Ultimate magazine theme for WordPress.

ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್, ಇದೇನಿದು ಹೊಸ ಕಾಯಿಲೆ

0 0

ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್ ಬರುತ್ತಂತೆ. ಹಾಗಾದ್ರೆ ಯಾರಿಗೆಲ್ಲ ಈ ಮೌತ್ ಸಿಂಡ್ರೋಮ್ ಬರತ್ತೆ? ಇದನ್ನ ತಡೆಯುವುದು ಹೇಗೆ ಈ ಎಲ್ಲದರ ವಿಷಯಗಳ ಕುರಿತಾಗಿ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕರೋನ ಕಾರಣಕ್ಕಾಗಿ ಮಾಸ್ಕ್ ಬಳಕೆ ಇತ್ತೀಚೆಗೆ ಜೀವನದ ಭಾಗವೆ ಆಗಿದೆ. ಕೊರೊನಾ ತಡೆಯುವಲ್ಲಿ ಮಾಸ್ಕ್ ಅಗತ್ಯ ಎಂದು ತಜ್ಞರು ಸಹ ತಿಳಿಸಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ಮಾಸ್ಕ್ ಹಾಕುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಸಹ ಅದೇ ತಜ್ಞರು ತಿಳಿಸಿದ್ದಾರೆ. ಹೆಚ್ಚು ಕಾಲ ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್ ಬರುತ್ತದೆ ಎಂದು ಮಾಸ್ಕ್ ಧರಿಸುವುದರಿಂದ ಆಗುವಂತಹ ದುಷ್ಪರಿಣಾಮವನ್ನು ಸಹ ಹೇಳಿದ್ದಾರೆ ಹಾಗೇ ಇದರ ಕುರಿತು ಎಚ್ಚರಿಕೆ ಕೂಡಾ ನೀಡಿದ್ದಾರೆ. ದೀರ್ಘ ಕಾಲ ಮಾಸ್ಕ್ ಬಳಸುವುದರಿಂದ ದುರ್ವಾಸನೆ ಉಂಟಾಗುತ್ತದೆ, ಬಾಯಿ ಒಣಗುತ್ತದೆ, ತಲೆ ನೋವಿನ ಸಮಸ್ಯೆ , ಕಣ್ಣು ನೋವಿನ ಸಮಸ್ಯೆ ಸೇರಿದಂತೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಮಾಸ್ಕ್ ಬಳಸುವವರು ತಮ್ಮ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಈ ಸಮಸ್ಯೆಗಳು ಬೇಗ ಕಾಡುವುದಿಲ್ಲ ಎಂದು ಹೇಳಿದ್ದಾರೆ.

ಈಗಿನ ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಇತರರೊಂದಿಗೆ ಮಾತನಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಫೇಸ್ ಮಾಸ್ಕ್ ಗಳನ್ನು 8 ರಿಂದ 10 ಗಂಟೆಗಳ ಕಾಲ ಧರಿಸುವ ಅನೇಕ ಜನರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಸಮಸ್ಯೆಯ ಕುರಿತು ದೂರನ್ನು ನೀಡಿದ್ದಾರೆ. ಈ ರೀತಿ ಉಂಟಾಗುವ ಸಮಸ್ಯೆಗಳನ್ನು ‘ಮಾಸ್ಕ್ ಮೌತ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಸಾರ್ವಜನಿಕರಲ್ಲಿ ಶೇ.20ಕ್ಕೂ ಹೆಚ್ಚು ಜನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದಂತ ವೈದ್ಯರು ತಿಳಸಿದ್ದಾರೆ. ಮಾಸ್ಕ್ ಧರಿಸುವುದರಿಂದ ಕಿವಿ ನೋವು, ತಲೆ ನೋವು ಹಾಗೂ ಉಸಿರಾಡಲು ಕಷ್ಟವಾಗುವುದು ಹಾಗೂ ದಂತ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಮಾಸ್ಕ್ ಗಳು ನಮ್ಮ ದೈನಂದಿನ ಜೀವನದ ಭಾಗವಾಗಿರುವುದರಿಂದ ಮಾಸ್ಕ್ ನಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳಿಲ್ಲ. ಸೂಕ್ತ ಕ್ರಮಗಳನ್ನು ವಹಿಸಿದರೆ ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವುದನ್ನು ತಪ್ಪಿಸಬಹುದು ಎಂದು ದಂತವೈದ್ಯ ಡಾ.ಮನೋಜ್ ಚಾಂಡಿ ತಿಳಿಸಿದ್ದಾರೆ. ಎಂಟು ಗಂಟೆಗಳಿಗೂ ಅಧಿಕ ಕಾಲ ಮಾಸ್ಕ್ ಧರಿಸಿ ಕೆಲಸ ಮಾಡುವ ಹಲವು ಸ್ನೇಹಿತರು ಹಾಗೂ ಸಂಬಂಧಿಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರುತ್ತಿದ್ದಾರೆ.

