Pregnancy Information: ಮಕ್ಕಳು ಪಡೆಯುವ ಪ್ರಯತ್ನದಲ್ಲಿದ್ದರೆ ಈ ಮಾಹಿತಿ ನಿಮಗೆ ಗೊತ್ತಿರಲಿ

0 245

Pregnancy Information: ಒಳ್ಳೆಯ ಆರೋಗ್ಯವಿರುವ ಮಕ್ಕಳು ಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಗರ್ಭ ಧರಿಸಲು ಪ್ಲ್ಯಾನ (pregnant) ಮಾಡಿದ ಹೆಣ್ಣುಮಕ್ಕಳು (Ladies) ಏನೆಲ್ಲಾ ತಪ್ಪು ಮಾಡುತ್ತಾರೆ, ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಯಾವೆಲ್ಲಾ ಅಂಶಗಳನ್ನು ಪಾಲಿಸಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಗರ್ಭ ಧರಿಸಬೇಕು (pregnant) ಎಂದು ನಿರ್ಧಾರ ಮಾಡಿದ ಹೆಣ್ಣುಮಕ್ಕಳು ಕೆಲವು ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಗರ್ಭ ಧರಿಸುವುದಿಲ್ಲ. ಹೆಚ್ಚಿನ ದಂಪತಿಗೆ ಅವರಿಗಿಂತ ಮನೆಯವರ ಒತ್ತಡವೆ ಹೆಚ್ಚಾಗಿ ಕಂಡುಬರುತ್ತದೆ ಆದರೆ ಯಾರದ್ದೊ ಒತ್ತಡವಿದೆ ಎಂದಾಗಲಿ, ಆಧುನಿಕ ಯುಗದಲ್ಲಿ ನಾವಿದ್ದೇವೆ ಎನ್ನುವುದಕ್ಕಾಗಲಿ ಸುಲಭವಾಗಿ ಗರ್ಭ ಧರಿಸಲು ಬರುವುದಿಲ್ಲ ಅದಕ್ಕೆ ಅದರದ್ದೆ ಆದ ವಿಧಾನಗಳಿವೆ. ಪ್ರೆಗ್ನೆಂಟ್ ಪ್ಲಾನ್ ಮಾಡುವ ಹೆಣ್ಣುಮಕ್ಕಳಿಗೆ ಅವರ ಓವಿಲೇಶನ್ ಯಾವಾಗ ಎಂದು ತಿಳಿದಿರಬೇಕು. ಪ್ರತಿ ತಿಂಗಳು ದೇಹದಲ್ಲಿ ಓವರಿಸ್ ಇಂದ ಒಂದು ಎಗ್ ಬಿಡುಗಡೆ ಆಗುತ್ತದೆ. ಎಗ್ ಪ್ರೊಡ್ಯೂಸ್ ಆಗಿ 12 -24 ಗಂಟೆ ಮಾತ್ರ ಜೀವಂತವಾಗಿರುತ್ತದೆ. ಓವಿಲೇಶನ್ ಯಾವಾಗ ಇರುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ.

ಮಾರ್ಕೆಟ್ ನಲ್ಲಿ ಓವಿಲೇಶನ್ ಕಿಟ್ (Ovulation kit) ಸಿಗುತ್ತದೆ ಅದರ ಮೂಲಕ ಟೆಸ್ಟ್ ಮಾಡಿದರೆ ಪಾಸಿಟಿವ್ ಬಂದರೆ ಮುಂದಿನ 24 ಗಂಟೆಗಳಲ್ಲಿ ಓವಿಲೇಶನ್ ಆಗುತ್ತದೆ ಎಂದರ್ಥ. ಪ್ರತಿ ತಿಂಗಳು ಓವಿಲೇಶನ್ ಒಂದೆ ದಿನಾಂಕದಂದು ಆಗುವುದಿಲ್ಲ. ಪೀರಿಯಡ್ ಆದ ದಿನದಿಂದ 10 ದಿನಗಳವರೆಗೆ ಓವಿಲೇಶನ್ ಆಗುವ ಸಾಧ್ಯತೆ ಕಡಿಮೆ 10 ನೇ ದಿನದಿಂದ 20 ದಿನಗಳಲ್ಲಿ ಓವಿಲೇಶನ್ ಆಗಬಹುದು ಆ ದಿನಗಳಲ್ಲಿ ಇಂಟರ್ ಕೋರ್ಸ್ ಮಾಡಬೇಕು. ರೆಗ್ಯೂಲರ್ ಪೀರಿಯಡ್ ಇರಬೇಕು,

ವಯಸ್ಸು 30-35 ಇರಬೇಕು, ಥೈರಾಯ್ಡ್ (Thyroid) ಇನ್ನಿತರ ಭೀಕರ ಖಾಯಿಲೆ ಇರಬಾರದು ಅಂತವರು ಗರ್ಭ ಧರಿಸುವ ಪ್ಲಾನ್ ಮಾಡಬಹುದು. ಒಂದು ವರ್ಷದವರೆಗೆ ಟ್ರೈ ಮಾಡಿದಾಗಲೂ ಗರ್ಭ ಧರಿಸದೆ ಇದ್ದರೆ ಮಾತ್ರ ಇನ್ ಫರ್ಟಿಲಿಟಿ ಟ್ರೀಟ್ಮೆಂಟ್ ಪ್ರಾರಂಭಿಸಬೇಕು ಏಕೆಂದರೆ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಬಹಳ ಒತ್ತಡಕ್ಕೆ ಒಳಗಾದರೆ ಕನ್ಸಿವ್ ಆಗುವುದಿಲ್ಲ.

35 ವರ್ಷದ ನಂತರವೂ ಇನ್ ಫರ್ಟಿಲಿಟಿ ಟ್ರೀಟ್ಮೆಂಟ್ (In Fertility Treatment) ಪ್ರಾರಂಭಿಸಬಾರದು ಇನ್ ಫರ್ಟಿಲಿಟಿ ಟ್ರೀಟ್ಮೆಂಟ್ ಗೆ ಹೋಗುವಾಗ ಗಂಡ ಹೆಂಡತಿ ಇಬ್ಬರು ಹೋಗಬೇಕಾಗುತ್ತದೆ ಸಮಸ್ಯೆ ಯಾರಲ್ಲಿ ಬೇಕಾದರೂ ಇರಬಹುದು. ಪ್ರತಿದಿನ ವ್ಯಾಯಾಮ ಮಾಡಬೇಕು, ಒಳ್ಳೆಯ ಯೋಚನೆ ಮಾಡಬೇಕು, ಒತ್ತಡಕ್ಕೆ ಒಳಗಾಗಬಾರದು, ಅತಿಯಾದ ತೂಕ ಹೊಂದಿರಬಾರದು. ವೈದ್ಯರು ಕೊಡುವ ಮಾತ್ರೆಗಳನ್ನು ಸೇವಿಸಿದ ಮಾತ್ರಕ್ಕೆ ಪ್ರೆಗ್ನೆಂಟ್ ಆಗುವುದಿಲ್ಲ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ವೈದ್ಯರ ಔಷಧೀಯ ಜೊತೆಗೆ ನಿಮ್ಮ ಪ್ರಯತ್ನವೂ ಮುಖ್ಯವಾಗಿದೆ. ಈ ಮಾಹಿತಿ ಉಪಯುಕ್ತವಾಗಿದೆ ನಿಮ್ಮ ಸ್ನೇಹಿತರಿಗೆ ತಿಳಿಸಿ .

Leave A Reply

Your email address will not be published.