ಜ್ಞಾಪಕ ಶಕ್ತಿ ಹೆಚ್ಚಿಸಲು ಮನೆಯಲ್ಲೇ ಇದೆ ಉತ್ತಮ ಮನೆಮದ್ದು

0 108

ಮರೆವು ಯಾರಿಗೆ ಇರುವುದಿಲ್ಲ. ಎಲ್ಲರಿಗೂ ಇರುತ್ತದೆ. ಕೆಲವೊಬ್ಬರಿಗೆ ಬಹಳ ಕಡಿಮೆ ಮರೆವು ಇರುತ್ತದೆ. ಹಾಗೆಯೇ ಕೆಲವೊಬ್ಬರಿಗೆ ಬಹಳ ಹೆಚ್ಚು ಮರೆವು ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮರೆವು ಹೆಚ್ಚಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ವಯಸ್ಸಿನ ಸಂಬಂಧ ಇಲ್ಲ. ದೊಡ್ಡವರಿಂದ ಚಿಕ್ಕವರೆಗಿನವರೆಗೂ ಇದು ಉಂಟಾಗುತ್ತದೆ. ನಾವು ಇಲ್ಲಿ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವುದೇ ಕಾರಣಕ್ಕೂ ವೈದ್ಯರ ಬಳಿ ಹೋಗುವ ಅವಶ್ಯಕತೆ ಇಲ್ಲ. ಹಾಗೆಯೇ ಅವರು ಕೊಡುವ ಇಂಗ್ಲೀಷ್ ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿ ಇರುವ ಎಷ್ಟೋ ಸಾಮಗ್ರಿಗಳು ಮತ್ತು ಗಿಡಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಆದರೆ ಅದು ತಿಳಿದಿರುವುದಿಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಔಷಧಿಗಳು ಇರುತ್ತವೆ. ದಿನಾಲೂ ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಆಯುರ್ವೇದದ ವಸ್ತುಗಳನ್ನು ಬಳಸಿದರೆ ಬಹಳ ಒಳ್ಳೆಯದು. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೆಳೆಯುವ ಮಕ್ಕಳಿಗೆ ಆರೋಗ್ಯಯುತ ಆಹಾರ ನೀಡುವುದು ಅತ್ಯಂತ ಮುಖ್ಯವಾಗಿದೆ. ಅವರಿಗೆ ನೀಡುವ ಆಹಾರದಲ್ಲಿ ಪ್ರೊಟೀನ್ ಗಳು, ವಿಟಮಿನ್ ಗಳು ಮತ್ತು ಪೋಷಕಾಂಶಗಳು ಇರಬೇಕಾಗುತ್ತದೆ. ಇದರಿಂದ ಮಕ್ಕಳ ದೇಹದ ಮತ್ತು ಮೆದುಳಿನ ಬೆಳವಣಿಗೆಗೆ ಯಾವುದೇ ರೀತಿಯ ಅಡೆತಡೆ ಉಂಟಾಗುವುದಿಲ್ಲ. ಗರ್ಭಿಣಿಯರು ಇರುವಾಗಲೇ ಪೋಷಕಾಂಶಗಳು ಇರುವ ಆಹಾರವನ್ನು ತಿನ್ನಬೇಕು. ಇದರಿಂದ ಮಕ್ಕಳ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ. ಹಾಗೆಯೇ ಮೂರರಿಂದ ನಾಲ್ಕು ಚಮಚ ನೆಲ್ಲಿಕಾಯಿಯ ರಸಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ಹಾಗೆಯೇ ಬೂದುಕುಂಬಳಕಾಯಿಯನ್ನು ಹಸಿಯಾಗಿ ತಿನ್ನಬೇಕು. ಇಲ್ಲವಾದಲ್ಲಿ ಇದರ ರಸ ಸೇವಿಸಿದರೂ ಸಹ ನೆನಪಿನ ಶಕ್ತಿ ಹೆಚ್ಚುತ್ತದೆ. ನಂತರದಲ್ಲಿ ರಾತ್ರಿ ಮಲಗುವ ಮುನ್ನ ಒಂದು ಬಟ್ಟಲು ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಇದನ್ನು ಬೆಳಿಗ್ಗೆ ಎದ್ದ ತಕ್ಷಣ ತಿನ್ನಬೇಕು. ಹಾಗೆಯೇ ಕೇಸರಿ ಹಾಕಿಕೊಂಡು ಹಾಲನ್ನು ಕುಡಿಯಬೇಕು. ದಿನವೂ 5 ರಿಂದ 6 ಗೋಡಂಬಿಯನ್ನು ತಿನ್ನಬೇಕು. ಇದನ್ನು ತಿನ್ನುತ್ತಾ ಬಂದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಊಟದ ನಂತರ ಸ್ವಲ್ಪ ಕುತ್ತುಂಬರಿಬೀಜದ ಪುಡಿಗೆ ಜೇನುತುಪ್ಪ ಸೇರಿಸಿ ತಿನ್ನಬೇಕು. ಇದರಿಂದ ಕೂಡ ನೆನಪಿನ ಶಕ್ತಿ ಹೆಚ್ಚುತ್ತದೆ. ಭಜೆಯ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು. ಇದರಿಂದ ಜ್ಞಾಪಕಶಕ್ತಿ ಕ್ರಮೇಣವಾಗಿ ಹೆಚ್ಚುತ್ತದೆ. ಹಾಗೆಯೇ ಹಾಲಿಗೆ ಯಾಲಕ್ಕಿಪುಡಿ ಬೆರೆಸಿ ಅದಕ್ಕೆ ಜೇನುತುಪ್ಪ ಹಾಕಿ ಕುಡಿಯಬೇಕು. ಒಂದೆಲಗದ ರಸವನ್ನು ಸೇವಿಸಬೇಕು. ಈ ಎಲೆಯನ್ನು 42ದಿನಗಳ ಕಾಲ ದಿನನಿತ್ಯ ಬೆಳಿಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಾರೆ.

Leave A Reply

Your email address will not be published.