ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯವರಿಗೆ ಯಾವೆಲ್ಲ ಶುಭ ಫಲಗಳಿವೆ ತಿಳಿದುಕೊಳ್ಳಿ

0 0

ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಹುಟ್ಟಿದವರು ಪ್ರತಿಯೊಂದು ತಿಂಗಳಿನಲ್ಲಿ ಗ್ರಹ ಸ್ಥಿತಿ ಬದಲಾವಣೆಯಿಂದ ವಿಭಿನ್ನವಾದ ಫಲವನ್ನು ಪಡೆಯುತ್ತಾರೆ. ಜೀವನದಲ್ಲಿ ಸುಖ-ದುಃಖ ಬರುವುದು ಗ್ರಹಗಳ ಚಲನೆಯಿಂದ. ಮಾರ್ಚ್ ತಿಂಗಳಿನಲ್ಲಿ ಕೊನೆಯ ರಾಶಿ ಮೀನ ರಾಶಿಯ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ ಹೆಚ್ಚಿನ ಅಂಕಗಳನ್ನು ಗಳಿಸುವ ಸಾಧ್ಯತೆಗಳಿವೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊಸ ಹೊಸ ಆಲೋಚನೆಗಳು ಬರುತ್ತವೆ ಹಾಗೂ ಆ ಆಲೋಚನೆಗಳು ಈಡೇರುವ ಸಂಭವವಿದೆ. ಮ್ಯಾನೇಜ್ಮೆಂಟ್ ವ್ಯವಹಾರದಲ್ಲಿ ಮೀನರಾಶಿಯವರಿಗೆ ಅತ್ಯಧಿಕ ಲಾಭವಾಗುತ್ತದೆ. ಮೀನ ರಾಶಿಯ ಮಾರ್ಕೆಟಿಂಗ್, ಸೇಲ್ಸ್ ವಿಭಾಗದ ಸಿಬ್ಬಂದಿಗಳು ಮತ್ತು ಉನ್ನತ ಹುದ್ದೆಯ ಅಧಿಕಾರಿಗಳಿಗೆ ಮಾರ್ಚ್ ತಿಂಗಳಿನಲ್ಲಿ ಅತ್ಯಧಿಕ ಧನಲಾಭವಾಗುತ್ತದೆ.

ಅಷ್ಟೆ ಅಲ್ಲದೆ ಈ ರಾಶಿಯ ಸಂಗೀತ, ಸಾಹಿತ್ಯ, ಕಲೆ ಕ್ಷೇತ್ರದಲ್ಲಿ ಇರುವವರಿಗೂ ಸಹ ಮಾರ್ಚ್ ತಿಂಗಳಿನಲ್ಲಿ ಧನಲಾಭವಾಗುತ್ತದೆ. ಹೋಟೆಲ್ ಉದ್ಯಮ, ಕ್ಲರ್ಕ್, ದಿನಗೂಲಿ ನೌಕರರಿಗೆ ಮಾರ್ಚ್ ತಿಂಗಳಿನಲ್ಲಿ ಧನಲಾಭವಾಗುತ್ತದೆ. ಮೀನರಾಶಿಯ ರಾತ್ರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯವರಿಗೆ ಮಾರ್ಚ್ ತಿಂಗಳಿನಲ್ಲಿ ವೇತನದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ. ಬ್ಯಾಂಕ್, ಎಟಿಎಂಗಳಲ್ಲಿ, ಸರ್ಕಾರಿ ಸೇವೆಯಲ್ಲಿ ಕಾಂಟ್ರಾಕ್ಟ್ ಬೇಸ್ಡ್ ಕೆಲಸ ಮಾಡುವವರಿಗೆ ಈ ತಿಂಗಳಿನಲ್ಲಿ ಅತ್ಯಧಿಕ ಧನಲಾಭವಾಗುತ್ತದೆ ಹಾಗೂ ಕೆಲಸದಲ್ಲಿ ಉನ್ನತಿ ಕಾಣಿಸುತ್ತದೆ. ಮೀನ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಶ್ರೇಯೋಚಿತ ಲಾಭವಾಗುತ್ತದೆ.

ಮೀನ ರಾಶಿಯ ಪುರೋಹಿತರಿಗೂ ಹಾಗೂ ಮಧ್ಯಮ ವರ್ಗದವರಿಗೆ ಮಾರ್ಚ್ ತಿಂಗಳಿನಲ್ಲಿ ವಿವಾಹವಾಗುವ ಸಾಧ್ಯತೆಗಳಿವೆ. ಅಡುಗೆ ಮಾಡುತ್ತಿರುವ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿಯವರಿಗೆ ಮಾರ್ಚ್ ತಿಂಗಳಿನಲ್ಲಿ ವಿವಾಹವಾಗುವ ಸಾಧ್ಯತೆಗಳಿವೆ. ಮೀನ ರಾಶಿಯ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರಿಗೆ ಮಾರ್ಚ್ ತಿಂಗಳಿನಲ್ಲಿ ಪ್ರಮೋಷನ್ ಆಗಬಹುದು. ಒಟ್ಟಿನಲ್ಲಿ ಮೀನರಾಶಿಗೆ ಮಾರ್ಚ್ ತಿಂಗಳಿನಲ್ಲಿ ಹೆಚ್ಚಿನ ಶುಭದಾಯಕ ಫಲವನ್ನು ನೀಡಲಿದೆ. ಮೀನ ರಾಶಿಯವರು ದೇವರ ಧ್ಯಾನ, ಸ್ತೋತ್ರಗಳನ್ನು ಓದುವುದರ ಮೂಲಕ ಹೆಚ್ಚಿನ ಶ್ರೇಯಸ್ಸನ್ನು ಪಡೆಯುತ್ತಾರೆ. ಈ ಮಾಹಿತಿಯನ್ನು ನೀವು ಓದಿ ಜೊತೆಗೆ ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿರುವ ಮೀನರಾಶಿಯವರಿಗೆ ತಪ್ಪದೆ ತಿಳಿಸಿ.

Leave A Reply

Your email address will not be published.