ಮಕ್ಕಳಲ್ಲಿ ಉಂಟಾಗುವ ಜಂತು ಹುಳಗಳನ್ನು ನಿವಾರಣೆ ಮಾಡುವುದು ಹೇಗೆ? ಎನ್ನುವುದಕ್ಕೆ ಇಲ್ಲಿದೆ ಸುಲಭವಾದ ಮನೆಮದ್ದು. ಹಾಗಾದರೆ ಆ ಮನೆಮದ್ದು ಯಾವುದು? ಅದನ್ನು ಬಳಕೆ ಮಾಡುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಚಿಕ್ಕ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ದೈಹಿಕ ಮತ್ತು ಮಾನಸಿಕ ಅಸಮತೋಲನಕ್ಕೆ ದೇಹದಲ್ಲಿ ಇರುವಂತಹ ಜಂತು ಹುಳಗಳು ಕಾರಣವಾಗಿರುತ್ತವೆ. ಜಂತು ಹುಳಗಳು ದೇಹದಲ್ಲಿ ಇರುವ ಕಾರಣಕ್ಕೆ ಮಕ್ಕಳಿಗೆ ಹೊಟ್ಟೆನೋವು, ಬೇಧಿ, ನೆಗಡಿ ಜ್ವರ ಇಂತಹ ಮತ್ತಿತರ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಂದಾಗಿ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದು. ಹಾಗಾಗಿ ಒಂದು ವರ್ಷದಿಂದ ಹತ್ತೊಂಬತ್ತು ವರ್ಷದ ಒಳಗಿನ ಮಕ್ಕಳು ಕಡ್ಡಾಯವಾಗಿ ಜಂತುಹುಳ ನಿವಾರಣಾ ಮಾತ್ರೆಗಳನ್ನು ಪ್ರತೀ ಆರು ತಿಂಗಳಿಗೆ ಒಮ್ಮೆ ತೆಗೆದುಕೊಳ್ಳುವುದು ಒಳ್ಳೆಯದು. ಇದಕ್ಕೂ ಪ್ರಮುಖವಾಗಿ ಜಂತುಹುಳಗಳು ದೇಹದ ಒಳಗೆ ಸೇರಿಕೊಳ್ಳದ ಹಾಗೇ ನೋಡಿಕೊಳ್ಳಲು ಮೊದಲು ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಮಾಂಸಾಹಾರ ಮಾಡುವವರು ಆಗಿದ್ದರೆ ಯಾವುದೇ ಮಾಂಸಗಳನ್ನು ಸೇವಿಸುವ ಮೊದಲು ಅವುಗಳನ್ನು ಸರಿಯಾಗಿ ಬೆಯಿಸಿಯೆ ಸೇವಿಸಬೇಕು. ಇನ್ನು ಮಾತ್ರೆಗಳ ಬದಲು ಮನದ್ದುಗಳು ಯಾವುದು ಅಂತ ನೋಡುವುದಾದರೆ ಜಂತು ಹುಳು ನಿವಾರಣೆಗೆ ಸುಲಭವಾದ ಮನೆಮದ್ದುಗಳು ಈ ರೀತಿಯಾಗಿವೆ.

