ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ತಾವು ಹೆಚ್ಚು ಹೆಚ್ಚು ಓದಬೇಕೆಂಬ ಆಸೆ ಇರುತ್ತದೆ ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದಾಗ ತಮ್ಮ ಓದನ್ನು ಅರ್ಧದಲ್ಲಿ ನಿಲ್ಲಿಸುತ್ತಾರೆ ಅವರಿಗೆ ಉನ್ನತಮಟ್ಟದ ಶಿಕ್ಷಣವಲ್ಲ ಪಡೆದುಕೊಳ್ಳಲು ಕಷ್ಟವಾಗುತ್ತದೆ ಆದರೆ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವುದು ಸಹಾಯ ಮಾಡುವ ಉದ್ದೇಶದಿಂದ ಹಲವಾರು ವಿದ್ಯಾರ್ಥಿವೇತನ ಒದಗಿಸುವ ಯೋಜನೆಗಳನ್ನು ಜಾರಿಗೆ ಬಂದಿದೆ ಬಂದಿದೆ ಅದರಲ್ಲಿ ನಾವೆಂದು ಹೊಸದಾಗಿ ಮುಖ್ಯಮಂತ್ರಿಗಳು ಜಾರಿಗೆ ತಂದಿರುವ ರೈತ ವಿದ್ಯಾರ್ಥಿ ನಿಧಿ ಯೋಚನೆಯಿಂದ ಯಾವ ರೀತಿಯ ಶಿಷ್ಯವೇತನವನ್ನು ಪಡೆದುಕೊಳ್ಳಬಹುದು ಮತ್ತು ಅದಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾರು ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ನಿಮಗೆಲ್ಲರಿಗೂ ತಿಳಿದಿರಬಹುದು ಇದೇ ತಿಂಗಳು ಅಂದರೆ ಸೆಪ್ಟೆಂಬರ್ ಐದನೇ ತಾರೀಕಿನಂದು ನಮ್ಮ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ್ ಬೊಮ್ಮಾಯಿ ಅವರು ಹಾಗೂ ಕೃಷಿ ಸಚಿವರಾದ ಬಿಸಿ ಪಾಟೀಲ್ ಅವರು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಎಂಬ ಹೊಸ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ರೈತರ ಮಕ್ಕಳ ಶಿಕ್ಷಣಕ್ಕಾಗಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿರುವ ವಿಷಯ ಎಲ್ಲರಿಗೂ ತಿಳಿದಿದೆ. ಹಾಗಾದರೆ ರೈತರ ಮಕ್ಕಳು ಈ ಒಂದು ರೈತ ವಿದ್ಯಾ ನಿಧಿ ಯೋಜನೆಯ ಶಿಷ್ಯವೇತನವನ್ನು ಪಡೆಯಲು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಈ ಶಿಷ್ಯವೇತನವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಒಂದು ರೈತ ವಿದ್ಯಾನಿಧಿ ಯೋಜನೆಯ ಶಿಷ್ಯವೇತನವನ್ನು ಪಡೆಯಲು ಯಾವ ವಿದ್ಯಾರ್ಥಿಗಳು ಅರ್ಹರಿರುತ್ತಾರೆ ಎಂಬುದನ್ನು ನೋಡುವುದಾದರೆ ಹತ್ತನೇ ತರಗತಿ ಮುಗಿಸಿದ ನಂತರ ಯಾವುದೇ ಒಂದು ಕೋರ್ಸ್ಗೆ ಅಂದರೆ ಪಿಯುಸಿ, ಐಟಿಐ, ಡಿಪ್ಲೋಮಾ, ಬಿಎ, ಬಿಕಾಂ, ಬಿಎಸ್ಸಿ, ಎಲ್ ಎಲ್ ಬೀ, ಪ್ಯಾರಾಮೆಡಿಕಲ್ ಇತ್ಯಾದಿ ಯಾವುದೇ ಒಂದು ಕೋರ್ಸ್ಗೆ ಸೇರಿರುವಂತಹ ವಿದ್ಯಾರ್ಥಿಗಳು ಅವರು ರೈತರ ಮಕ್ಕಳ ಆಗಿರಬೇಕು ಮತ್ತು ಅವರು ಓದುತ್ತಿರುವಂತಹ ಶಿಕ್ಷಣ ಸಂಸ್ಥೆಯು ನಮ್ಮ ಕರ್ನಾಟಕದಲ್ಲಿ ನೊಂದಣಿ ಆಗಿರಬೇಕು ಅಂದರೆ ಅವರು ಓದುತ್ತಿರುವಂತಹ ಕಾಲೇಜ್ ಡಿಗ್ರಿ ಕಾಲೇಜ್ ಅಥವಾ ಪಿಜಿ ಕಾಲೇಜ್ ಆಗಿರಬಹುದು ಯಾವುದೇ ಕೋರ್ಸಿಗೆ ಓದುತ್ತಿದ್ದರು ಅವರು ಓದುತ್ತಿರುವ ಶಿಕ್ಷಣ ಸಂಸ್ಥೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನೋಂದಣಿಯಾಗಿರಬೇಕು ಜೊತೆಗೆ ಅವರು ರೈತರ ಮಕ್ಕಳು ಆಗಿರಬೇಕು ಅವರ ತಂದೆ ಅಥವಾ ತಾಯಿ ಕರ್ನಾಟಕದಲ್ಲಿ ಅವರ ಹೆಸರಿನಲ್ಲಿ ಕೃಷಿಭೂಮಿಯನ್ನು ಹೊಂದಿರಬೇಕು ಒಂದು ವೇಳೆ ಅವರ ತಂದೆ ತಾಯಿ ಕೃಷಿಭೂಮಿಯನ್ನು ಹೊಂದಿಲ್ಲದಿದ್ದರೆ ಅವರ ಸಂಬಂಧಿಕರು ಕೃಷಿಭೂಮಿಯನ್ನು ಹೊಂದಿರಬೇಕಾಗುತ್ತದೆ.

