ಅತ್ತೆ ಮಾವನ ಮುಂದೆ ಚಾಲೆಂಜ್ ಹಾಕಿ ಮದುವೆಯಾದ 2 ವರ್ಷದಲ್ಲೇ ಹೆಂಡತಿಯನ್ನು PSI ಮಾಡಿದ ಗಂಡನ ರಿಯಲ್ ಸ್ಟೋರಿ ನೋಡಿ..

0 43,637

ಭಾರತದ ಪರಂಪರೆಯ ಪ್ರಕಾರ ಮದುವೆಯಾದರೆ ಸಾಕು ಗಂಡನ ಮನೆಗೆ ಹೋಗಿ ಸಂಸಾರದ ಬಂಡಿಯನ್ನು ಹೆಗಲ ಮೇಲೆ ಏರಿಸಿಕೊಂಡು ಜವಾಬ್ದಾರಿಯ ಜೀವನ ಸಾಗಿಸಿಕೊಂಡು ಹೋಗುವುದೇ ದೊಡ್ಡ ಕೆಲಸವಾಗಿಬಿಡುತ್ತದೆ. ಮುಂದೆ ಮನೆ ಮಕ್ಕಳು ಗಂಡ ಎನ್ನುತ್ತ ಸಂಸಾರ ನಡೆಸಿಕೊಂಡು ಹೋಗುವುದೇ ಆಗಿಬಿಡುತ್ತದೆ. ಆದರೆ ಇದಕ್ಕೆ ಅಪವಾದ ಎನ್ನುವ ಹಾಗೇ ಸಾಕ್ಷಿಯಾಗಿ ಜಯದೀಪ ಪಿಸಾಳ ಹೆಸರಿನ ವ್ಯಕ್ತಿ ಉದಾಹರಣೆಯಾಗಿದ್ದಾರೆ. ಅವರ ಬಗ್ಗೆ ತಿಳಿದರೆ ಅವರಿಗೆ ನೀವು ಕೂಡಾ ಒಂದು ಸೆಲ್ಯೂಟ್ ಹೊಡೆಯುತ್ತೀರಿ. ಅವರು ಏನು ಮಾಡಿದ್ದಾರೆ ಅಂತಹ ಕೆಲಸ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆತನಿಗೆ ತನ್ನ ಹುಟ್ಟೂರಿನ ಸೇವೆ ಮಾಡುವ ಹಂಬಲವಿತ್ತು. ಎರಡು ಸಲ ನೌಕರಿ ಬಂದರೂ ನೌಕರಿಗೆ ಹೋಗಲಿಲ್ಲ. ಊರಲ್ಲಿಯೇ ಏನಾದರೂ ಮಾಡಬೇಕೆಂದು ಹೋಂಡಾ ಕಂಪನಿಯ ಫ್ರೆಂಚಾಯಾಜಿ ತೆಗೆದುಕೊಂಡನು. ಮುಂದೆ ರಾಜಕೀಯದಲ್ಲಿ ಸೇರಿ ತನ್ನೂರಾದ ಪಳಶಿಯ ಸರಪಂಚ್ ಆದನು. ಆಮೇಲೆ ಊರಿನಲ್ಲಿ ರಸ್ತೆಯಿಂದ ಹಿಡಿದು ಶೌಚಾಲಯ ವ್ಯವಸ್ಥೆಯವರೆಗೆ ಅನೇಕ ಸುಧಾರಣೆಯ ಕೆಲಸಗಳನ್ನು ಮಾಡಿದನು. ಇಷ್ಟೆಲ್ಲಾ ಮಾಡಿದ ಆ ವ್ಯಕ್ತಿ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ನಿವಾಸಿ ಜಯದೀಪ ಚಿಕ್ಕಂದಿನಿಂದಲೇ ಕಷ್ಟದ ಜೀವನದಲ್ಲಿ ಒಳ್ಳೆಯ ಶಿಕ್ಷಣವನ್ನು ಪಡೆದ ವ್ಯಕ್ತಿ.

ಸಾತಾರಾ ಜಿಲ್ಲೆಯ ವಾಠಾರ್ ಎಂಬ ರೈಲ್ವೆ ಸ್ಟೇಶನ್ ನಲ್ಲಿ ಕಬ್ಬಿನ ಹಾಲು ಮಾರಿ ಜೀವನ ನಡೆಸುತ್ತಿದ್ದ. ಈ ಸ್ಟೇಶನ್ ನಲ್ಲಿ ರೈಲು ಬರೀ ಮೂರು ನಿಮಿಷ ನಿಲ್ಲುತ್ತಿತ್ತು. ಆ ಮೂರು ನಿಮಿಷದಲ್ಲಿಯೇ 12 ರಿಂದ 15 ಗ್ಲಾಸ್ ಕಬ್ಬಿನ ಹಾಲನ್ನು ಮಾರಿ ಸ್ವಲ್ಪ ಹಣವನ್ನು ಕೂಡಿ ಹಾಕಿದ್ದ. ಹಾಗೇ ಆ ಹಣದಲ್ಲಿ ಬಹಳ ಪ್ರಯತ್ನ ಪಟ್ಟು MPSC ಪರೀಕ್ಷೆ ಬರೆದು ಅದರಲ್ಲಿ ಎರಡು ಸಲ ಪಾಸಾದನು. ಒಂದು PSI ಮತ್ತೊಂದು ಸಲ ಬೇರೆ ಪೋಸ್ಟ್ ಸಿಕ್ಕಿತು. ಆದರೆ ಜಯದೀಪನ ಮನಸ್ಸು ಅದರಲ್ಲಿರಲಿಲ್ಲ.  

