ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಎಂದು ಕರಿಯಲ್ಪಡುವ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದು ಇವರಿಬ್ಬರ ಪ್ರೀತಿ ಮಮತೆ ವಾತ್ಸಲ್ಯ ನೋಡಿದವರಿಲ್ಲ ಅವರೇ ಮೇಘನಾ ಚಿರು ಜೋಡಿ . ಆದರೆ ಇವರಿಬ್ಬರ ಪ್ರೀತಿ ಮೇಲೆ ಯಾರ ಕ್ರೂರ ದೃಷ್ಟಿ ಬಿತ್ತೋ ಚಿರು ಅವರು ನಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಸಾಗಿದರು ಈ ಘಟನೆ ಸ್ಯಾಂಡಲ್ ವುಡ್ ಅಲ್ಲಿ ಒಂದು ಕಪ್ಪು ಚುಕ್ಕೆಯೇ ಸರಿ ಆದರೂ ಮೇಘನಾ ಅವರು ಧೃತಿಗೆಡದೆ ತಮ್ಮ ಉದರದಲ್ಲಿ ಚಿರುವಿನ ಕುಡಿ ಇಟ್ಟುಕೊಂಡೇ ಅವರ ನೆನಪಿನಲ್ಲೇ ಜೀವನ ಸಾಗಿಸುವ ನಿರ್ಧಾರ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರ ತಮ್ಮ ತಂದೆ ತಾಯಿ ಜೊತೆ ವಾಸವಾಗಿದ್ದರು ತಮ್ಮೆಲ್ಲಾ ನೋವನ್ನು ಉಂಡು ತಮ್ಮ ಮಗುವನ್ನು ಅತ್ಯಂತ ಜತನದಿಂದ ಜೋಪಾನ ಮಾಡಿದ್ದಾರೆ ತಾಯಿಯ ಮನಸ್ಸೇ ಹಾಗಲ್ಲವೆ ತನಗೆ ಎಷ್ಟ್ ನೋವಿದ್ದರೂ ತನ್ನ ಕಂದನ ಒಳಿತನ್ನು ಬಯಸುವ ಏಕೈಕ ಜೀವಿ ಅಮ್ಮ ಇದಕ್ಕೆ ಮೇಘನಾ ರಾಜ್ ಹೊರತಲ್ಲ

ಮೇಘನಾ ರಾಜ್ ಅವರು ಸುಂದರ ರಾಜ್ ಹಾಗೂ ಪ್ರಮೀಳಾ ಜೋಶಿ ಅವರ ಪುತ್ರಿ ಇವ್ರು 1990 ಮೇ3 ರಂದು ಬೆಂಗಳೂರು ಅಲ್ಲಿ ಜನಿಸಿದರು ಹಾಗೂ ತಮ್ಮ ಶಿಕ್ಷಣ ಅನ್ನು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಇನ್ನೂ ತಂದೆ ತಾಯಿಯರಿಂದ ನಟನೆ ಬಳುವಳಿಯಾಗಿ ಬಂದಿದ್ದು ರಂಗ ಕಲಾವಿದೆಯಾಗಿ ಜೋಕುಮಾರಸ್ವಾಮಿ ನಾಟಕ ಅಲ್ಲಿ ತನ್ನ ತಂದೆಯೊಂದಿಗೆ ಅಭಿನಯ ಮಾಡಿದ್ದಾರೆ ಆಮೇಲೆ ಕೆ ಬಾಲಚಂದ್ರನ್ ಅವರ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ

