ಬೆಳೆ ವಿಮೆಯ ಬಗ್ಗೆ ನಿಮ್ಮ ಮೊಬೈಲ್ ನಲ್ಲಿ ಮಾಹಿತಿ ಪಡೆಯೋದು ಹೇಗೆ ನೋಡಿ

0 4

ಬೆಳೆ ವಿಮೆಯ ಬಗ್ಗೆ ನಿಮ್ಮ ಮೊಬೈಲ್ ನಲ್ಲಿ ಮಾಹಿತಿಯನ್ನು ನಿಮ್ಮ ವಿಮೆಯನ್ನು ವಿಮಾ ಕಂಪನಿಯನ್ನು ಸ್ವೀಕರಿಸಿದೆಯೋ ಇಲ್ಲವೊ ಎನ್ನುವುದರ ಬಗ್ಗೆ ಕೂಡಾ ಸ್ವತಃ ನೀವೇ ತಿಳಿದುಕೊಳ್ಳಬಹುದು. ಅದು ಹೇಗೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲು ಪ್ರಧಾನಮಂತ್ರಿ ಫಸಲ್ ಭೀಮ ಯೋಜನೆಯ ವೆಬ್ಸೈಟ್ ಗೆ ಹೋಗಿ ಅಲ್ಲಿ ಸ್ಕ್ರೀನ್ ಮೇಲೆ ಮೊದಲಿಗೆ ಕಾಣುವ ಹಾಗೆ ಯಾವ ವರ್ಷದ ಬೆಳೆ ವಿಮೆ ಬಂದಿರುವುದಿಲ್ಲ ಆ ವರ್ಷವನ್ನು ಆಯ್ಕೆಮಾಡಿಕೊಳ್ಳಬೇಕು. ಅದರ ಜೊತೆಗೆ ಹಾಗೆ ಋತುವನ್ನು ಕೂಡ ಆಯ್ಕೆಮಾಡಿಕೊಳ್ಳಬೇಕು. ಅನಂತರ ಕೆಳಗೆ ಒಂದು ಸಣ್ಣ ಬಾಕ್ಸಲ್ಲಿ ಮುಂದೆ ಅಥವಾ ಗೋ ಆಪ್ಷನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು. ಅನಂತರ ಬರುವ ಪೇಜಿನಲ್ಲಿ ನೀವು ಬೆಳೆ ವಿಮೆಯ ಸ್ಟೇಟಸ್ ಅನ್ನು ಕಾಣಬಹುದು. ಅಲ್ಲಿ ಸ್ಥಿತಿ ಪರಿಶೀಲನೆ ಎಂಬ ಮೂರನೇ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಅಲ್ಲೇ ಇನ್ನೊಂದು ಹೊಸಪೇಜ್ ಕಾಣಿಸುವುದು. ಇಲ್ಲಿ ನೀವು ನಿಮ್ಮ ವಿಮೆಯ ಬಗ್ಗೆ ತಿಳಿದುಕೊಳ್ಳಲು ಅರ್ಜಿ ಸಲ್ಲಿಸಿದ ಅರ್ಜಿ ನಂಬರ್ ಅಥವಾ ಅರ್ಜಿ ಸಲ್ಲಿಸುವಾಗ ನೀಡಿದ ಮೊಬೈಲ್ ನಂಬರ್ ಅನ್ನು ಸಹ ನೀಡಬಹುದು. ಹಾಗೆ ಅದರ ಜೊತೆಗೆ ಆಧಾರ್ ನಂಬರ್ ಅನ್ನು ಕೂಡ ಹಾಗೆ ಮುಂದುವರೆಸಿ ಮೇಲೆ ಕ್ಲಿಕ್ ಮಾಡಬೇಕು ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಈ ಪೇಜ್ ನಲ್ಲಿ ನಮಗೆ ಸಲ್ಲಿಸಿದ್ದ ಅರ್ಜಿಯನ್ನು ವಿಮಾ ಕಂಪನಿ ಸ್ವೀಕರಿಸಿದೆಯೋ ಅಥವಾ ಇಲ್ಲವೋ ಎನ್ನುವುದು ತಿಳಿಯುತ್ತದೆ. ವಿಮಾ ಕಂಪನಿ ನಮ್ಮ ಅರ್ಜಿಯನ್ನು ಸ್ವೀಕರಿಸಿದಲ್ಲಿ ಮಾತ್ರ ನಮಗೆ ವಿಮೆಯ ಮೊತ್ತ ದೊರೆಯುವುದು ಇಲ್ಲವಾದರೆ ದೊರೆಯುವುದಿಲ್ಲ. ಪ್ರತಿಯೊಂದರ ಬಗ್ಗೆಯೂ ವಿವರವಾಗಿ ತಿಳಿದುಕೊಳ್ಳಬೇಕು ಅಂದಿದ್ದರೆ ಕೊನೆಯಲ್ಲಿ ಕಾಣುವ ಸೆಲೆಕ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಪ್ರತಿಯೊಂದು ಹೊಲದ ಬಗ್ಗೆ ವಿವರವಾಗಿ ತಿಳಿದುಕೊಳ್ಳಬಹುದು.

ಇದರಲ್ಲಿ ನಾವು ಯಾವ ದಿನದಂದು ನಾವು ಅರ್ಜುನ ಸಲ್ಲಿಸಿದ್ದೇವೆ ಬ್ಯಾಂಕಿನಿಂದ ಯಾವ ದಿನದಂದು ಅನುಮೋದಿಸಿ ವಿಮಾ ಕಂಪನಿಗೆ ನಮ್ಮ ಅರ್ಜಿಯನ್ನು ಕಳುಹಿಸಲಾಗಿದೆ ಹಾಗು ವಿಮಾ ಕಂಪನಿಗೆ ಯಾವಾಗ ನಮ್ಮ ಅರ್ಜಿಯನ್ನು ಸ್ವೀಕರಿಸಿದೆ ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳಬಹುದು. ನಮ್ಮ ಅರ್ಜಿಯಲ್ಲಿ ಏನಾದರೂ ತಪ್ಪುಗಳು ಕಂಡು ಬಂದಿದ್ದರೆ ಶರ ಎನ್ನುವ ಭಾಗದಲ್ಲಿ ತಪ್ಪುಗಳನ್ನು ಹಾಕಿರುತ್ತಾರೆ. ಹಾಗೇ ಮುಂದುವರೆದು ವಿವ್ ಡಿಟೇಲ್ಸ್ ಎನ್ನುವಲ್ಲಿ ಕ್ಲಿಕ್ ಮಾಡಿದರೆ ನೀವು ನೀಡಿದ ದಾಖಲೆಗಳು ಹಾಗೂ ಇನ್ನಿತರ ವಿವರಣೆಗಳನ್ನು ಅಲ್ಲಿ ಕಾಣಬಹುದು. ಇಲ್ಲಿ ನಾವು ಯಾವ ಬೆಳೆಯನ್ನು ಬೆಳೆದಿದ್ದೇವೆ ಯಾವ ಬೆಳೆಗೆ ವಿಮೆಯನ್ನು ಪಾವತಿ ಮಾಡಿದ್ದೇವೆ ಹಾಗು ವಿಮೆ ಮೊತ್ತ ಎಷ್ಟು ಬಂದಿದೆ ಎಲ್ಲವನ್ನು ಸಹ ಇಲ್ಲಿ ನೋಡಬಹುದು. ಎಲ್ಲಾ ಮಾಹಿತಿಯನ್ನೂ ನೋಡಿದ ನಂತರ ಕೆಳಗೆ ಕಾಣಿಸುವ ಕ್ಲೋಸ್ ಮೇಲೆ ಕ್ಲಿಕ್ ಮಾಡಬೇಕು.

Leave A Reply

Your email address will not be published.