ಚಿರು ಅವರನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ ಮೇಘನಾ ರಾಜ್ ಅವರು ಜ್ಯೂನಿಯರ್ ಚಿರು ಅವರ ನಗುವನ್ನು ನೋಡುವ ಮೂಲಕ ತಮ್ಮ ದುಃಖವನ್ನು ಮರೆತಿದ್ದಾರೆ. ಇದೀಗ ಸದ್ಯದಲ್ಲಿಯೇ ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡುವ ಮೂಲಕ ನಾಮಕರಣ ಕಾರ್ಯವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಜೀವನದ ಘಟನೆಗಳ ಬಗ್ಗೆ ಕೆಲವು ಮಾತುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೇಘನಾ ರಾಜ್ ಸರ್ಜಾ ಅವರು ಸಂದರ್ಶನದಲ್ಲಿ ತಮಗೆ ಯಾವುದೆ ಹಬ್ಬ ಆದರೂ ಎಲ್ಲರೂ ಕೂಡಿ ಆಚರಿಸುವುದೆಂದರೆ ಇಷ್ಟವಾಗುತ್ತದೆ ಅಲ್ಲದೆ 11 ತಿಂಗಳ ನಂತರ ತಮ್ಮ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ನಾಮಕರಣ ಮಾಡಿರುವುದು ಮೇಘನಾ ಅವರಿಗೆ ವಿಶೇಷವಾಗಿದೆ. ಮೇಘನಾ ರಾಜ್ ಅವರು ತಮ್ಮ ಚಿಕ್ಕವಯಸ್ಸಿನಲ್ಲಿ ತನ್ನ ಅಜ್ಜಿಯ ಊರಿನಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸುತ್ತಿದ್ದರು.
ಮೇಘನಾ ರಾಜ್ ಅವರಿಗೆ ತಮ್ಮ ಮಗನಿಗೆ ಎಲ್ಲಾ ಹಬ್ಬಗಳು ಮತ್ತು ದೇವರ ಬಗ್ಗೆ ಗೊತ್ತಿರಬೇಕು ಎಂದು ಆಸೆ ಪಡುತ್ತಾರೆ. ಮೇಘನಾ ಅವರು ಇಂಡಸ್ಟ್ರಿಗೆ ಬಂದಾಗಿನಿಂದಲೂ ಅವರಿಗಿರುವ ಅಭಿಮಾನಿಗಳಿಗೆ ಮೇಘನಾ ಅವರು ತಮ್ಮ ಮಗನಿಗೆ ಯಾವ ಹೆಸರನ್ನು ಇಡುತ್ತಾರೆ ಎಂಬ ಕುತೂಹಲವಿತ್ತು. ಮೇಘನಾ ಅವರಿಗೆ ಮತ್ತು ಚಿರು ಅವರಿಗೆ ತಮ್ಮ ಮಗುವಿಗೆ ಸಂಸ್ಕೃತ ಭಾಷೆಯ ಹೆಸರನ್ನು ಇಡಬೇಕು ಎಂಬ ಆಸೆ ಇತ್ತು ಅದರಂತೆ ರಾಯನ್ ಎಂದು ಹೆಸರಿಟ್ಟಿದ್ದಾರೆ. ರಾಯನ್ ಹೆಸರಿನ ಅರ್ಥ ರಾಜಕುಮಾರ.