ಭೂವಪಾಥೈ ಪಾಂಡಿಯನ್ ಪೊಲ್ಲಾಧವನ್ ಹೀಗೆ ಹಲವಾರು ತಮಿಳು ಮಲಯಾಳಂ ಹಾಗೂ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ ಪುಂಡ ಇವರ ಕನ್ನಡ ಚಿತ್ರ ಇನ್ನೂ ರಾಜಾಹುಲಿ ಕನ್ನಡ ಚಿತ್ರದಲ್ಲಿ ಯಶ್ ಅವರ ಜೊತೆ ನಟನೆ ಮಾಡಿದು ಆ ಚಿತ್ರ ಹಿಟ್ ಆಗಿದೆ ಆಮೇಲೆ ಬಹುಪರಾಕ್ ಹಾಗೂ ಆಟಗಾರ ಸಿನಿಮಾದಲ್ಲಿ ನಟನೆ ಮಾಡಿದಾರೆ ಇನ್ನೂ ದರ್ಶನ್ ಅವರ ಜೊತೆ ಕುರುಕ್ಷೇತ್ರ ಸಿನಿಮಾದಲ್ಲಿ ರಾಜಕುಮಾರಿ ಭಾನುಮತಿಯಾಗಿ ನಟನೆ ಮಾಡಿದ್ದಾರೆ ಅವರ ಅನೇಕ ಸಿನಿಮಾಗಳಿಗೆ ಉತ್ತಮ ನಟನೆ ಪ್ರಶಸ್ತಿ ದೊರಕಿದೆ

ಇನ್ನೂ 2017 ರಲ್ಲಿ ನಟ ಚಿರಂಜೀವಿ ಸರ್ಜಾ ಅವರ ಜೊತೆ ನಿಶ್ಚಿತರ್ಥ ಮಾಡಿಕೊಂಡು 2018 ರಂದು ಸಪ್ತಪದಿ ತುಳಿದಿದ್ದಾರೆ ಇನ್ನೂ ಇವರದು ಹಿಂದೂ ಹಾಗೂ ಕ್ರೈಸ್ತ ಎರಡು ಸಮುದಾಯದಲ್ಲಿ ವಿವಾಹ ಆಗಿದ್ದಾರೆ ಇವರದ್ದು ಲವ್ ಮ್ಯಾರೇಜ್ ಆದರೂ ಕೂಡ ಎರಡು ಮನೆಯವರು ಒಪ್ಪಿ ಮದುವೆ ಮಾಡಿದ್ದಾರೆ ಇವರ ಮೈದುನ ದ್ರುವ ಸರ್ಜಾ ಕೂಡ ಒಬ್ಬ ಒಳ್ಳೆಯ ನಟ ಇನ್ನೂ ಚಿರು ಅವರು ಹಿರಿಯ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ ಹಾಗೂ ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಇವರು ಉಸಿರಾಟದ ಸಮಸ್ಯೆಯಿಂದ ಜೂನ್ 7 2020 ಅಂದು ನಮ್ಮೆಲ್ಲರನ್ನೂ ಅಗಲಿದರು ಅತಿ ಚಿಕ್ಕ ಪ್ರಾಯ 36 ವರ್ಷವಾಗಿತ್ತು ಎನ್ನುವುದು ವಿಷಾದನೀಯ.

ಇನ್ನೂ ಚಿರು ಅವರ ಸಾವಿನ ನಂತರ ಮೇಘನಾ ಅವರು ಎಲ್ಲೂ ಕಾಣಿಸಿಕೊಂಡಿಲ್ಲ ಹಾಗೂ ತಮ್ಮ ಪ್ರೀತಿಯ ಕುಡಿ ಲಾಲನೆ ಪಾಲನೆ ಹಾಗೂ ಪೋಷಣೆಯಲ್ಲಿ ತಮ್ಮ ಸಮಯವನ್ನು ಕಳೆದಿದ್ದು ಅದರ ಕುರಿತು ಅನೇಕ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ ಇನ್ನು ತಮ್ಮ ಮುದ್ದಾದ ಗಂಡು ಮಗುವಿಗೆ ರಾಯನ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದು ನಮ್ಮ ಮನೆಯ ಯುವರಾಜ ಎಂದು ಮೀಡಿಯಾ ಅಲ್ಲಿ ಹೇಳಿದ್ದರು ಇದು ಸಾಕಷ್ಟು ವೈರಲ್ ಆಗಿದೆ ರಾಯನ್ ತನ್ನ ಮುದ್ದಾಗಿ ಚಿರು ಅವರ ಫೋಟೋ ನೋಡಿ ಅಪ್ಪ ಎನ್ನುವ ವಿಡಿಯೋ ಎಂತಹ ಕಲ್ಲು ಮನಸಿನವರು ಕೂಡ ದ್ರವಿಸುವುದರಲ್ಲಿ ಆಶ್ಚರ್ಯ ಇಲ್ಲ. ಎರಡು ವರ್ಷಗಳ ಬಳಿಕ ಮೇಘನಾ ಅವರು ಖಾಸಗಿ ರಿಯಾಲಿಟ್ ಶೋ ಒಂದರಲ್ಲಿ ಭಾಗವಹಿಸಿದ್ದು ಅದರ ತೀರ್ಪುಗಾರರಾಗಿದ್ದಾರೆ ನಿಜ ಕಲರ್ಸ್ ಕನ್ನಡ ಅಲ್ಲಿ ಮೂಡಿಬರುತ್ತಿರುವ ಡಾನ್ಸ್ ಚಾಂಪಿಯನ್ ಶೋ ಅಲ್ಲಿ ಕಾಣಿಸಿಕೊಂಡಿದ್ದಾರೆ ಎಲ್ಲಿ ಕೂಡ ಜಂಭವನ್ನು ತೋರಿಸದೆ ಎಲ್ಲರೊಂದಿಗೆ ಖುಶಿ ಖುಶಿಯಾಗಿ ಇರುತ್ತಾರೆ.