ಇತ್ತೀಚೆಗೆ ನಡೆಸಿದ ಆನ್‍ಲೈನ್ ಅಧ್ಯಯನದ ಪ್ರಕಾರ ಶೇಕಡಾ 16ರಷ್ಟು ಜನ ಕೆಟ್ಟ ವಾಸನೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಶೇಕಡಾ 22ರಷ್ಟು ಜನಕ್ಕೆ ಬಾಯಿ ಒಣಗುವ ಅನುಭವವಾಗಿದೆ. ಸುಮಾರು 514 ಜನ ಈ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದದ್ದು, ಅಧ್ಯಯನದಲ್ಲಿ ಭಾಗವಹಿಸಿದವರ ಸಂಖ್ಯೆ ಹೆಚ್ಚಾಗಿದ್ದರೆ, ಸಮಸ್ಯೆ ಎದುರಿಸುತ್ತಿರುವವರ ಶೇಕಡಾವಾರು ಕೂಡಾ ಹೆಚ್ಚಾಗುತ್ತಿತ್ತು ಎಂದು ಡಾ.ಮಣಿಕಂಠನ್ ಜಿ.ಆರ್. ತಿಳಿಸಿದ್ದಾರೆ. ಸಾಮಾನ್ಯವಾಗಿ ಬಾಯಿಯ ಮೂಲಕ ಉಸಿರಾಡುವ ಜನ ಮತ್ತು ಬಾಯಿಯ ಸ್ವಚ್ಛತೆ ಕಾಪಾಡದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹವರಿಗೆ ಒಸಡುಗಳ ಊರಿಯೂತ ಹಾಗೂ ಹಲ್ಲು ನೋವು ಹೆಚ್ಚಾಗುವ ಸಾಧ್ಯತೆ ಇದೆ.

ಬಾಯಿಯ ಮೂಲಕ ಉಸಿರಾಡುವುದರಿಂದ ಒಸಡುಗಳು ಒಣಗಬಹುದು. ಒಣ ಬಾಯಿಯ ಸಂದರ್ಭದಲ್ಲಿ ಲಾಲಾರಸ ಕಡಿಮೆಯಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಹೆಚ್ಚಾಗಿ ಬಾಯಿಯ ಸಮಸ್ಯೆಗಳು ಉಂಟಾಗುತ್ತವೆ. ಮಾಸ್ಕ್ ಹಾಕಿದಾಗ ಕೆಲವರು ತಮಗೆ ಅರಿವಾಗದಂತೆ ಬಾಯಿಯ ಮೂಲಕ ಉಸಿರಾಡುತ್ತಾರೆ. ಇದು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಾ.ಮಣಿಕಂಠನ್ ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ಈ ಮೌತ್ ಸಿಂಡ್ರೋಮ್ ಸಮಸ್ಯೆಗೆ ಪರಿಹಾರವೇನು? ಅಂತಾ ನೋಡುವುದಾದರೆ , ಅಂಗಡಿಗಳಲ್ಲಿ ಕೆಲಸ ಮಾಡುವವರು, ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಆರೋಗ್ಯ ವಲಯದಲ್ಲಿ ಕೆಲಸ ಮಾಡುವವರು ಕೂಡಾ ಬಾಯಿಯ ಸಮಸ್ಯೆಯ ಕುರಿತಾಗಿ ದೂರು ನೀಡುತ್ತಾ ಇದ್ದಾರೆ. ದೈನಂದಿನ ಆಹಾರ ಕ್ರಮದಲ್ಲಿ ಸಂಸ್ಕರಿಸಿದ ಆಹಾರಕ್ಕಿಂತ ಹೈಡ್ರೆಟೆಡ್ ಹಾಗೂ ಫೈಬರ್‍ಯುಕ್ತ ಆಹಾರ ಸೇವಿಸುವುದರಿಂದ ಸಮಸ್ಯೆಯಿಂದ ದೂರವಿರಬಹುದಾಗಿದೆ. ಅಲ್ಲದೆ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು ಒಂದು ಗಂಟೆಗೊಮ್ಮೆ ಮಾಸ್ಕ್ ತೆಗೆದು 5 ನಿಮಿಷಗಳ ವಿರಾಮ ತೆಗೆದುಕೊಳ್ಳಬಹುದು. ಒಬ್ಬರೇ ಇದ್ದಾಗ ಮಾತ್ರ ಈ ರೀತಿ ಮಾಡಬೇಕು ಎಂದು ಡಾ.ಮನೋಜ್ ಸಲಹೆ ನೀಡಿದ್ದಾರೆ.

Leave A Reply

Your email address will not be published.