ಹಬ್ಬ ಹರಿದಿನಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಮಾವಿನ ತೋರಣ ಕಟ್ಟುವುದು ಏಕೆ ಗೊತ್ತೇ

0 51

ಸಾಮಾನ್ಯವಾಗಿ ನಾವು ಹಿಂದೂಗಳು ಯಾವುದೇ ಹಬ್ಬಗಳನ್ನು ಆಚರಿಸಿದರೂ ಅಥವಾ ಮದುವೆ ನಾಮಕರಣ ಇತ್ಯಾದಿ ಶುಭ ಕಾರ್ಯಗಳನ್ನು ಆಚರಿಸುವಂತಹ ಸಂದರ್ಭಗಳಲ್ಲಿಯೂ ಸಹ ಮಾವಿನ ಎಲೆಗಳಿಂದ ತೋರಣವನ್ನು ತಯಾರಿಸಿ ಬಾಗಿಲಿಗೆ ಕಟ್ಟುವುದು ಬಹಳ ಹಿಂದಿನ ಕಾಲದಿಂದಲೂ ಸಹ ನಡೆಕೊಂಡು ಬಂದಂತಹ ರೂಢಿ ಆದ್ದರಿಂದಲೇ ನಾವು ಇಂದಿಗೂ ಸಹ ಯಾವುದೇ ಎದುರು ಮಾತನಾಡದೇ ಹಬ್ಬದ ದಿನಗಳಲ್ಲಿ ಮತ್ತು ಇನ್ನೂ ಹಲವು ಶುಭ ಕಾರ್ಯಗಳ ಸಮಯಗಳಲ್ಲಿ ಮನೆಯ ಮುಖ್ಯ ದ್ವಾರಕ್ಕೆ ಮಾವಿನ ಎಲೆಗಳ ತೋರಣವನ್ನು ಕಟ್ಟುತ್ತೇವೆ, ಆದರೆ ಅದರ ಹಿಂದಿರುವ ಕಾರಣ ನಮಗೆ ಇಂದಿಗೂ ಸಹ ತಿಳಿದಿರುವುದಿಲ್ಲ ತಿಳಿದೋ ತಿಳಿಯದೆಯೋ ನಾವು ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ಸಂಪ್ರದಾಯವನ್ನು ಇಂದಿಗೂ ಸಹ ಪಾಲಿಸುತ್ತಲೇ ಬಂದಿದ್ದೇವೆ.

ಎಲ್ಲಕ್ಕೂ ಮಿಗಿಲಾಗಿ ನಮ್ಮ ಹಿಂದೂ ಸನಾತನ ಧರ್ಮ ಶಾಸ್ತ್ರದ ಪ್ರಕಾರ ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ಹಾಗೂ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿರುವುದರೊಂದಿಗೆ ಆ ಸಂಪ್ರದಾಯಕ್ಕೆ ಮತ್ತು ಆಚರಣೆಗೆ ಅದರದ್ದೇ ಆದ ಮಹತ್ವವಿರುತ್ತದೆ, ಆದ್ದರಿಂದಲೇ ನಮ್ಮ ಹಿಂದೂ ಧರ್ಮ ಪ್ರಪಂಚದ ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದೆ ಹಾಗಾದ್ರೆ ನಾವು ಹಬ್ಬ ಹರಿದಿನಗಳಲ್ಲಿ ಮತ್ತು ಹಲವು ಶುಭ ದಿನಗಳಲ್ಲಿ ಬಾಗಿಲಿಗೆ ಮಾವಿನ ತೋರಣವನ್ನು ಕಟ್ಟುವ ಹಿಂದಿರುವ ಕಾರಣವನ್ನು ನಾವಿಂದು ತಿಳಿಸಿಕೊಡುತ್ತೇವೆ ಬನ್ನಿ.

ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಅಶ್ವತ್ಥ ಮರದ ಎಲೆ ಹತ್ತಿ ಮರದ ಎಲೆ ಕಿರ್ಗೋಳಿ ಎಲೆ ಮಾವಿನ ಎಲೆ ಮತ್ತು ಹಲಸಿನ ಮರದ ಎಲೆಗಳನ್ನು ಪಂಚ ಪಲ್ಲವಗಳು ಎಂದು ಕರೆಯಲಾಗುತ್ತದೆ, ಅಲ್ಲದೇ ಶುಭ ಕಾರ್ಯಗಳಲ್ಲಿ ಈ ಎಲೆಗಳನ್ನು ಯತೇಚ್ಛವಾಗಿ ಬಳಸುತ್ತಾರೆ ಆದರೆ ಬಾಗಿಲಿನ ತೋರಣಕ್ಕೆ ಮಾತ್ರ ಮಾವಿನ ಮರದ ಎಲೆಗಳನ್ನೇ ಬಳಸಲಾಗುವುದು.

ಮಾವು ಜನರಲ್ಲಿ ನಿದ್ರಾ ಹೀನತೆಯನ್ನು ಹೋಗಲಾಡಿಸುವಂತಹ ಗುಣವನ್ನು ಹೊಂದಿದೆ ಅಲ್ಲದೇ ಹಬ್ಬ ಹರಿದಿನಗಳಲ್ಲಿ ಮಾವಿನ ತೋರಣವನ್ನು ಬಾಗಿಲಿಗೆ ಕಟ್ಟುವುದರಿಂದ ಮನೆಯಲ್ಲಿನ ಜನರ ಕೆಲಸದ ಒತ್ತಡವನ್ನು ಮತ್ತು ಅವರ ಶ್ರಮವನ್ನು ಇದು ದೂರ ಮಾಡುತ್ತದೆ, ಅಷ್ಟೇ ಅಲ್ಲದೇ ಮಾವು ಬಯಕೆಗಳನ್ನು ತೀರಿಸುವಂತಹ ಗುಣಗಳನ್ನೂ ಸಹ ಹೊಂದಿದೆ ಆದ್ದರಿಂದಲೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬ ಹರಿದಿನಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಮಾವಿನ ತೋರಣವನ್ನು ಬಾಗಿಲಿಗೆ ಕಟ್ಟುವಂತಹ ಪ್ರತೀತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ ಅಲ್ಲದೇ ಇಂದಿಗೂ ಸಹ ನಡೆಯುತ್ತಲೇ ಇದೆ.

Leave A Reply

Your email address will not be published.