ ಎಂಬುದಾಗಿ ಕರೆಯಲಾಗುತ್ತದೆ. ನೈಸರ್ಗಿಕವಾಗಿ ಸಿಗುವಂತ ಈ ಬ್ರಾಹ್ಮೀ ಎಲೆಯನ್ನು ಬಳಸಿ ಈ ತಂಬುಳಿ ಮಾಡಬಹುದಾಗಿದೆ.
ತಂಬುಳಿ ತಯಾರಿಸುವ ವಿಧಾನ: ಎಣ್ಣೆಜೀರಿಗೆ, ಮಜ್ಜಿಗೆ, ಮೆಣಸುತೆಂಗಿನ, ತುರಿಬ್ರಾಹ್ಮಿ, ಎಲೆಮೊಸರು, ಉಪ್ಪು ಇಷ್ಟು ಸಾಮಗ್ರಿಗಳನ್ನು ಬಳಸಿ. ಇದನ್ನು ತಯಾರಿಸೋದು ಹೇಗೆ ಅನ್ನೋದನ್ನ ನೋಡುವುದಾದರೆ, ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ. ಅದಕ್ಕೆ ಮೊಸರು, ಉಪ್ಪು ಸೇರಿಸಿ. ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ, ಮೊಸರಿನ ಮಿಶ್ರಣಕ್ಕೆ ಹಾಕಿ. ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ ತಂಬುಳಿ ರೆಡಿಯಾಗಿರುತ್ತದೆ. ನಿಮಗೆ ಈ ತಂಬುಳಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಷೇರ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.