ಶೂಟಿಂಗ್ ಅಲ್ಲು ಕೂಡ ಎಲ್ಲರಲ್ಲಿ ಒಬ್ಬರಾಗಿ ತಮ್ಮ ಕೊರಿಯೋಗ್ರಾಫಿ ಮಾಡುವ ತಾರಕ್ ಅವರ ಮಗಳೊಂದಿಗೆ ಕುಣಿದು ಕುಪ್ಪಳಿಸಿದರು ಇನ್ನೂ ವಿಜಯ್ ರಾಘವೇಂದ್ರ ಹಾಗೂ ಮಯೂರಿ ಕೂಡ ತೀರ್ಪುಗಾರರಾಗಿದ್ದಾರೆ ಇನ್ನು ತಮ್ಮ ಬಿಝಿ ಸಮಯದಲ್ಲೂ ಕೂಡ ತನ್ನ ಮಗನಿಗೆ ವಿಡಿಯೋ ಕರೆ ಮಾಡಿ ವಿಚಾರಿಸುತ್ತಾರೆ ಕೆಲವೊಮ್ಮೆ ಅತ್ತರೆ ಮಾಮೂಲಿ ಕರೆ ಮಾಡಿ ತನ್ನ ತಾಯಿ ಪ್ರಮೀಳಾ ಅವರ ಜೊತೆ ವಿಚಾರಿಸುತ್ತಾರೆ ಇನ್ನೂ ಮಗನಿಗೆ ಚಿರು ಅವರ ನಟನೆ ಮಾಡಿರುವ ಸಿನಿಮಾವನ್ನು ಈಗಿಂದಲೇ ತೋರಿಸುತ್ತ ಬಂದಿದಾರೆ ಹಾಗೂ ತನ್ನ ಜೀವನ ಅನ್ನು ಮಗನ ಏಳ್ಗೆ ಮುಡಿಪಾಗಿಟ್ಟಿದ್ದರು ಇನ್ನೂ ಹಲವಾರು ಸಿನಿಮಾ ಅಲ್ಲಿ ಅವಕಾಶ ಸಿಕ್ಕಿದ್ದು ಹಾಗೂ ಜಾಹೀರಾತು ಅಲ್ಲಿ ಕಾಣಿಸಿಕೊಂಡಿದ್ದಾರೆ ಇನ್ನೂ ಅವರ ಮಗನಿಗೆ ಉಜ್ವಲ ಭವಿಷ್ಯಕ್ಕೆ ಒಳ್ಳೆಯದು ಆಗಲಿ ಎಂದು ಆಶಿಸೋಣ.ಹೀಗೇ ಯಶಸ್ಸಿನ ಮೆಟ್ಟಿಲು ಹತ್ತುವ ದೈರ್ಯ ಹಾಗೂ ತಾಕತ್ತು ಆ ದೇವರು ನೀಡಲಿ ಆ ಪುಟ್ಟ ಕಂದಮ್ಮನಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply

Your email address will not be published. Required fields are marked *