ಮಾರ್ಚ್ ತಿಂಗಳಿನಲ್ಲಿ ಈ ರಾಶಿಯವರಿಗೆ ಒಳ್ಳೆಯ ಯೋಗದ ಜೊತೆಗೆ ಉದ್ಯೋಗ ಲಾಭ

0 2

ಪ್ರತಿ ತಿಂಗಳು ಗ್ರಹಗತಿಗಳ ಬದಲಾವಣೆಯಿಂದಾಗಿ ದ್ವಾದಶ ರಾಶಿಗಳಲ್ಲಿನ ರಾಶಿ ಫಲಗಳಲ್ಲಿ ಬದಲಾವಣೆಗಳಾಗುತ್ತಿರುತ್ತವೆ ಅದೇ ರೀತಿಯಾಗಿ ದ್ವಾದಶ ರಾಶಿಗಳಲ್ಲಿ ಒಂದಾದ ಮಕರ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಯಾವೆಲ್ಲ ಶುಭಫಲಗಳು ಉಂಟಾಗಲಿದೆ ಎನ್ನುವುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಮಾರ್ಚ್ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದ್ದರೂ ಕೂಡ ಉತ್ತಮವಾದಂತಹ ಯೋಗಗಳು ಉಂಟಾಗಲಿದೆ. ಯೋಗಗಳ ಮೇಲೆ ಯೋಗ ಬರುತ್ತಿರುತ್ತದೆ ಜೊತೆಗೆ ಕಷ್ಟಗಳ ಮೇಲೆ ಕಷ್ಟವು ಕೂಡ ಬರುತ್ತಿರುತ್ತದೆ. ಮಾರ್ಚ್ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಅದರಲ್ಲಿಯೂ ವಿಶೇಷವಾಗಿ ಭೂಗರ್ಭದಲ್ಲಿ ಕೆಲಸಮಾಡುತ್ತಿರುವಂತಹ ಕಾರ್ಮಿಕ ಸಿಬ್ಬಂದಿವರ್ಗದವರಿಗೆ ತುಂಬಾ ಲಾಭದಾಯಕವಾಗಿ ಇರುವಂತದ್ದು.

ನೀರಿನಲ್ಲಿ ಕೆಲಸ ಮಾಡುವಂತಹ ಮೀನುಗಾರರಿಗೆ ಇರಬಹುದು ಅಥವಾ ಇದಕ್ಕೆ ಸಂಬಂಧಿಸಿದಂತೆ ರಪ್ತು ಕೆಲಸದಲ್ಲಿ ತೊಡಗಿಕೊಂಡಿರುವವರಿರಬಹುದು ಅಥವಾ ಜಲತಜ್ಞರು ಇರಬಹುದು ಅಥವಾ ಪ್ರಾಣಿಗಳ ಸಾಗಾಣಿಕೆಯನ್ನು ಮಾಡುತ್ತಿರುವವರಿರಬಹುದು ಅಥವಾ ಬಹಳ ವಿಶೇಷವಾಗಿ ಪರಿಸರವನ್ನು ಪಾಲನೆ-ಪೋಷಣೆ ಮಾಡುತ್ತಿರುವಂತಹ ಸಿಬ್ಬಂದಿ ವರ್ಗದವರು ಇರಬಹುದು ಇವರೆಲ್ಲರಿಗೂ ಕೂಡ ಮಾರ್ಚ್ ತಿಂಗಳು ಅತ್ಯಂತ ಲಾಭದಾಯಕವಾಗಿದೆ ಎಂದು ಹೇಳಬಹುದು. ವಿದೇಶದಿಂದ ಧನಾಗಮನ ವಾಗಬಹುದು ವಿದೇಶದಿಂದ ಸಂತೋಷವಾಗಬಹುದು ಜೊತೆಗೆ ವಿದೇಶದಲ್ಲಿಯೂ ಕೂಡ ಉದ್ಯೋಗ ಪ್ರಾಪ್ತಿಯಾಗಬಹುದು.

ನಮ್ಮ ದೇಶದ ಗಡಿ ಭಾಗವನ್ನು ರಕ್ಷಣೆ ಮಾಡುವಂತಹ ಸಿಬ್ಬಂದಿ ವರ್ಗದವರಿಗೂ ಕೂಡ ಮಾರ್ಚ್ ತಿಂಗಳು ಅತ್ಯಧಿಕ ಲಾಭದಾಯಕವಾಗಿರುತ್ತದೆ ಅವರ ಆರೋಗ್ಯ ಆಯುಷ್ಯಕೂಡ ವೃದ್ಧಿ ಆಗುತ್ತದೆ. ಕುಟುಂಬದಲ್ಲಿಯೂ ಕೂಡ ನೆಮ್ಮದಿ ನೆಲೆಸುತ್ತದೆ ಅಷ್ಟೇ ಅಲ್ಲದೆ ಪೊಲೀಸ್ ಇಲಾಖೆಯ ಕಾರ್ಮಿಕ ಸಿಬ್ಬಂದಿ ವರ್ಗದವರಿಗೂ ಕೂಡ ಒಳ್ಳೆಯ ಸಮಯ ಎಂದು ಹೇಳಬಹುದು ಸಹೋದ್ಯೋಗಿಗಳೊಂದಿಗೆ ಮಿತ್ರರೊಂದಿಗೆ ಕುಟುಂಬದವರೊಂದಿಗೆ ಸಂಭ್ರಮ ಸಂತಸ ಇರುವಂತದ್ದು ಅಷ್ಟೇ ಅಲ್ಲದೆ ಐಎಎಸ್ ಐಪಿಎಸ್ ಕೆಎಎಸ್ ಮೊದಲಾದ ಉದ್ಯೋಗವನ್ನು ಮಾಡುತ್ತಿರುವಂತವರಿಗೂ ಕೂಡ ಒಳ್ಳೆಯ ಅಭಿಪ್ರಾಯಗಳು ಬರುತ್ತವೆ.

ಅಷ್ಟೇ ಅಲ್ಲದೆ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉನ್ನತ ಪದವಿಯನ್ನು ಅಲಂಕರಿಸುತ್ತಾರೆ. ಜೊತೆಗೆ ಮಕರ ರಾಶಿಯ ರಾಜಕಾರಣಿಗಳಿಗೂ ಕೂಡ ಮಾರ್ಚ್ ತಿಂಗಳು ಅತ್ಯಂತ ಶುಭದಾಯಕವಾಗಿದೆ. ಒಟ್ಟಾರೆಯಾಗಿ ಮಕರ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಸ್ವಲ್ಪ ಕಷ್ಟ ಬಂದರೂ ಕೂಡ ಹೆಚ್ಚು ಲಾಭವನ್ನು ಪಡೆಯುತ್ತಾರೆ ಗಾರ್ಮೆಂಟ್ಸ್ ಗೆ ಸಂಬಂಧಿಸಿದಂತಹ ಕೆಲಸದಲ್ಲಿ ತೊಡಗಿಕೊಂಡಿರುವಂತವರು ಕೂಡ ಲಾಭವನ್ನು ಗಳಿಸುತ್ತಾರೆ.

ಒಟ್ಟಾರೆಯಾಗಿ ಮಾರ್ಚ್ ತಿಂಗಳು ಮಕರ ರಾಶಿಯವರಿಗೆ ಲಾಭದಾಯಕವಾಗಿದ್ದು ಇದೇ ರೀತಿಯಾದಂತಹ ಖುಷಿ ಸಂತೋಷ ನಿಮ್ಮ ಜೀವನದಲ್ಲಿ ಎಂದಿಗೂ ನೆಲೆಸಿರಲಿ ಎಂದು ನಾವು ಹಾರೈಸುತ್ತೇವೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತ ಮಕರ ರಾಶಿಯ ಸ್ನೇಹಿತರಿಗು ಈ ಮಾಹಿತಿಯನ್ನು ತಿಳಿಸಿರಿ.

Leave A Reply

Your email address will not be published.