Ultimate magazine theme for WordPress.

ಯಾವ ವಯಸ್ಸಿಗೆ ದೇಹದ ತೂಕ ಎಷ್ಟಿರಬೇಕು? ಉಪಯುಕ್ತ ಮಾಹಿತಿ

0 62

Health tips: ಇಂದಿನ ಯುವಕರು, ಯುವತಿಯರು ಸಾಮಾನ್ಯವಾಗಿ ಒಬೆಸಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂದಿನ ಜೀವನ ಶೈಲಿಯು ಒಬೆಸಿಟಿ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಒಬೆಸಿಟಿ ಸಮಸ್ಯೆಯನ್ನು ಉಚಿತವಾಗಿ ಒಬೆಸಿಟಿ ಕ್ಲಬ್ ನಲ್ಲಿ ವೈದ್ಯರ ಸಲಹೆಯ ಮೂಲಕ ಪರಿಹರಿಸಿಕೊಳ್ಳಬಹುದು. ಹಾಗಾದರೆ ಒಬೆಸಿಟಿ ಕ್ಲಬ್ ಗೆ ಸೇರುವುದು ಹೇಗೆ, ಕ್ಲಬ್ ನ ಗುರಿ ಉದ್ದೇಶಗಳನ್ನು ಈ ಲೇಖನದಲ್ಲಿ ನೋಡೋಣ.

ಬಹಳಷ್ಟು ಜನರು ಒಬೆಸಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೊಜ್ಜಿನಿಂದಾಗಿ ಹಲವು ಖಾಯಿಲೆಗಳು ಆವರಿಸುತ್ತದೆ. ಬೊಜ್ಜಿನಿಂದ ಡಯಾಬಿಟೀಸ್, ಬಿಪಿ ಬರುತ್ತದೆ ಅಲ್ಲದೆ ಮಹಿಳೆಯರಲ್ಲಿ ಬಂಜೆತನ, ಮುಟ್ಟಿನ ಸಮಸ್ಯೆ ಪ್ರಾರಂಭವಾಗುತ್ತದೆ. ಬೊಜ್ಜನ್ನು ನಿವಾರಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಮ್ಮ ಎತ್ತರಕ್ಕೆ ಸರಿಯಾಗಿ ತೂಕವನ್ನು ಹೊಂದಿರಬೇಕು ಆಗ ಆರೋಗ್ಯವಾಗಿರಲು ಸಾಧ್ಯ. ತೂಕವನ್ನು ಕಡಿಮೆ ಮಾಡಿಕೊಂಡು ಅದನ್ನು ಮೆಂಟೇನ್ ಮಾಡಬೇಕು ಅದಕ್ಕೆ ಸರಿಯಾದ ಆಹಾರ ಕ್ರಮವನ್ನು ಅನುಸರಿಸಬೇಕು. ಆರೋಗ್ಯವಾಗಿ ತೂಕವನ್ನು ಇಳಿಸಿಕೊಳ್ಳಲು ಶಿರಸಿಯ ನಿಸರ್ಗಮನೆ ಆಸ್ಪತ್ರೆಯ ವೈದ್ಯರ ಬಳಗವು ನಿಸರ್ಗಮನೆ ಒಬೆಸಿಟಿ ಕ್ಲಬ್ ಅನ್ನು ಪ್ರಾರಂಭಿಸಿದೆ. ಈ ಕ್ಲಬ್ ಗೆ ಸೇರಬೇಕೆಂದರೆ ನಿಸರ್ಗಮನೆ ಆಸ್ಪತ್ರೆಯ ನಂಬರ್ ಗೆ ಕರೆ ಮಾಡಿ ನಿಸರ್ಗ ಮನೆ ಒಬೆಸಿಟಿ ಕ್ಲಬ್ ನ ಮೆಂಬರ್ ಆಗಬೇಕೆಂದು ಹೇಳಿದರೆ ವೈದ್ಯರು ನಿಮ್ಮ ನಂಬರ್ ಗೆ ಕರೆ ಮಾಡಿ ನಿಮ್ಮ ಸಮಸ್ಯೆಯನ್ನು ಕೇಳುತ್ತಾರೆ. ಈ ಕ್ಲಬ್ ನಲ್ಲಿ ವೈಜ್ಞಾನಿಕವಾಗಿ ಹಾಗೂ ಸಂಶೋಧನೆಯಿಂದ ಕಂಡುಬಂದ ವಿಷಯಗಳನ್ನು ಮಾತ್ರ ತಿಳಿಸಲಾಗುತ್ತದೆ.

