Ultimate magazine theme for WordPress.

ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಮಾಡುವುದರಿಂದ ಶರೀರಕ್ಕೆ ಏನ್ ಲಾಭವಿದೆ ನೋಡಿ

0 7

ಚಹಾ ಇಲ್ಲದೇ ಕೆಲವರಿಗೆ ದಿನವೇ ಕಳೆಯುವುದಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಉಪಹಾರ ಸಹ ಸೇವಿಸದೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಸಕ್ಕರೆಯನ್ನು ಹಾಕಿ ಚಹಾ ಮಾಡಿ ಎಲ್ಲರೂ ಕುಡಿಯುತ್ತಾರೆ. ಆದರೆ ಸಕ್ಕರೆ ಹಾಕದೇ ಅದರ ಬದಲು ಬೆಲ್ಲಾ ಹಾಕಿ ಚಹಾ ಮಾಡಿ ಕುಡಿಯುವವರು ಬಹಳ ಕಡಿಮೆ. ಆದ್ದರಿಂದ ಬೆಲ್ಲದ ಚಹಾ ಮಾಡುವ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬೆಲ್ಲಾ ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಸಕ್ಕರೆ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಅತಿಯಾಗಿ ತಿನ್ನುತ್ತಾ ಹೋದರೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಬೆಲ್ಲದ ಚಹಾ ಮಾಡಲು ಕೆಲವು ಸಾಮಗ್ರಿಗಳು ಬೇಕು. ಅವುಗಳೆಂದರೆ ಹಾಲು, ಬೆಲ್ಲಾ, ನೀರು, ಶುಂಠಿ, ಲವಂಗ, ಯಾಲಕ್ಕಿ, ಚಹಾಪುಡಿ. ಮೊದಲು ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಬೇಕು. ಅದಕ್ಕೆ ಲವಂಗ, 4ಶುಂಠಿ ಚೂರುಗಳು ಮತ್ತು ಬೆಲ್ಲಾ ಹಾಕಬೇಕು. ಅದಕ್ಕೆ ಚಹಾಪುಡಿಯನ್ನು ಸೇರಿಸಬೇಕು.

ಚಹಾಪುಡಿ ಚೆನ್ನಾಗಿ ಕುದಿಯಬೇಕು. ಆಗ ಅದಕ್ಕೆ ಹಾಲು ಹಾಕಬೇಕು. ಹಾಲು ಹಾಕಿದ ನಂತರ ಚೆನ್ನಾಗಿ ಕುದಿಸಬೇಕು. ಕುಡಿಯುವಾಗ ಒಳ್ಳೆಯ ಪರಿಮಳ ಬರುತ್ತದೆ. ನಂತರ ಅದನ್ನು ಸೋಸಬೇಕು. ಇದನ್ನು ಮಸಾಲಾ ಚಹಾ ಎಂದು ಕೂಡ ಹೇಳಬಹುದು. ಇದನ್ನು ಎಲ್ಲಾದರೂ ಪ್ರವಾಸಕ್ಕೆ ಹೊರಟಾಗ ಬಾಟಲ್ ಗಳಲ್ಲಿ ಹಾಕಿಕೊಂಡು ಹೋಗಬಹುದು. ಇದನ್ನು ನೆಗಡಿ, ಕೆಮ್ಮು ಆದವರು ಕುಡಿದರೆ ಬಹಳ ಒಳ್ಳೆಯದು. ಅಂತಹವರು ಕುಡಿಯುವುದರಿಂದ ಗಂಟಲಿನ ಕಿರಿಕಿರಿ ಇರುವುದಿಲ್ಲ. ಸಕ್ಕರೆಯ ಚಹಾ ಕುಡಿದು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು ಬೆಲ್ಲದ ಚಹಾ ಕುಡಿದರೆ ಬಹಳ ಒಳ್ಳೆಯದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ.

Leave A Reply

Your email address will not be published.