ಇನ್ನೊಂದು ಮುಖ್ಯ ವಿಷಯವೇನೆಂದರೆ ನೀವು ಈಗಾಗಲೇ ಮೆರಿಟ್ ಸ್ಕಾಲರ್ಶಿಪ್ ಅರ್ಹತಾ ಪರೀಕ್ಷೆಯ ಸ್ಕಾಲರ್ಶಿಪ್ ಶೈಕ್ಷಣಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶಿಷ್ಯವೇತನವನ್ನು ಪಡೆದುಕೊಂಡಿರುವಂತಹ ರೈತರ ಮಕ್ಕಳು ಕೂಡ ರೈತ ವಿದ್ಯಾನಿಧಿ ಯೋಜನೆಯ ಶಿಷ್ಯವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ನೀವು ಓದುತ್ತಿರುವ ಕೋರ್ಸ್ಗೆ ಹುಡುಗರು ಮತ್ತು ಹುಡುಗಿಯರಿಗೆ ಯಾವ ರೀತಿಯ ಶಿಷ್ಯವೇತನ ಇರುತ್ತದೆ ಎಂಬುದನ್ನು ನೋಡುವುದಾದರೆ ನೀವು ಎಸೆಸೆಲ್ಸಿ ಆದನಂತರ ಪಿಯುಸಿ ಐಟಿಐ ಅಥವಾ ಡಿಪ್ಲೋಮೋ ಕೋರ್ಸುಗಳಿಗೆ ಸೇರಿಕೊಂಡಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಹುಡುಗರಿಗೆ ಎರಡು ಸಾವಿರದ ಐದುನೂರು ಹುಡುಗಿಯರಿಗೆ ಮೂರುಸಾವಿರ ಶಿಷ್ಯವೇತನ ಸಿಗುತ್ತದೆ. ನೀವು ಮೂರುವರ್ಷದ ಡಿಗ್ರಿ ಓದುತ್ತಿದ್ದರೆ ಅಂಥವರಿಗೆ ಹುಡುಗರಿಗೆ ಐದು ಸಾವಿರ ಮತ್ತು ಹುಡುಗಿಯರಿಗೆ ಐದುಸಾವಿರದ ಐದುನೂರು ಶಿಷ್ಯವೇತನ ಸಿಗುತ್ತದೆ. ಇನ್ನು ನೀವು ಎಲ್ ಎಲ್ ಬೀ ಪ್ಯಾರಮೆಡಿಕಲ್ ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸುಗಳಿಗೆ ಸೇರಿದ್ದಲ್ಲಿ ಹುಡುಗರಿಗೆ ಎಳುಸಾವಿರದ ಐದು ನೂರು ಮತ್ತು ಹುಡುಗಿಯರಿಗೆ ಎಂಟು ಸಾವಿರ ರೂಪಾಯಿ ಶಿಷ್ಯವೇತನ ಸಿಗುತ್ತದೆ ನೀವು ಎಂಬಿಬಿಎಸ್ ಬಿಟೆಕ್ ಇಂಜಿನಿಯರಿಂಗ್ ಇತ್ಯಾದಿ ಸ್ನಾತಕೋತ್ತರ ಕೋರ್ಸುಗಳನ್ನು ಓದುತ್ತಿದ್ದರೆ ಹುಡುಗರಿಗೆ ಹತ್ತು ಸಾವಿರ ಮತ್ತು ಹುಡುಗಿಯರು ಹನ್ನೊಂದುಸಾವಿರ ಶಿಷ್ಯವೇತನವನ್ನು ಪಡೆಯಬಹುದು.