ನಿಸರ್ಗಮನೆ ಒಬೆಸಿಟಿ ಕ್ಲಬ್ ಸೇರಿಕೊಂಡ ನಂತರ ಉಚಿತವಾಗಿ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ. ನಂತರ ಪ್ರತಿ ವಾರ ಒಬೆಸಿಟಿ ಬಗ್ಗೆ ಸೆಮಿನಾರ್ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಸಮಸ್ಯೆಗೆ ತಕ್ಕಂತೆ ಚಿಕಿತ್ಸೆ ಮತ್ತು ಸಲಹೆಯನ್ನು ಕೊಡಲಾಗುತ್ತದೆ. ಈ ಕ್ಲಬ್ ನಲ್ಲಿ ಅನುಭವಸ್ಥ ವೈದ್ಯರು ಇರುತ್ತಾರೆ. ಈ ಕ್ಲಬ್ ತನ್ನದೆ ಆದ ಉದ್ದೇಶಗಳನ್ನು ಹೊಂದಿದೆ. ನಮ್ಮ ಸಮಾಜವನ್ನು ಆರೋಗ್ಯದ ಕಡೆಗೆ ಕೊಂಡೊಯ್ಯಬೇಕು ಎಂಬ ಉದ್ದೇಶವನ್ನು ಈ ಕ್ಲಬ್ ಹೊಂದಿದೆ. ತಪ್ಪಾದ ಜೀವನಶೈಲಿ ಬೊಜ್ಜಿಗೆ ಕಾರಣವಾಗಿದೆ ಆದ್ದರಿಂದ ಸರಿಯಾದ ಜೀವನ ಶೈಲಿ ಹಾಗೂ ಆಹಾರ ಕ್ರಮದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿಕೊಡುವ ಉದ್ದೇಶವನ್ನು ಹೊಂದಿದೆ. ಅತಿಯಾದ ತೂಕದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಡುವ ಉದ್ದೇಶವನ್ನು ಹೊಂದಿದೆ. ನಿಸರ್ಗಮನೆ ಒಬೆಸಿಟಿ ಕ್ಲಬ್ ತನ್ನದೆ ಆದ ಕೆಲವು ಗುರಿಯನ್ನು ಹೊಂದಿದೆ. ಈ ಕ್ಲಬ್ ಒಬೆಸಿಟಿ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ. ಈ ಕ್ಲಬ್ ಬೊಜ್ಜನ್ನು ಕಡಿಮೆ ಮಾಡುವುದಲ್ಲದೆ ಬೊಜ್ಜಿನಿಂದ ಬಂದಿರುವ ಸಮಸ್ಯೆಯನ್ನು ಕೂಡ ನಿವಾರಣೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರೂ ಆರೋಗ್ಯಯುತ ಗುಣಮಟ್ಟ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.

ಈ ಕ್ಲಬ್ ಅನ್ನು ಸೇರಿಕೊಂಡರೆ ವೈದ್ಯರು ನಿಮ್ಮ ಜೀವನ ಶೈಲಿಗೆ ಅನುಗುಣವಾಗಿ ಡಯಟ್ ಪ್ಲಾನ್ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಯಾವ ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿಸುತ್ತಾರೆ. ವಾರಕ್ಕೆ ಒಮ್ಮೆ ವೈದ್ಯರನ್ನು ನೀವು ಸಂಪರ್ಕಿಸಬಹುದು ನಿಮ್ಮ ಅನುಮಾನಗಳನ್ನು ಕೇಳಿ ಉತ್ತರ ಪಡೆಯಬಹುದು. ಆಹಾರೌಷಧಿ ಅವಶ್ಯಕತೆ ಇದ್ದವರಿಗೆ ಅದರ ಬಗ್ಗೆ ಮಾಹಿತಿಯನ್ನು ಕೊಡಲಾಗುತ್ತದೆ. ತೂಕ ಕಡಿಮೆ ಆಗುವವರೆಗೂ ವೈದ್ಯರು ನಿಮಗೆ ಸಲಹೆಯನ್ನು ಕೊಡುತ್ತಾರೆ. ಈ ಕ್ಲಬ್ ಗೆ ಸೇರುವುದರಿಂದ ವೈದ್ಯರ ಸಲಹೆಯ ಮೂಲಕ ಆರೋಗ್ಯವಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾಹಿತಿ ಉಪಯುಕ್ತವಾಗಿದೆ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ತಪ್ಪದೆ ತಿಳಿಸಿ.

Leave A Reply

Your email address will not be published.