12 ವರ್ಷ ದೊಡ್ಡವಳಾದ 2 ಮಕ್ಕಳ ತಾಯಿಯನ್ನು ಶಿಖರ್ ಧವನ್ ಮದ್ವೆಯಾಗಿದ್ದು ಯಾಕೆ ಗೊತ್ತಾ,

0 5

ಸೆಲೆಬ್ರಿಟಿ ಆದವರಿಗೆ ಹಣವಿರುತ್ತದೆ, ಹೆಸರಿರುತ್ತದೆ ಆದರೆ ಕೆಲವರು ಒಂದು ಕ್ಷಣದ ಸಂತೋಷಕ್ಕೆ ಬದುಕನ್ನು ಎಡವಟ್ಟು ಮಾಡಿಕೊಳ್ಳುತ್ತಾರೆ. ತಮ್ಮ ಜೀವನವನ್ನು ಎಡವಟ್ಟು ಮಾಡಿಕೊಂಡವರು ಬಹಳಷ್ಟು ಜನರಿದ್ದಾರೆ. ಅವರ ಜೀವನದಿಂದ ನಾವು ಪಾಠ ಕಲಿಯಬಹುದು. ಖ್ಯಾತ ಕ್ರಿಕೆಟರ್ ಜೀವನದಲ್ಲಾದ ಎಡವಟ್ಟನ್ನು ಈ ಲೇಖನದ ಮೂಲಕ ತಿಳಿಯೋಣ.

ಇಂಡಿಯನ್ ಟೀಮ್ ನ ಆಪತ್ಭಾಂದವ ಶಿಖರ್ ಧವನ್ ಅದೆಷ್ಟೊ ಮ್ಯಾಚ್ ನಲ್ಲಿ ಆಡಿ ಗೆಲ್ಲಿಸಿಕೊಟ್ಟಿದ್ದಾನೆ. ಅವರು ಪ್ರಾಮಾಣಿಕರಾಗಿದ್ದರು. ಅವರ ಮೇಲೆ ಯಾವುದೆ ಅಪವಾದ ಇರಲಿಲ್ಲ. ಎಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಾ, ಉತ್ತಮ ಭಾಂದವ್ಯ ಹೊಂದಿದ್ದರು. ಅವರು ಪ್ರಾರಂಭದಲ್ಲಿ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಾಗ ಅವರ ಮೀಸೆ ಹಾಗೂ ಜುಟ್ಟು ಎಲ್ಲರ ಗಮನ ಸೆಳೆದಿತ್ತು. ಅವರ ಸ್ಟೈಲ್ ಅನ್ನು ಯುವಕರು ಅನುಸರಿಸುತ್ತಿದ್ದರು.

ಶಿಖರ್ ಧವನ್ 1985 ರಲ್ಲಿ ಹುಟ್ಟಿದ್ದಾರೆ ಅವರಿಗೆ ಈಗ 36 ವರ್ಷ ವಯಸ್ಸು. ಅವರ ವ್ಯೆಯಕ್ತಿಕ ಜೀವನದಲ್ಲಿ ಅವರು ತಮಗಿಂತ 12 ವರ್ಷ ದೊಡ್ಡವರಾದ ಎರಡು ಮಕ್ಕಳ ತಾಯಿಯನ್ನು ಮದುವೆಯಾಗಿದ್ದಾರೆ. ಅವರು ಇಂಡಿಯನ್ ಟೀಮ್ ಗೆ ಬಂದಿರುವ ದಾರಿ ಸುಲಭವಾಗಿರಲಿಲ್ಲ ಕಷ್ಟಪಟ್ಟು ಅರ್ಧ ಶತಕ, ಶತಕಗಳನ್ನು ಬಾರಿಸಿದರು. ಸದ್ದಿಲ್ಲದೆ ಶಿಖರ್ ಜನರಿಗೆ ಇಷ್ಟವಾದರು. ಇಂಡಿಯನ್ ಟೀಮ್ ಗೆ ಅವರು ತಮ್ಮದೆ ಕೊಡುಗೆ ನೀಡಿದ್ದಾರೆ.

