5 ದಿನದಲ್ಲಿ ಶರೀರದ ಬೊಜ್ಜು ನಿವಾರಣೆಗೆ ಮನೆಮದ್ದು

0 11

Health tips ಮನುಷ್ಯನ ದೇಹಕ್ಕೆ ತೂಕ ಎನ್ನುವ ಅಂಶವು ಸಮಪ್ರಮಾಣದಲ್ಲಿ ಇರಬೇಕು. ಯಾವುದಾದರೂ ಅಷ್ಟೇ ಅತಿ ಹೆಚ್ಚಾದರೆ ವಿಷ ಎನ್ನುವುದು ಎಲ್ಲರಿಗೂ ತಿಳಿದಿದೆ. ಕೆಲವರು ಅತಿಯಾದ ತೂಕವನ್ನು ಹೊಂದಿರುತ್ತಾರೆ. ಹಾಗೆಯೇ ಕೆಲವರು ಅತಿ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಆದರೆ ಅವರ ವಯಸ್ಸು ಎಷ್ಟು ಇರಬೇಕೋ ಅಷ್ಟು ಇದ್ದರೆ ಅದು ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ದರಿಂದ ನಾವು ತೂಕವನ್ನು ಇಳಿಸಿಕೊಳ್ಳಲು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮಾರುಕಟ್ಟೆಗಳಲ್ಲಿ ಎಷ್ಟೋ ರೀತಿಯ ವಸ್ತುಗಳು ಸಿಗುತ್ತವೆ. ಆದರೆ ಅವುಗಳು ಅತಿಯಾದ ರಾಸಾಯನಿಕಗಳನ್ನು ಹೊಂದಿರುತ್ತವೆ. ಮಾರುಕಟ್ಟೆಯ ಔಷಧಿಗಳನ್ನು ತೆಗೆದುಕೊಂಡಾಗ ಪರಿಣಾಮ ಕಂಡರೂ ಸಹ ನಂತರದಲ್ಲಿ ಅದು ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಯಾವುದೇ ರೀತಿಯ ರೋಗಗಳು ಅಥವಾ ಯಾವುದೇ ರೀತಿಯ ತೊಂದರೆಗಳು ಉಂಟಾದಾಗ ಹೆಚ್ಚಾಗಿ ಮನೆಮದ್ದಿಗೆ ಬೆಲೆ ಕೊಡುವುದು ಬಹಳ ಒಳ್ಳೆಯದು. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ತೂಕ ಹೆಚ್ಚಾಗುತ್ತದೆ.

ಮೊದಲು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ಅದನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಸಿಪ್ಪೆ ಸಮೇತ ಮಾಡಬೇಕು. ನಿಂಬೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಹೇರಳವಾಗಿ ವಿಟಮಿನ್ ಸಿಯನ್ನು ಹೊಂದಿದೆ. ಹಾಗೆಯೇ ದೇಹದ ತೂಕವನ್ನು ಇಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಂತರದಲ್ಲಿ ಬೆಂಡೆಕಾಯಿಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಬೆಂಡೆಕಾಯಿ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಇದನ್ನು ಗಾಲಿ ಗಾಲಿಯನ್ನಾಗಿ ಕತ್ತರಿಸಿಕೊಳ್ಳಬೇಕು.

ನಂತರದಲ್ಲಿ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಬೆಂಡೆಕಾಯಿ ಮತ್ತು ನಿಂಬೆಹಣ್ಣನ್ನು ಹಾಕಬೇಕು. ಇದನ್ನು ಸುಮಾರು ಕಾಲು ತಾಸುಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರದಲ್ಲಿ ಇದನ್ನು ಒಂದು ಲೋಟಕ್ಕೆ ಸೋಸಬೇಕು. ಕೊನೆಯದಾಗಿ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಕುಡಿಯಬೇಕು. ಇದನ್ನು ದಿನನಿತ್ಯ ಕುಡಿಯಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿ ಇರುವ ಅನಗತ್ಯವಾದ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಹಾಗೆಯೇ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

Leave A Reply

Your email address will not be published.