ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆ ಆದ 2 ವರ್ಷಕ್ಕೆ ಚಿರು ಅವರು ಮರಣ ಹೊಂದಿದರು. ಚಿರು ಅವರು ಸತ್ತಾಗ 6 ತಿಂಗಳ ಪ್ರಗ್ನೆಂಟ್ ಆಗಿದ್ದರು. ಆದ್ದರಿಂದ ಮೇಘನಾ ರಾಜ್ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೇಘನಾ ರಾಜ್‌ರವರು ಭಾರತೀಯ ಚಿತ್ರರಂಗದ ನಟಿ. ಇವರು ಕನ್ನಡ, ಮಳಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಬೆಂಡು ಅಪ್ಪರಾವ್ ಆರ್.ಎಂ.ಪಿ ಇವರ ಮೊದಲ ಚಲನಚಿತ್ರ. ಈ ಚಲನಚಿತ್ರ ತೆಲುಗು ಭಾಷೆಯ ಚಿತ್ರವಾಗಿದ್ದು 2009ರಲ್ಲಿ ತೆರೆಕಂಡಿತ್ತು. ಹಾಗೆಯೇ ನಂತರದಲ್ಲಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದರು. ಹಾಗೆಯೇ ನಟನೆಯ ಮಧ್ಯದಲ್ಲಿ ಕನ್ನಡ ಚಿತ್ರರಂಗದ ನಟನಾದ ಚಿರಂಜೀವಿ ಸರ್ಜಾ ಅವರ ನಡುವೆ ಪ್ರೀತಿ ಹುಟ್ಟಿತು. ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದರು.
ಹಾಗೆಯೇ ಕನ್ನಡದ ಆಟಗಾರ ಸಿನೆಮಾದಲ್ಲಿ ಇಬ್ಬರೂ ಒಟ್ಟಾರೆಯಾಗಿ ನಟನೆ ಮಾಡಿದ್ದಾರೆ. ಹಾಗೆಯೇ ನಂತರದಲ್ಲಿ 2017ರ ಅಕ್ಟೋಬರ್ 22ರಂದು ಕನ್ನಡ ಚಲನವಚಿತ್ರ ನಟ ಚಿರಂಜೀವಿ ಸರ್ಜಾರವರೊಡನೆ ನಿಶ್ಚಿತಾರ್ಥವನ್ನು ಮಾಡಿಕೊಂಡರು. 2018 ಮೇ 2ರಂದು ಅವರೊಡನೆ ವಿವಾಹವಾದರು. ಹಾಗೆಯೇ ಮದುವೆಯ ನಂತರದಲ್ಲಿ ಬಹಳ ಖುಷಿಯಿಂದ ಇವರಿಬ್ಬರೂ ಜೀವನವನ್ನು ನಡೆಸುತ್ತಿದ್ದರು. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಪ್ರೀತಿಯ ಸಂಕೇತವಾಗಿ ಈಗ ಅವರಿಗೆ ಮಗು ಹುಟ್ಟಿ ಸುಮಾರು ಏಳು ತಿಂಗಳು ಆಗಿದೆ.
ಸಾಮಾನ್ಯವಾಗಿ ಪ್ರತಿಯೊಂದು ಹೆಣ್ಣಿಗೂ ಮಗು ಹುಟ್ಟಿದ ಸ್ವಲ್ಪ ತಿಂಗಳುಗಳ ಕಾಲ ಕೂದಲು ಉದುರುತ್ತದೆ. ಹಾಗೆಯೇ ಮೇಘನಾ ರಾಜ್ ಅವರಿಗೆ ಕೂದಲು ಉದುರುತ್ತಿತ್ತು. ಆಗ ಅವರು ಮದರ್ ಸ್ಪರ್ಶ ಎಂಬ ಕಿಟ್ ನ್ನು ಬಳಕೆ ಮಾಡಿದರು. ಇದರಲ್ಲಿ ಎಣ್ಣೆ ಮತ್ತು ಪುಡಿ ಸಿಗುತ್ತದೆ. ಪುಡಿಯನ್ನು ತಲೆಸ್ನಾನ ಮಾಡುವ ಮೊದಲು ಮೊಸರು ಹಾಕಿ ಹಚ್ಚಬೇಕು. ಇದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ. ಈ ಸಲಹೆಯನ್ನು ನಟಿ ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಲಹೆಯನ್ನು ಎಷ್ಟೋ ಹೆಂಗಸರು ಪ್ರಯೋಜನ ಪಡೆದುಕೊಳ್ಳಬಹುದು.