ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಕಲಾವಿದರು ನಿರ್ಮಾಪಕರು ಹಾಗೂ ಖ್ಯಾತ ನಟರನ್ನು ಕಳೆದುಕೊಂಡಿದ್ದೇವೆ ಅವರ ನೆನೆಪು ಕೂಡ ಮಾಸಿಲ್ಲ ಅವರ ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ನೋವಿನಿಂದ ಆಚೆ ಬಂದಿಲ್ಲ ಹಾಗೂ ಇನ್ನೂ ಕೆಲ ಅಭಿಮಾನಿಗಳು ಅವರ ಭಾವಚಿತ್ರವನ್ನು ತಮ್ಮ ಮನೆಯಲ್ಲಿ ದೇವರು ಎಂದೇ ಪೂಜಿಸುತ್ತಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಟ ಪುನೀತ್ ರಾಜ್ ಕುಮಾರ್ ಮತ್ತು ಚಿರಂಜೀವಿ ಸರ್ಜಾ ಅವರ ಸಾವು ಇಂದಿಗೂ ನಂಬಲು ಅಸಾಧ್ಯವಾದ ಮಾತು.

ಚಿರು ಅವರು ಸತ್ತಾಗ ಅವರ ಪತ್ನಿ ಮೇಘನಾ ಚಿರಂಜೀವಿ ಅವರು ಚೊಚ್ಚಲ ಗರ್ಭಿಣಿ ಆಗಿದ್ದರು ಆದರೂ ಅಂತಹ ಸಮಯದಲ್ಲಿ ತಾಳ್ಮೆ ಸಹನೆ ಹಾಗೂ ದೈರ್ಯದಿಂದ ತನ್ನ ಕಂದನ ಆರೈಕೆ ಮಾಡುತ್ತ ನವಮಾಸಗಳ ನಂತರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಕೊನೆಗೆ ಅದ್ದೂರಿಯಾಗಿ ಮಗುವಿನ ನಾಮಕರಣ ಮಾಡಿ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇನ್ಸ್ಟಗ್ರಾಮ್ ಇನ್ನಿತರ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಗೆ ಅಪ್ಲೋಡ್ ಮಾಡಿದ್ದಾರೆ ಇದನ್ನು ನೋಡಿದ ಅಭಿಮಾನಿಗಳು ಅಂತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ ಇನ್ನು ಫೋಟೋ ಕೆಲವು ಅಭಿಮಾನಿಗಳು ಚಿರು ಅವರ ಜೊತೆಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಗೂ ಯೋಚನೆಗೆ ಅನುಗುಣವಾಗಿ ತಂದೆ ಮಗನ ಫೋಟೋ ಎಡಿಟ್ ಮಾಡಿದ್ದು ಅದನ್ನು ಹಂಚಿಕೊಂಡಿದ್ದು ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾರೆ

ಇತ್ತೀಚೆಗೆ ಮೇಘನಾ ರಾಜ್ ಅವರು ತಮ್ಮ ಮಗನೊಂದಿಗೆ ಬಹಳ ಸಮಯವನ್ನು ಕಳೆಯುತ್ತಾರೆ ಇದರಿಂದ ಅವರ ಮನಸ್ಸಿಗೆ ತುಂಬಾ ಖುಷಿ ಹಾಗೂ ನೆಮ್ಮದಿ ಇದೆ ಎಂದು ಹೇಳಿಕೊಂಡಿದ್ದಾರೆ ಇತ್ತೀಚೆಗೆ ಕೆಲವು ಜಾಹೀರಾತುಗಳಲ್ಲಿ ಮೇಘನಾ ರಾಜ್ ಕಾಣಿಸಿದ್ದು ಡಾನ್ಸ್ ಚಾಂಪಿಯನ್ ಶೋ ನ ಒಬ್ಬ ತೀರ್ಪುಗಾರರು ಆಗಿದ್ದು ತಮ್ಮ ಸೆಟ್ ಅಲ್ಲಿ ತುಂಬಾ ಖುಷಿಯಾಗಿ ಎಲ್ಲರೊಂದಿಗೆ ಬೆರೆಯುವ ಅವರು ಆಗಾಗ ತನ್ನ ತಾಯಿಗೆ ಕರೇ ಮಾಡಿ ಮಗನ ಜೊತೆಗೂ ಕೂಡ ಸಮಯ ಕಳೆಯುತ್ತಾರೆ ಇನ್ನು ಇತ್ತೀಚಿಗೆ ಎಲ್ಲರಿಗೂ ಗೊತ್ತಿರುವ ಸಂಗತಿ ಪುನೀತ ರಾಜ್ ಕುಮಾರ್ ಅವರ ಅಕಾಲಿಕ ಮರಣ ಇದರಿಂದ ಕನ್ನಡ ಇಂಡಸ್ಟ್ರಿಗೆ ತುಂಬಲಾಗದ ನಷ್ಟ ಆಗಿದ್ದು ಅವರನ್ನು ಕೂಡ ಎಲ್ಲರೂ ನೆನಪಿಸಿಕೊಳ್ಳುತ್ತಾರೆ