ಶಿಖರ್ ಧವನ್ ಐಪಿಎಲ್ ನಲ್ಲಿಯೂ ಹಿರಿಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಶಿಖರ ಧವನ್ ಇಂಡಿಯನ್ ಟೀಮ್ ಗೆ ಸೇರಲು ಪ್ರಯತ್ನ ಮಾಡುತ್ತಿರುತ್ತಾರೆ. ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಶಿಖರ್ ಧವನ್ ಅವರಿಗೆ ಆಯೇಷಾ ಮುಖರ್ಜಿ ಅವರು ಕಣ್ಣಿಗೆ ಬೀಳುತ್ತಾರೆ. ಆಯೇಷಾ ಅವರ ಸುಂದರವಾದ ಫೋಟೋಗಳನ್ನು ನೋಡಿದ ಶಿಖರ್ ಧವನ್ ಬೋಲ್ಡ್ ಆಗುತ್ತಾರೆ. ಶಿಖರ್ ಅವರು ಆಯೇಷಾ ಮುಖರ್ಜಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಶಿಖರ್ ಹಾಗೂ ಆಯೇಷಾ ಅವರಿಗೆ ಇಂಡಿಯನ್ ಟೀಮ್ ನ ಪ್ರಖ್ಯಾತ ಆಟಗಾರ ಹರ್ಬಜನ್ ಸಿಂಗ್ ಮ್ಯೂಚುವಲ್ ಫ್ರೆಂಡ್ ಆಗಿರುತ್ತಾರೆ. ಆಯೇಷಾ ಅವರು ಶಿಖರ್ ಅವರ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡುತ್ತಾರೆ, ನಂತರ ಇಬ್ಬರು ಮೆಸೇಜ್ ಮಾಡಿಕೊಳ್ಳುತ್ತಾರೆ. ಇಬ್ಬರು ಹರ್ಬಜನ್ ಅವರ ಹತ್ತಿರ ತಾವು ಪರಿಚಯ ಆಗಿರುವ ವಿಷಯವನ್ನು ಹೇಳುತ್ತಾರೆ.

ಶಿಖರ್ ಅವರು ಹರ್ಬಜನ್ ಅವರ ಹತ್ತಿರ ನಾನು ಆಯೇಷಾ ಅವರನ್ನು ಪ್ರೀತಿಸುತ್ತಿದ್ದೇನೆ ಈ ವಿಷಯವನ್ನು ಅವರಿಗೆ ತಿಳಿಸಿ ಎಂದು ಹೇಳುತ್ತಾರೆ. ಆಗ ಹರ್ಬಜನ್ ಆಯೇಷಾ ಅವರಿಗೆ ಮದುವೆಯಾಗಿರುವ ವಿಚಾರವೆಲ್ಲಾ ಶಿಖರ್ ಅವರಿಗೆ ಹೇಳುತ್ತಾರೆ. ಆಯೇಷಾ ಅವರು ಮೂಲತಃ ಭಾರತದವರೆ ಆದರೆ ಚಿಕ್ಕಂದಿನಿಂದಲೂ ಅವರ ತಂದೆ ತಾಯಿ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿರುತ್ತಾರೆ. ಆಯೇಷಾ ಅವರಿಗೆ ಸ್ಪೋರ್ಟ್ಸ್ ಕಡೆಗೆ ಒಲವು ಇತ್ತು ಕಿಕ್ ಬಾಕ್ಸಿಂಗ್ ನಲ್ಲಿ ಆಯೇಷಾ ಒಳ್ಳೆಯ ಹೆಸರು ಮಾಡುತ್ತಾರೆ. ಮನೆಯವರು ಆಯೇಷಾ ಅವರನ್ನು ಬಿಸಿನೆಸ್ ಮ್ಯಾನ್ ಜೊತೆ ಮದುವೆ ಮಾಡುತ್ತಾರೆ. ನಂತರ ಇಬ್ಬರು ಹೆಣ್ಣುಮಕ್ಕಳು ಹುಟ್ಟುತ್ತಾರೆ ಆದರೆ ಆಯೇಷಾ ಹಾಗೂ ಅವರ ಗಂಡನ ಸಂಬಂಧ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಕೆಲವು ವರ್ಷಗಳ ನಂತರ ಅವರ ಸಂಬಂಧ ಡಿವೋರ್ಸ್ ನಲ್ಲಿ ಅಂತ್ಯವಾಗುತ್ತದೆ.