ನೀವು ರೈತ ವಿದ್ಯಾನಿಧಿಯ ಶಿಷ್ಯವೇತನವನ್ನು ಪಡೆಯಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ನೋಡುವುದಾದರೆ ರೈತರ ಕೃಷಿಭೂಮಿಯ ಆರ್ಟಿಸಿ ರೈತರ ಆಧಾರ ಪ್ರತಿ ಜೊತೆಗೆ ರೈತರ ಬ್ಯಾಂಕ್ ಪಾಸ್ ಬುಕ್ ರೈತರ ಪಾಸ್ಪೋರ್ಟ್ ಸೈಜ್ ಫೋಟೋ ರೇಷನ್ ಕಾರ್ಡ್ ಜೆರಾಕ್ಸ್ ಮತ್ತು ವಿದ್ಯಾರ್ಥಿಗಳ ಐಡಿ ಪ್ರೂಫ್ ಬೇಕಾಗುತ್ತದೆ ಇದಾದನಂತರ ವಿದ್ಯಾರ್ಥಿಯ ಆಧಾರ್ ಪ್ರತಿ ವಿದ್ಯಾರ್ಥಿಯ ಮೊಬೈಲ್ ನಂಬರ್ ಜೊತೆಗೆ ವಿದ್ಯಾರ್ಥಿಯೂ ಓದುತ್ತಿರುವ ಕಾಲೇಜಿನ ವಿಳಾಸ ಮತ್ತು ತರಗತಿಯ ಬಗ್ಗೆ ದಾಖಲೆಗಳು ಬೇಕಾಗುತ್ತದೆ ಜೊತೆಗೆ ರೈತರ ಎಫ್ ಐ ಡಿ ಅಂದರೆ ರೈತರ ನೋಂದಣಿ ಸಂಖ್ಯೆ ಬೇಕಾಗುತ್ತದೆ.

ಈ ಎಲ್ಲಾ ದಾಖಲೆಗಳೊಂದಿಗೆ ನೀವು ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯ ವೆಬ್ ಸೈಟ್ ಅನ್ನು ಓಪನ್ ಮಾಡಿ ಅಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಮಾಹಿತಿ ಕಾಣಿಸುತ್ತದೆ. ಅಲ್ಲಿ ನೀವು ಹತ್ತನೇ ತರಗತಿ ಪಾಸಗಿರುವ ಅಂಕಪಟ್ಟಿ ಅಥವಾ ಟಿಸಿ ಇದ್ದರೆ ಅದನ್ನು ತೆಗೆದುಕೊಳ್ಳಬೇಕು ವಿಧ್ಯಾರ್ಥಿ ಅಥವಾ ಪೋಷಕರ ಆಧಾರ ಸಂಖ್ಯೆ ಬೇಕಾಗುತ್ತದೆ. ಮತ್ತು ವಿದ್ಯಾರ್ಥಿಗಳ ಮೊಬೈಲ್ ನಂಬರ್ ಮತ್ತು ನೀವು ಯಾವ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೀರಿ ಆ ಕಾಲೇಜ್ ನ ಒಂದು ದಾಖಲೆ ಬೇಕಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳ ಅಥವಾ ಅವರ ಸಂಬಂಧಿಕರ ಕ್ರೂಡ್ಸ್ ಗುರುತಿನ ಸಂಖ್ಯೆ ಬೇಕಾಗುತ್ತದೆ. ಇನ್ನು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಶಿಷ್ಯವೇತನವನ್ನು ಪಡೆದುಕೊಳ್ಳಲು ಇದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ನೋಡಿದಿರಲ್ಲ ಸ್ನೇಹಿತರೇ ಸರ್ಕಾರ ಬಡಮಕ್ಕಳ ಓದಿಗಾಗಿ ಇಷ್ಟೆಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಎಂಬ ಯೋಜನೆಯನ್ನು ತಂದಿದೆ ಇದು ಕೂಡ ಮಕ್ಕಳಿಗೆ ತುಂಬಾ ಸಹಾಯಕವಾಗುತ್ತದೆ. ನೀವು ರೈತರ ಮಕ್ಕಳಾಗಿದ್ದರೆ ಈ ಒಂದು ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ ನಿಮ್ಮ ಸ್ನೇಹಿತರಿಗೂ ಇದರ ಮಾಹಿತಿಯನ್ನು ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *