Ultimate magazine theme for WordPress.

ಚಿರು ಸಿನಿಮಾದ ಹಾಡಿಗೆ ಸಕತ್ ಸ್ಟೆಪ್ ಹಾಕಿದ ಅಮ್ಮ ಮಗನ ಕ್ಯೂಟ್ ವೀಡಿಯೊ

0 16

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್, ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಬಹಳ ದಿನಗಳ ನಂತರ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ಮೇಘನಾ. ಮೇಘನಾ ಅವರನ್ನು ತೆರೆಯ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟರು. ಅದಕ್ಕಿಂತ ದೊಡ್ಡ ಸರ್ಪ್ರೈಸ್ ಅನ್ನೇ ಮೇಘನಾ ನೀಡಿದ್ದಾರೆ. ನಟಿ ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆಯಾದ ಜೋಡಿಗಳು.

ನೂರಾರು ಕನಸು ಕಾಣುತ್ತಾ ಸುಖವಾಗಿ ಸಂಸಾರ ಮಾಡುತ್ತಿದ್ದರು ಆದರೆ ಒಂದೆರಡು ವರ್ಷಗಳ ಹಿಂದೆ, ಚಿರಂಜೀವಿ ಸರ್ಜಾ ಚಿರ ನಿದ್ರೆಗೆ ಜಾರಿದರು. ಹೌದು, ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಯಾವುದೇ ಪೂರ್ವ ಅನಾರೋಗ್ಯ ಇಲ್ಲದೇ ಕೇವಲ 39 ವರ್ಷ ವಯಸ್ಸಿಗೆ ಧಿಡೀರ್ ಹೃದಯಾಘಾತವಾಗಿ ಅಸುನೀಗಿದ್ದರು. ಈ ಘಟನೆ ನಡೆದಾಗ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ದರು. ಈ ಘಟನೆಯೂ ಕೂಡ ಚಿತ್ರರಂಗಕ್ಕೆ ಬಹುದೊಡ್ಡ ಅಘಾತವಾಗಿತ್ತು. ರಾಯನ್ ರಾಜ್ ಸರ್ಜಾ ಹುಟ್ಟಿದ ಮೇಲೆ ಮೇಘನಾ ರಾಜ್ ಅವರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರು. ನಟಿ ಮೇಘನಾ ರಾಜ್ ಇದೀಗ ಮಗನನ್ನೇ ಜೀವ ಎಂದು ನಂಬಿಕೊಂಡಿದ್ದಾರೆ.

ಮೇಘನಾ ಈಗ ಮಗನಿಗೋಸ್ಕರ ಕಿರುತೆರೆ ಹಾಗೂ ಸಿನಿಮಾ ಎಂದೆಲ್ಲಾ ಬ್ಯುಸಿಯಾಗಿದ್ದಾರೆ. ರಾಯನ್ ರಾಜ್ ಸರ್ಜಾನಿಗಾಗಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೇಘನಾ ರಾಜ್ ತೆರೆ ಮೇಲೆ ಕಾಣಿಸಿಕೊಂಡು ವರ್ಷಗಳೇ ಕಳೆದವು. ಗರ್ಭಿಣಿಯಾಗಿದ್ದ ಕಾರಣ ಚಿರು ಇದ್ದಾಗಲೇ ಸಿನಿಮಾ ದಿಂದ ಕೊಂಚ ದೂರ ಉಳಿದಿದ್ದರು.. ಆದರೆ ಆನಂತರ ಜೀವನದ ಸಾಕಷ್ಟು ಏರುಪೇರುಗಳ ನೋವಿನ ದಿನಗಳನ್ನು ದಾಟುವ ಸಮಯದಲ್ಲಿ ಬಹುಶಃ ಬಣ್ಣದ ಲೋಕದಿಂದ ಮೇಘನಾ ರಾಜ್ ಸಂಪೂರ್ಣವಾಗಿ ದೂರ ಉಳಿಯಬಹುದು ಎಂದುಕೊಂಡಿದ್ದರು ಫ್ಯಾನ್ಸ್‌. ಆದರೆ ಈ ನಡುವೆಯೇ ಸಿನಿಮಾನೇ ನಮ್ಮ ಜೀವನ. ಅದನ್ನು ಬಿಟ್ಟು ನಮಗೆ ನಮ್ಮ ಕುಟುಂಬಕ್ಕೆ ಬೇರೆ ಕೆಲಸವೇ ಗೊತ್ತಿಲ್ಲ. ಮತ್ತೆ ಬಣ್ಣ ಹಚ್ಚುವುದಾಗಿ ತಿಳಿಸಿದ್ದರು ಮೇಘನಾ ರಾಜ್.

ಅದರಂತೆ ಈಗ ಕಿರುತೆರೆಯ ಡ್ಯಾನ್ಸ್ ಶೋನಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಮೇಘನಾ ರಾಜ್ ಗೆ ಇದೀಗ ರಾಯನ್ ರಾಜ್ ಸರ್ಜಾನೇ ಪ್ರಪಂಚ. ಹೌದು, ಚಿರು ಯಾವಾಗಲೂ ಪ್ರತಿಯೊಂದು ಕ್ಷಣವನ್ನು ಸೆಲೆಬ್ರೇಶನ್ ಮಾಡುತ್ತಿದ್ದರು. ಹೀಗಾಗಿ ಮಗನ ಮುಖ್ಯವಾದ ಕ್ಷಣವನ್ನು ಸೆಲೆಬ್ರೇಶನ್ ಮಾಡುತ್ತಿರುತ್ತಾರೆ ಮೇಘನಾ ರಾಜ್. ಕಳೆದ ವರ್ಷ ಅಕ್ಟೋಬರ್ 21 ರಂದು ರಾಯನ್ ರಾಜ್ ಸರ್ಜಾರವರ ಮೊದಲ ವರ್ಷ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ಜೆ.ಪಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ, ಕಾಡಿನ ಥೀಮ್​ನಲ್ಲಿ ಬಹಳ ಗ್ರ್ಯಾಂಡ್ ಆಗಿ ಡೆಕೊರೇಷನ್ ಮಾಡಿ, ಬಲೂನ್‌ಗಳಿಂದ ಕೂಡಿರುವ ಆಟದ ಮೈದಾನವನ್ನು ಕ್ರಿಯೇಟ್ ಮಾಡಲಾಗಿತ್ತು.

ಇನ್ನು ಹಿರಿಯ ನಟಿ ಸುಧಾರಾಣಿ ಸೇರಿದಂತೆ ಕನ್ನಡ ಚಿತ್ರರಂಗದ ಸ್ನೇಹಿತರು ಹಾಗೂ ಕುಟುಂಬದವರು ರಾಯನ್ ರಾಜ್ ಸರ್ಜಾಗೆ ಶುಭಾಶಯ ‌ತಿಳಿಸಿದ್ದರು. ಮುದ್ದಿನ ಮಗ ರಾಯನ್ ರಾಜ್ ಸರ್ಜಾನ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ, ಅಭಿಮಾನಿಯೊಬ್ಬರು ಎಡಿಟ್ ಮಾಡಲಾಗಿರುವ ಮತ್ತೊಂದು ಫೋಟೋ ಸಖತ್ ವೈರಲ್ ಗಿದೆ. ಇತ್ತೀಚಿಗೆ ಅಪ್ಪು ಚಿರು ಹಾಗೂ ರಾಯನ್ ರಾಜ್ ಸರ್ಜಾ ಮೂವರೂ ಜೊತೆಯಾಗಿರುವ ಫೋಟೋವೊಂದನ್ನು ಅಭಿಮಾನಿಯೊಬ್ಬರು ಎಡಿಟ್ ಮಾಡಿದ್ದರು. ಅಂದಹಾಗೆ, ಅಭಿಮಾನಿಯೊಬ್ಬರು ಎಡಿಟ್ ಮಾಡಿದ್ದ ಫೋಟೋದಲ್ಲಿ ರಾಯನ್ ಅನ್ನು ಅಪ್ಪುರವರು ಎತ್ತಿಕೊಂಡಿದ್ದು, ಪಕ್ಕದಲ್ಲಿ ಚಿರು ನಿಂತುಕೊಂಡಿದ್ದರು.

ಈ ಫೋಟೋ ನೋಡಿದ ಮೇಘನಾ ರಾಜ್ ಅವರು ತುಂಬಾನೇ ಭಾವುಕರಾಗಿದ್ದು,’ಪತಿ ಚಿರು ಹಾಗೂ ಅಪ್ಪುರವರನ್ನು ನೆನಪಿಸಿಕೊಂಡಿದ್ದಾರೆ ಮೇಘನಾ ರಾಜ್. ಚಿರು ಹಾಗೂ ಅಪ್ಪು ಇಲ್ಲ ಎನ್ನುವ ನೋವು ಹೆಚ್ಚಾಗುತ್ತಿದೆ. ಆದರೆ ಅಭಿಮಾನಿಗಳು ಈ ರೀತಿ ಮಾಡುವ ಮೂಲಕ ನಟರ ನೆನಪುಗಳು ಹಸಿರಾಗಿ ಉಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ನನ್ನ ನಮಸ್ಕಾರಗಳು. ನಿಮ್ಮ ಪ್ರೀತಿ ನಮ್ಮ ಕುಟುಂಬದ ಮೇಲಿರಲಿ” ಎಂದಿದ್ದಾರೆ. ಅಂದಹಾಗೆ, ಕಿರುತೆರೆ ಸಿನಿಮಾ ಎಂದು ಬ್ಯುಸಿಯಾಗಿರುವ ಮೇಘನಾ ರಾಜ್, ಭಾನುವಾರ ಬಂತೆಂದರೆ ಸಾಕು ಮಗ ರಾಯನ್ ರಾಜ್ ಸರ್ಜಾ ಜೊತೆಗೆ ಸಮಯ ಕಳೆಯುತ್ತಿರುತ್ತಾರೆ.

ಚಿರು ಸಿನಿಮಾದ ಹಾಡುಗಳಿಗೆ ತಾಯಿ ಮಗ ಇಬ್ಬರೂ ಡ್ಯಾನ್ಸ್ ಮಾಡುತ್ತಿರುತ್ತಾರೆ. ತಂದೆಯ ಸಿನಿಮಾದ ಹಾಡು ಹಾಕಿದರೆ ಸಾಕು, ರಾಯನ್ ಡ್ಯಾನ್ಸ್ ಮಾಡಲು ಮೇಘನಾ ರಾಜ್ ರನ್ನು ಕರೆಯುತ್ತಾನೆ. ಒಟ್ಟಿನಲ್ಲಿ ಮೇಘನಾ ರಾಜ್ ಅವರು ರಾಯನ್ ರಾಜ್ ಸರ್ಜಾನ ಬದುಕಿನ ಬಗ್ಗೆ ಕನಸು ಕಂಡಿದ್ದಾರೆ. ಅಷ್ಟೇ ಅಲ್ಲದೇ, ತಂದೆಯಿಲ್ಲ ಎನ್ನುವ ಕೊರತೆ ಬಾರದಂತೆ ಸಾಕುತ್ತಿದ್ದಾರೆ.

Leave A Reply

Your email address will not be published.