ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಧಾ ಕೃಷ್ಣ ಧಾರಾವಾಹಿಯ ರಾಧಾ ಪಾತ್ರದ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ರಾಧಾ ಕೃಷ ಧಾರಾವಾಹಿಯ ರಾಧಾ ಪಾತ್ರದ ನಟಿಯ ನಿಜವಾದ ಹೆಸರು ಮಲ್ಲಿಕಾ ಸಿಂಗ್. ಇವರು ಸೆಪ್ಟೆಂಬರ್ 15, 2000 ರಲ್ಲಿ ಜಮ್ಮುವಿನಲ್ಲಿ ಹುಟ್ಟಿ ಅಲ್ಲಿಯೇ ಬೆಳೆದರು. ಈಗ ಮಲ್ಲಿಕಾ ಅವರಿಗೆ ಇಪ್ಪತ್ತು ವರ್ಷ ವಯಸ್ಸು. ರಾಧಾ ಕೃಷ ಇವರ ಮೊದಲ ಧಾರಾವಾಹಿ. ಇದು 2018 ರಲ್ಲಿ ಹಿಂದೀ ಭಾಷೆಯಲ್ಲಿ ಮೂಡಿ ಬಂದ ಧಾರಾವಾಹಿ ಆಗಿತ್ತು. ಮಲ್ಲಿಕಾ ಸೆವೆನ್ ಸ್ಕ್ವೇರ್ ಅಕಾಡಮಿ ಸ್ಕೂಲ್ ಜಮ್ಮುವಿನಲ್ಲಿ ತಮ್ಮ ವಿಧ್ಯಾಭ್ಯಾಸ ಮುಗಿಸಿದ್ದಾರೆ. ಮಲ್ಲಿಕಾ ಹತ್ತನೇ ತರಗತಿಯಲ್ಲಿದ್ದಾಗ ರಜೆಯನ್ನು ಕಲಿಯುವ ಸಲುವಾಗಿ ತಮ್ಮ ಅಜ್ಜಿಯ ಊರಾದ ಮುಂಬೈ ಗೆ ಬಂದಿದ್ದರು. ಮಲ್ಲಿಕಾ ಮುಂಬೈ ಗೆ ಬಂದಾಗ ರಾಧಾ ಕೃಷ್ಣ ಧಾರಾವಾಹಿಯ ಆಡಿಷನ್ ನಡೆಯುತ್ತಾ ಇರುತ್ತದೆ.
ಇನ್ನು ಮಲ್ಲಿಕಾ ಅವರ ತಾಯಿ ರುಬೀ ಸಿಂಗ್ ಅವರೂ ಕೂಡಾ ಕೊರಿಯೋಗ್ರಾಫರ್. ಅಲ್ಲದೆ ಇವರು ಜಮ್ಮುವಿನಲ್ಲಿ ಕ್ಲಾಸಿಕಲ್ ಡಾನ್ಸ್ ಟೀಚರ್ ಕೂಡಾ ಆಗಿರುತ್ತಾರೆ. ಮಲ್ಲಿಕಾ ಅವರ ತಾಯಿ ಸ್ವತಃ ಅವರೇ ಒತ್ತಾಯ ಮಾಡಿ ಮಲ್ಲಿಕಾ ಅವರಿಗೆ ರಾಧಾ ಕೃಷ್ಣ ಧಾರಾವಾಹಿಯ ಆಡಿಷನ್ ನಲ್ಲಿ ಭಾಗವಹಿಸಲು ಹೇಳುತ್ತಾರೆ. ಅದರಂತೆಯೇ ಮಲ್ಲಿಕಾ 2016 ರಲ್ಲಿ ಮುಂಬೈ ನಲ್ಲಿ ನಡೆಯುತ್ತಿದ್ದ ಆಡಿಷನ್ ನಲ್ಲಿ ಭಾಗವಹಿಸುತ್ತಾರೆ. ನಂತರ ಎರಡು ವರ್ಷ ಕಾಯುತ್ತಾರೆ.
ಆಡಿಷನ್ ಕೊಟ್ಟಾಗ ಮಲ್ಲಿಕಾ ಹತ್ತನೇ ತರಗತಿ ಓದುತ್ತಿದ್ದರು. ನಂತರ ಮುಂಬೈ ಗೆ ಬಂದು ತಮ್ಮ PUC ಶಿಕ್ಷಣವನ್ನು ಮುಂದುವರೆಸುತ್ತಾರೆ. ಆದರೆ ಇವರು ಹೋದ ಆಡಿಷನ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದರೆ ಕೊನೆಗೆ 2018 ರಲ್ಲಿ ರಾಧಾ ಕೃಷ್ಣ ಧಾರಾವಾಹಿಯ ನಿರ್ಮಾಪಕರು ಸಿದ್ಧಾರ್ಥ್ ಕುಮಾರ್ ಇವರ ಕಡೆಯಿಂದ ಮಲ್ಲಿಕಾ ಅವರಿಗೆ ಆಡಿಷನ್ ನಲ್ಲಿ ಅವರು ಆಯ್ಕೆ ಆದ ಕುರಿತು ಕರೆ ಮಾಡಿ ತಿಳಿಸುತ್ತಾರೆ. ಮಲ್ಲಿಕಾ ಅವರ ಮೂಲ ಬಹಾಷೆ ಉರ್ದು ಆಗಿದ್ದರೂ ಕೂಡಾ ಹಿಂದಿ ವರ್ಕ್ ಶಾಪ್ ಗೆ ಹೋಗಿ ಭಾಷೆ ಕಲಿತು ಹಿಂದಿಯಲ್ಲಿ ಬಹಳ ಸುಲಭವಾಗಿ ಮಾತನಾಡಬಲ್ಲರು. ನಂತರ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ರಾಧಾ ಕೃಷ್ಣ ಧಾರಾವಾಹಿಯಲ್ಲಿ ಅಭಿನಯಿಸಿ, ತಮ್ಮ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ ಮಲ್ಲಿಕಾ ಸಿಂಗ್ ಅವರು.