ನಂತರ ಅವರು ತಮ್ಮ ಮಕ್ಕಳನ್ನು ಬೆಳೆಸುತ್ತಾ ಮದುವೆ ಬಗ್ಗೆ ಯೋಚನೆ ಮಾಡದೆ ತಮ್ಮ ಪಾಡಿಗೆ ಇದ್ದರು. ಆಯೇಷಾ ಅವರ ಹಳೆಯ ವಿಚಾರ ತಿಳಿದ ನಂತರವೂ ಶಿಖರ್ ಅವರು ಆಯೇಷಾ ಅವರನ್ನು ಪ್ರೀತಿಸುತ್ತೇನೆ ಎಂದು ಹಠ ಹಿಡಿದರು. ಈ ವಿಷಯವನ್ನು ಹರ್ಬಜನ್ ಆಯೇಷಾ ಅವರಿಗೆ ತಿಳಿಸಿದಾಗ ಮೊದಲು ಒಪ್ಪಿಕೊಳ್ಳುವುದಿಲ್ಲ ಆದರೆ ಶಿಖರ್ ಆಯೇಷಾ ಅವರ ಹಿಂದೆ ಹಿಂದೆ ಹೋಗಿ ಒಪ್ಪಿಸಲು ನೋಡುತ್ತಾರೆ. ಅಂತಿಮವಾಗಿ ಆಯೇಷಾ ಮದುವೆಗೆ ಒಪ್ಪುತ್ತಾರೆ. ಶಿಖರ್ ಅವರ ಮನೆಯಲ್ಲಿ ಈ ಮದುವೆಗೆ ವಿರೋಧ ವ್ಯಕ್ತವಾಗುತ್ತದೆ. ಶಿಖರ್ ಅವರ ತಂದೆ ಮದುವೆ ಆಗಬಾರದು ಎಂದು ಹಠ ಹಿಡಿಯುತ್ತಾರೆ. ಶಿಖರ್ ಅವರನ್ನು ಒಪ್ಪಿಸಿ ಆಯೇಷಾ ಅವರನ್ನು ಮದುವೆಯಾಗುತ್ತಾರೆ.

2009 ರಲ್ಲಿ ಎಂಗೇಜ್ಮೆಂಟ್ ಆಗಿ 2012 ರಲ್ಲಿ ಆಯೇಷಾ ಹಾಗೂ ಶಿಖರ್ ಅವರು ಮದುವೆಯಾಗುತ್ತಾರೆ, ಜೊತೆಗೆ ಆಯೇಷಾ ಅವರ ಇಬ್ಬರು ಹೆಣ್ಣುಮಕ್ಕಳನ್ನು ಶಿಖರ್ ತಾನು ನೋಡಿಕೊಳ್ಳುತ್ತೇನೆ ಎನ್ನುತ್ತಾರೆ. ನಂತರ ಅವರಿಗೆ ಒಬ್ಬ ಮಗ ಜನಿಸುತ್ತಾನೆ. ಇಬ್ಬರು ಹೆಣ್ಣುಮಕ್ಕಳು ಒಬ್ಬ ಮಗ ಗಂಡ ಹೆಂಡತಿ ಸುಂದರವಾದ ಸಂಸಾರ. ಆಗಾಗ ಟ್ರಿಪ್ ಹೋಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು. ಪ್ರಾರಂಭದಲ್ಲಿ ಅವರ ನಿರ್ಧಾರವನ್ನು ಎಲ್ಲರೂ ಹೊಗಳಿದರು ಆದರೆ ಈ ಸಂಬಂಧ ಹೆಚ್ಚು ದಿನ ಮುಂದುವರೆಯಲಿಲ್ಲ.

ನಂತರ ಇದ್ದಕಿದ್ದ ಹಾಗೆ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಅನ್ ಫಾಲೊ ಮಾಡಿಕೊಳ್ಳುತ್ತಾರೆ. ಇದು ಎಲ್ಲರಿಗೂ ಆಶ್ಚರ್ಯ ಉಂಟಾಗುತ್ತದೆ. ಡಿವೋರ್ಸ್ ಮಾಡಿಕೊಂಡರು ಎಂಬ ಗಾಳಿಸುದ್ದಿ ಹಬ್ಬುತ್ತದೆ. ಈ ವಿಷಯವಾಗಿ ಮೊದಲಿಗೆ ಸ್ಪಷ್ಟನೆ ಕೊಟ್ಟಿರಲಿಲ್ಲ ನಂತರ ಆಯೇಷಾ ಅವರು ಸ್ಪಷ್ಟನೆ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಾರೆ. ನನಗೆ ಒಂದು ಮದುವೆಯಾಗಿ ಡಿವೋರ್ಸ್ ಆದಾಗ ಮನಸ್ಸು ಒಡೆದುಹೋಗಿತ್ತು ಹಾಗೂ ಮತ್ತೆ ಮದುವೆಯಾಗಬಾರದು ಎಂದು ಅಂದುಕೊಂಡಿದ್ದೆ ಆದರೆ ಒಳ್ಳೆಯ ಮನಸ್ಸು ಎಂದು ಮತ್ತೆ ಮದುವೆಗೆ ಒಪ್ಪಿಗೆ ಕೊಟ್ಟಿದ್ದೆ.

ಈಗ ಎರಡನೆ ಮದುವೆಯೂ ಡಿವೋರ್ಸ್ ಆಯಿತು ಇದನ್ನು ಸಹಿಸಲು ಆಗುತ್ತಿಲ್ಲ, ನಾನು ಸಂಪೂರ್ಣವಾಗಿ ಬಿದ್ದುಹೋಗಿದ್ದೇನೆ ಎಂಬ ಮಾತನ್ನು ಹೇಳುತ್ತಾರೆ. ಸಣ್ಣ ಸಣ್ಣ ಭಿನ್ನಾಭಿಪ್ರಾಯ ದೊಡ್ಡ ಜಗಳಕ್ಕೆ ಕಾರಣವಾಯಿತು ಈ ಕಾರಣಕ್ಕೆ ನಾವು ಡಿವೋರ್ಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಆಯೇಷಾ ಅವರು ಹೇಳುತ್ತಾರೆ. ಶಿಖರ್ ಧವನ್ ಅವರ ಆ ಕ್ಷಣದ ಸಂತೋಷ ಜೀವನವನ್ನು ಹೇಗೆ ತಂದು ನಿಲ್ಲಿಸಿದೆ. ಶಿಖರ್ ಅವರ ಮಗನನ್ನು ಆಯೇಷಾ ಅವರು ನೋಡಿಕೊಳ್ಳುತ್ತಿದ್ದಾರೆ ಆಗಾಗ ಶಿಖರ್ ನೋಡಿಕೊಂಡು ಬರುತ್ತಾರೆ. ಹೀಗೆ ಒಂದು ಕ್ಷಣದ ಸಂತೋಷಕ್ಕೆ ಮಾರು ಹೋಗಿ ನಿರ್ಧಾರ ತೆಗೆದುಕೊಂಡು ಜೀವನವೆ ಅತಂತ್ರ ಆಗುತ್ತದೆ. ಶಿಖರ್ ಅವರ ಜೀವನದಿಂದ ಎಲ್ಲರೂ ಪಾಠ ಕಲಿಯಬಹುದು.

Leave A Reply

Your email address will not be published.