ಕೆಲವು ಕಡೆ ರಾಯನ್ ಎಂಬ ಹೆಸರು ಸರ್ಜಾ ಕುಟುಂಬದವರಿಗೆ ಇಷ್ಟವಾಗಲಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು ಆದರೆ ಮೇಘನಾ ಅವರು ಈ ಹೆಸರಿನ ಬಗ್ಗೆ ಸರ್ಜಾ ಕುಟುಂಬದವರೊಂದಿಗೆ ಚರ್ಚಿಸಿದಾಗ ಹೆಸರು ಉತ್ತಮವಾಗಿದೆ ಎಂಬ ಅಭಿಪ್ರಾಯ ಬಂದಿತ್ತು. ಜ್ಯೂನಿಯರ್ ಚಿರು ನಾಮಕರಣವನ್ನು ಚರ್ಚ್ ನಲ್ಲಿ ಮತ್ತು ಹಿಂದೂ ಸಂಪ್ರದಾಯದಂತೆ ನಡೆದಿರುವುದರಿಂದ ವಿವಾದ ಉಂಟಾಯಿತು ಇದನ್ನು ಮೇಘನಾ ಅವರು ನಿರೀಕ್ಷೆ ಮಾಡಿರಲಿಲ್ಲ. ಈ ವಿವಾದದ ಬಗ್ಗೆ ಮೇಘನಾ ಅವರು ಬೇಸರ ವ್ಯಕ್ತಪಡಿಸಿದರು. ಕರ್ನಾಟಕದ ಜನತೆ ಹಾಗೂ ದಕ್ಷಿಣ ಭಾರತದ ಜನರು ಮೇಘನಾ ಅವರಿಗೆ ಪ್ರೀತಿ ವಿಶ್ವಾಸವನ್ನು ತೋರಿಸಿದ್ದಾರೆ.
ಜೂನ್ 7, 2020 ರಂದು ವೀಕೆಂಡ್ ಸಮಯ ಮೇಘನಾ ಅವರ ತಂದೆ ಚಿರು ಅವರ ಮನೆಗೆ ಬಂದಿದ್ದರು. ಮಧ್ಯಾಹ್ನದ ಸಮಯವಾಗಿತ್ತು ಚಿರು ಅವರು ಶನಿವಾರ ತಡವಾಗಿ ಮಲಗಿದ್ದರಿಂದ ಏಳಲಿಲ್ಲ. ಮೇಘನಾ ಅವರ ತಂದೆ ನಾಯಿಯನ್ನು ಜೊತೆಗೆ ಕರೆತಂದಿದ್ದರು ನಾಯಿ ಬಹಳ ಬೊಗಳುತ್ತಿದ್ದುದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಚಿರು ಅವರು ಏಳುವುದಕ್ಕಿಂತ ಮೊದಲೆ ಮೇಘನಾ ಅವರ ತಂದೆ ಮನೆಗೆ ಹೋದರು.
ಸುಂದರರಾಜ್ ಅವರನ್ನು ಕಳುಹಿಸಿಕೊಡಲು ಮೇಘನಾ, ಧ್ರುವ, ಪ್ರೇರಣಾ ಅವರು ಮನೆ ಹೊರಗೆ ಹೋಗಿ ಬರುವಷ್ಟರಲ್ಲಿ ಚಿರು ಅವರು ಎದ್ದು ಸೋಫಾ ಮೇಲೆ ಬಂದು ಕುಳಿತುಕೊಳ್ಳುವ ಸಮಯದಲ್ಲಿ ಅಲ್ಲಿಯೆ ಎಚ್ಚರ ತಪ್ಪಿದ್ದಾರೆ ನಂತರ ಪ್ರಜ್ಞೆ ಬಂದು ಚಿರು ಅವರು ಮೇಘನಾ ಅವರಿಗೆ ಕೊನೆಯದಾಗಿ ನನಗೇನು ಆಗಿಲ್ಲ, ನೀನು ಟೆನ್ಶನ್ ತಗೋಬೇಡ ಎಂದು ಹೇಳಿದ್ದರು. ತಕ್ಷಣ ಚಿರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆಸ್ಪತ್ರೆಯವರೆಗೂ ಹೋಗುವವರೆಗೂ ಅವರು ಮಾತನಾಡುತ್ತಿದ್ದರು ಆದರೆ ಆಸ್ಪತ್ರೆಗೆ ಹೋದ ನಂತರ ಅವರು ಮರಣ ಹೊಂದಿದರು. ಚಿರು ಅವರ ಸಾವಿನ ಸಮಯದಲ್ಲಿ ಮೇಘನಾ ಅವರು ವೈದ್ಯರ ಸಲಹೆಯೊಂದಿಗೆ ತಮ್ಮ ಮಗುವಿನ ಆರೋಗ್ಯವನ್ನು ಕಾಪಾಡಿಕೊಂಡರು.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430