ಪುನೀತ್ ಅವರು ಎಂದಿಗೂ ಚಿರಸ್ಮರಣೀಯ ಇತ್ತೀಚೆಗೆ ಅಭಿಮಾನಿಯೊಬ್ಬರು ಪುನೀತ್ ಹಾಗೂ ಚಿರು ಮತ್ತು ರಾಯನ್ ಸರ್ಜಾ ಅವರ ಫೋಟೋವನ್ನು ಎಡಿಟ್ ಮಾಡಿದ್ದು ಅದರ ಚಿತ್ರಣ ತುಂಬಾನೇ ವೈರಲ್ ಆಗಿದೆ ಇದರಲ್ಲಿ ಅಪ್ಪು ಅವರು ರಾಯನ್ ಅವರನ್ನು ಎತ್ತಿಕೊಂಡು ಅವರ ಪಕ್ಕ ನಗು ಮೂಗದ ಚಿರು ನಗುತ್ತಾ ನಿಂತಿರುವ ಭಂಗಿ ಸುಂದರವಾಗಿ ಮೂಡಿಬಂದಿದ್ದು ಇದರ ಬಗ್ಗೆ ಮೇಘನಾ ರಾಜ್ ಅವರು ಚಿರು ಮತ್ತು ಅಪ್ಪು ಇಲ್ಲ ಎಂದು ನೆನಪಿಸಿಕೊಳ್ಳಲು ಕಷ್ಟಸಾಧ್ಯ ಆದರೆ ಅವರ ಅಭಿಮಾನಿಗಳು ಈ ರೀತಿಯ ಫೋಟೋಗಳ ಮೂಲಕ ಕಂಡಾಗ ಅವರ ನೆನಪುಗಳು ಹಸಿರಾಗಿ ಉಳಿಯುವ ಪ್ರಯತ್ನಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಎಂದು ಕಣ್ಣೀರು ಹಾಕಿದ್ದಾರೆ

ಇನ್ನು ನನ್ನ ಮಗನ ಬಲ ನುಡಿ ಹಾಗೂ ಆಟಗಳಿಂದ ನನಗೆ ಚಿರು ಸಾವಿನ ನೋವಿಂದ ಸ್ವಲ್ಪ ವಿರಾಮ ಎಂದು ಹೇಳಿಕೊಂಡಿದ್ದಾರೆ . ಹೀಗೆ ಅಭಿಮಾನಿಗಳು ಮೇಘನಾ ರಾಜ್ ಮತ್ತು ಅವರ ಮಗನ ಭವಿಷ್ಯದಲ್ಲಿ ಇವಾಗ ಕೊಡುವಷ್ಟು ಪ್ರೀತಿಯನ್ನು ಹಾಗೂ ಅಭಿಮಾನವನ್ನು ಸದಾ ನೀಡಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply

Your email address will not be published. Required fields are marked *