ಬಾಳೆಗಿಡ ದ ನೀರನ್ನು ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡೂವರೆ ಚಮಚದಷ್ಟು ಏಳು ದಿನಗಳ ಕಾಲ ಸೇವನೆ ಮಾಡುವುದರಿಂದ ಜಂತು ಹುಳಗಳು ನಿವಾರಣೆ ಆಗುವುದು. ಒಂದು ವಾರಗಳ ಕಾಲ ಪ್ರತೀ ದಿನ ಒಂದು ಚಮಚ ನಿಂಬೆ ರಸಕ್ಕೆ ಚಿಟಿಕೆ ಇಂಗನ್ನು ಬೆರೆಸಿ ಕುಡಿಯಬೇಕು ಹೀಗೆ ಮಾಡಿ ಎಂಟನೇ ದಿನಕ್ಕೆ ಹರಳೆಣ್ಣೆಯನ್ನು ಕುಡಿಯಬೇಕು. ಈ ರೀತಿ ಮಾಡುವುದರಿಂದ ಜಂತು ಹುಳು ಹೊರಗೆ ಹೋಗುವುದು. ರಾತ್ರಿ ಸೇಬು ಹಣ್ಣನ್ನು ತಿನ್ನುವುದರಿಂದ ಕೂಡಾ ಹೊಟ್ಟೆಯಲ್ಲಿ ಇರುವ ಜಂತು ಹುಳಗಳು ಮಲದ ರೂಪದಲ್ಲಿ ಹೊರ ಹೋಗುತ್ತವೆ. ಹಾಗಲಕಾಯಿ ರಸಕ್ಕೆ ಸಮ ಪ್ರಮಾಣದಲ್ಲಿ ತೆಂಗಿನಕಾಯಿಯ ಹಾಲನ್ನು ಸೇರಿಸಿ ವಾರಕ್ಕೆ ಒಮ್ಮೆ ಅಥವಾ ಹದಿನೈದು ದಿನಕ್ಕೆ ಒಮ್ಮೆ ಈ ರೀತಿ ಮಾಡಿ ಕುಡಿಯುವುದರಿಂದ ಜಂತು ಹುಳಗಳು ಬೇಗ ನಿವಾರಣೆ ಆಗುವುದು.

ಒಣಗಿದ ಮಾವಿನ ಬೀಜದ ಪುಡಿಯನ್ನು ಜೇನುತುಪ್ಪದ ಜೊತೆ ಸೇವಿಸಿದರೆ ಮಕ್ಕಳ ಹೊಟ್ಟೆಯಲ್ಲಿ ಬೆಳೆಯುವ ಜಂತು ಹುಳಗಳು ಸಾಯುತ್ತವೆ. ಪರಂಗಿ ಕಾಯಿಯ ರಸವನ್ನು ಜೇನುತುಪ್ಪ ಹಾಗೂ ಬಿಸಿ ನೀರಿಗೆ ಬೆರೆಸಿ ಕುಡಿಯುವುದರಿಂದ ಸಹ ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳಗಳು ಇದ್ದರೆ ಅವು ಸತ್ತು ಮಲದ ರೂಪದಲ್ಲಿ ಹೊರ ಹೋಗುತ್ತವೆ. ಹಾಗೆಯೇ ಪರಂಗಿ ಬೀಜವನ್ನು ಜೇನುತುಪ್ಪದ ಜೊತೆ ಬೆರೆಸಿ ತಿನ್ನುವುದರಿಂದ ಸಹ ಮಕ್ಕಳ ಹೊಟ್ಟೆಯಲ್ಲಿ ಇರುವ ಜಂತು ಹುಳಗಳು ಮಲದ ಮೂಲಕ ಹೊರಬಂದು ನಿವಾರಣೆ ಆಗುತ್ತದೆ. ಮೂರರಿಂದ ನಾಲ್ಕು ದಿನಗಳ ಕಾಲ ಪಪ್ಪಾಯ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಪ್ರತೀ ದಿನ ಬೆಳಿಗ್ಗೆ ತಿನ್ನುವುದರಿಂದ ಜಂತು ಹುಳಗಳು ಸಾಯುತ್ತವೆ. ಬೇವಿನ ಸೊಪ್ಪು, ಮೆಣಸು , ಶುಂಠಿ , ಕೊತ್ತಂಬರಿ , ಹುಣಸೆ ಹಣ್ಣು ಉಪ್ಪು ಇವುಗಳನ್ನೆಲ್ಲ ಬೆರೆಸಿ ಅರೆದು ವಾರಕ್ಕೆ ಒಮ್ಮೆ ಬಿಸಿ ಅನ್ನದ ಜೊತೆಗೆ ತಿನ್ನುವುದರಿಂದ ಹೊಟ್ಟೆಯಲ್ಲಿ ಇರುವ ಜಂತು ಹುಳಗಳು ಸಾಯುತ್ತವೆ. ಕಲ್ಲಂಗಡಿ ಹಣ್ಣಿನ ಬೀಜವನ್ನು ತಿನ್ನುವುದರಿಂದ ಸಹ ಜಂತು ಹುಳಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *