ಕನ್ನಡ ಕಿರುತೆರೆ ಲೋಕದಲ್ಲಿ ‘ಮಹಾನಾಯಕ ಬಿ.ಆರ್​. ಅಂಬೇಡ್ಕರ್‌ʼ ಧಾರಾವಾಹಿ ತನ್ನದೇ ಛಾಪು ಮೂಡಿಸಿದೆ. ಈ ಸೀರಿಯಲ್​ನಲ್ಲಿ ಈಗ ಹೊಸ ಯುಗ ಶುರು ಆಗುತ್ತಿದೆ. ಅಂದರೆ, ಇಷ್ಟು ದಿನಗಳ ಕಾಲ ಅಂಬೇಡ್ಕರ್​ ಅವರ ಬಾಲ್ಯಾವಸ್ಥೆಯ ಕಥೆ ಸಾಗುತ್ತಿತ್ತು. ಈಗ ಅಂಬೇಡ್ಕರ್‌ ಜೀವನದ ಮತ್ತೊಂದು ಘಟ್ಟವನ್ನು ತೋರಿಸಲು ಜೀ ಕನ್ನಡ ವಾಹಿನಿ ಸಜ್ಜಾಗಿದೆ. ಶುಕ್ರವಾರದಿಂದ ಅಂದರೆ ಆಗಸ್ಟ್ 20ರಿಂದ ಈ ಎಪಿಸೋಡ್​ಗಳು ಬಿತ್ತರ ಆಗಲಿವೆ. ಇದರ ಪ್ರೋಮೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ವಿಶೇಷ. ಆ ಮೂಲಕ ‘ಮಹಾನಾಯಕ’ ಸೀರಿಯಲ್​ಗೆ ದೊಡ್ಡ ಬೆಂಬಲ ಸಿಕ್ಕಂತಾಗಿದೆ. ಇನ್ನು ಮುಂದೆ ಮಹಾನಾಯಕ ಧಾರಾವಾಹಿ ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದೆ.

ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿಯಾದ ಮಹಾನಾಯಕ ಅಂಬೇಡ್ಕರ್ ಇದೀಗ ಮತ್ತೆ ಶುರುವಾಗಲಿದೆ. ಜೀ಼ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಎದುರಿಸಿದ ಅವಮಾನ, ಸವಾಲುಗಳನ್ನು ಅಧ್ಭುತವಾಗಿ ತೋರಿಸಲಾಗಿತ್ತು. ಮಡಿವಂತಿಕೆ ಮೇಲು ಕೀಳು ಎಂಬ ಅನಿಷ್ಟ ಪದ್ದತಿಗಳ ದಿಕ್ಕರಿಸಿ ಅಂಬೇಡ್ಕರ್ ತಮ್ಮ ಬಾಲ್ಯದಲ್ಲಿಯೇ ಯಾವ ರೀತಿಯಾಗಿ ದನಿ ಎತ್ತಿದ್ದರು. ಅದರಿಂದ ಅವರು ಅನುಭವಿಸಿದ ಸಮಸ್ಯೆ ಎಂತದ್ದು ಎಂಬುದರ ಜೊತೆಗೆ ಶಿಕ್ಷಣದ ಮಹತ್ವವನ್ನು ಸಾರಿತ್ತು.

ಅಂಬೇಡ್ಕರ್ ಅವರ ಬಾಲ್ಯದ ಪಾತ್ರದಲ್ಲಿ ಬಾಲ ನಟ ಆಯುಧನ್ ನಟನೆ ಮಾಡಿದ್ದರು. ಈ ಬಾಲ ನಟನ ಅಭಿನಯ ನಿಜಕ್ಕೂ ಕೂಡ ಅಮೋಘವಾಗಿತ್ತು. ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಈ ಸೀರಿಯಲ್​ಗೆ ದೊಡ್ಡ ಪ್ರೇಕ್ಷಕವರ್ಗ ಮನ ಸೋತಿದೆ. ಮಹಾನಾಯಕ ಅಂಬೇಡ್ಕರ್ ಜೀವನದ ಕಥೆ ಬೆರಗು ಮೂಡಿಸುವಂತಿದೆ. ಈವರೆಗೆ ಎಲ್ಲರನ್ನೂ ಮೋಡಿ ಮಾಡಿದ ಬಾಲಕ ಭೀಮ ಇನ್ನುಮುಂದೆ ಯುವಕನಾಗಿ ವೀಕ್ಷಕರ ಮುಂದೆ ಬರಲಿದ್ದಾರೆ. ಆ ಮೂಲಕ ಸೀರಿಯಲ್​ನಲ್ಲಿ ಅಂಬೇಡ್ಕರ್ ಬದುಕಿನ ಮತ್ತೊಂದು ಮುಖ್ಯ ಘಟ್ಟ ತೆರೆದುಕೊಳ್ಳಲಿದೆ. ಬಸವರಾಜ ಬೊಮ್ಮಾಯಿ ಅವರಿಂದ ಇದರ ಪ್ರೋಮೋ ಅನಾವರಣಗೊಂಡಿದ್ದು ವಿಶೇಷ.

ಅನೇಕ ಕಾರಣಗಳಿಂದಾಗಿ ಈ ಸೀರಿಯಲ್​ ಒಂದು ಬಗೆಯ ಸಂಚಲನ ಮೂಡಿಸಿದೆ. ಆರಂಭದಿಂದಲೂ ಈ ಧಾರಾವಾಹಿಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನೂರಾರು ಜನರು ಒಟ್ಟಾಗಿ ಕೂತು ಎಲ್.ಇ.ಡಿ. ಸ್ಕ್ರೀನ್​ಗಳಲ್ಲಿ ವೀಕ್ಷಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ಇದರ ಟೈಟಲ್ ಸಾಂಗ್​ ಕೂಡ ಸೂಪರ್​ ಹಿಟ್​. ಇದೆಲ್ಲದರ ಪರಿಣಾಮ ಬೇಡಿಕೆ ಕೂಡ ಹೆಚ್ಚಿತು. ಮೊದಲು ಕೇವಲ ವೀಕೆಂಡ್​ನಲ್ಲಿ ಪ್ರಸಾರವಾಗುತ್ತಿದ್ದ ಮಹಾನಾಯಕ ಸೀರಿಯಲ್​ ಬಳಿಕ ದೈನಂದಿನ ಧಾರಾವಾಹಿಯಾಗಿ ಬದಲಾಯಿತು.

ಈ ಧಾರಾವಾಹಿಯಲ್ಲಿ ಅಭಿನಯಿಸಿದ ಬಾಲ ನಟ ಆಯುಧನ್ ನಿಜಕ್ಕೂ ಕೂಡ ಅಂಬೇಡ್ಕರ್ ಅವರು ಬಾಲ್ಯದಲ್ಲಿ ಹೀಗಿದ್ದರೇ ಅನ್ನುವಷ್ಟು ಅದ್ಭುತವಾಗಿ ನಟನೆ ಮಾಡಿದ್ದರು. ಈ ನಟನೆಯೂ ಕೂಡ ಒಂದು ರೀತಿಯಾಗಿ ಮಹಾನಾಯಕ ಧಾರಾವಾಹಿ ನಾಡಿನಾದ್ಯಂತ ಅತ್ಯಂತ ಜನಪ್ರಿಯವಾಗುವುದಕ್ಕೆ ಕಾರಣವಾಗಿದೆ ಎನ್ನಬಹುದು. ಇದೀಗ ಅಂಬೇಡ್ಕರ್ ಅವರ ಬಾಲ್ಯದ ಸರಣಿ ಅಂತ್ಯಗೊಂಡಿದೆ. ಈಗ ಅಂಬೇಡ್ಕರ್ ಅವರ ಪ್ರೌಢಾವಸ್ಥೆಯ ಸರಣಿ ಪ್ರಸಾರ ಆಗಲಿದೆ.

ಅಂಬೇಡ್ಕರ್ ಅವರ ಪ್ರೌಢಾವಸ್ಥೆಯ ಪಾತ್ರದಲ್ಲಿ ಇದೀಗ ನಟ ಅಥರ್ವ್ ಕಾರ್ವೆ ಅಭಿನಯಿಸಲಿದ್ದಾರೆ. ನಟ ಅಥರ್ವ್ ಕಾರ್ವೆ ಈ ಹಿಂದೆ ಹಿಂದಿಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಮಹಾನಾಯಕ ಅಂಬೇಡ್ಕರ್ ಧಾರಾವಾಹಿ ಇದೇ ಆಗಸ್ಟ್ 20ರಿಂದ ಪ್ರಸಾರ ಆಗಲಿದೆ. ಇತ್ತೀಚೆಗೆ ಈ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದಾರೆ. ಒಟ್ಟಾರೆಯಾಗಿ ಈ ಮಹಾನಾಯಕ ಬಿ.ಆರ್ ಅಂಬೇಡ್ಕರ್ ಧಾರಾವಾಹಿಯನ್ನು ಮತ್ತೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳುವ ‘ಮಹಾನಾಯಕ ಅಂಬೇಡ್ಕರ್‌’ ಧಾರಾವಾಹಿಯ ವಿಶೇಷ ಪ್ರೊಮೋವನ್ನು ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಅಭೂತಪೂರ್ವ ಯಶಸ್ಸು ನೀಡಿದ ಜೀ ಕನ್ನಡ ವೀಕ್ಷಕರಿಗೆ ನಮ್ಮ ಕೃತಜ್ಞತೆಗಳು. ಮಹಾನಾಯಕನ ಬಾಲ್ಯದ ಜೀವನ, ಅವರ ಹೋರಾಟದ ಬದುಕಿನ ಕಥೆಗೆ ನೀಡಿದಂತಹ ಬೆಂಬಲವನ್ನು ಯುವ ಅಂಬೇಡ್ಕರ್ ಕಥೆಗೂ ನೀಡಿ ಆದರಿಸುತ್ತಾರೆ ಎಂಬ ಭರವಸೆ ನಮ್ಮದು’ ಎಂದು ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.

ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿ ಮಾಡಿರುವ ಸಾಧನೆಗಳು ಒಂದೆರಡಲ್ಲ. ಇದರ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್​ ಬಿಡುಗಡೆ ಮಾಡಲಾಗಿದೆ. ಧಾರಾವಾಹಿಯ ಪೋಸ್ಟರ್​ಗಳು ಮಾರುಕಟ್ಟೆಗೆ ಬಂದಿವೆ. ಒಂದು ಧಾರಾವಾಹಿಗೆ ಈ ರೀತಿಯ ಪ್ರತಿಕ್ರಿಯೆ ಹಿಂದೆಂದೂ ಸಿಕ್ಕಿರಲಿಲ್ಲ ಎಂದು ಹೆಮ್ಮೆಪಡುತ್ತಿದೆ ಜೀ ಕನ್ನಡ ವಾಹಿನಿ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!