ಜಾಣನಾಗಿಯೂ ದೊಡ್ಡ ಹುದ್ದೆಯನ್ನು ಬಿಟ್ಟು ಊರಲ್ಲಿಯೇ ಕುಳಿತ ಜಯದೀಪನ ಬಗ್ಗೆ ಜನರು ಮಾತ್ರ ಹಿಂದಿನಿಂದ ಹೆಸರಿಡಲು, ಚೇಷ್ಟೆ ಮಾಡಲು ಶುರು ಮಾಡಿದರು. ಯುವಕರು ತುಚ್ಛವಾಗಿ ಕಾಣಲು ಪ್ರಾರಂಭಿಸಿದರು. ಆದರೆ ಇದೆಲ್ಲ ಜಯದೀಪನ ಮೇಲೆ ಯಾವ ಪರಿಣಾಮವು ಬೀರಲಿಲ್ಲ. ಅದೇ ಸಮಯಕ್ಕೆ ಕಲ್ಯಾಣಿ ಹೆಸರಿನ ಯುವತಿಯ ಮೇಲೆ ಮನಸ್ಸು ಹೋಯಿತು. ಹೆಣ್ಣು ಕೇಳಿದಾಗ ಕಲ್ಯಾಣಿಯ ಮನೆಯವರು ಆಕೆಯನ್ನು ಜಯದೀಪನಿಗೆ ಕೊಡಲು ನಿರಾಕರಿಸಿದರು.

ಕಲ್ಯಾಣಿಯ ತಂದೆ ಸಹಿತ ನೌಕರಿ ತ್ಯಜಿಸಿದ ಕಾರಣಕ್ಕಾಗಿ ಜಯದೀಪನ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಆದರೆ ಜಯದೀಪ ಮಾತ್ರ ಕಲ್ಯಾಣಿಯ ತಂದೆಗೆ ನಿಮ್ಮ ಮಗಳನ್ನು ಮದುವೆಯಾದ ಎರಡೇ ವರ್ಷಗಳಲ್ಲಿ PSI ಮಾಡಿ ತೋರಿಸುವೆ ಎಂದು ಚಾಲೆಂಜ್ ಮಾಡಿದನು. ಮುಂದೆ ಆತನ ಮದುವೆ ಕಲ್ಯಾಣಿಯ ಜೊತೆಗೆ ನಡೆಯಿತು. ಮದುವೆಯ ನಂತರ ಆಕೆಯನ್ನು ಹನಿಮೂನಿಗೆ ಕರೆದೊಯ್ಯುದೆ ಆಕೆಗೆ ಒಂದು ಸ್ವತಂತ್ರ ರೂಮ್ ನೀಡಿ ಜೊತೆಗೆ ಕೆಲವು ಪುಸ್ತಕಗಳನ್ನು ನೀಡಿ ಹಾಗೆಯೇ ಅಭ್ಯಾಸ ಮಾಡಲು ಹೇಳಿದನು.

ಜಯದೀಪನು ಕಲ್ಯಾಣಿಗೆ ಅಭ್ಯಾಸದಲ್ಲಿಯ ತಂತ್ರಗಳನ್ನು ಹೇಳಿಕೊಡಲು ಪ್ರಾರಂಭಿಸಿದನು. ಪತ್ನಿ ಎಂದು ಆಕೆಯ ಜೊತೆಗೆ ಚೇಷ್ಟೆ ಮಾಡಿ ಸಮಯ ಹಾಳು ಮಾಡದೆ ಜನರಲ್ ನಾಲೆಜ್ ಜ್ಞಾನವನ್ನು ತಾನೇ ಹೇಳಿಕೊಡಲು ಶುರು ಮಾಡಿದನು. ಹೀಗೆ ಎರಡು ವರ್ಷಗಳ ನಂತರ ಜಯದೀಪ ತಾನು ಕೊಟ್ಟ ಮಾತನ್ನು ನಿಜವನ್ನಾಗಿ ಮಾಡಿ ತೋರಿಸಿದ. ಎರಡು ವರ್ಷದ ಸಮಯದಲ್ಲಿ ಆಕೆಗೆ MPSC ಪರೀಕ್ಷೆ ಉತ್ತೀರ್ಣ ಮಾಡಿಸಿದ. ನಂತರ ಆಕೆಯ ಟ್ರೇನಿಂಗ್ ಪ್ರಾರಂಭವಾಯಿತು.

ಇದನ್ನೆಲ್ಲಾ ನೋಡಿದ ಮಾವ ಅಳಿಯನಿಗೆ, ಅಳಿಯರೆ ಹೋಂಡಾ ಶೋರೂಮ್ ವ್ಯವಸಾಯ ಚೆನ್ನಾಗಿ ನಡೆಯಿತು, ಊರಲ್ಲಿ ನೀವೇ ಸರಪಂಚ್, ಜನರು ನಮಸ್ಕಾರ ಮಾಡುತ್ತಾರೆ, ಹೆಂಡತಿ PSI ಇನ್ನು ಯಾವ ಕನಸು ಬಾಕಿ ಉಳಿದಿದೆ? ಹೇಳಿ ಎಂದರು. ಆಗ ಜಯದೀಪ ಮಾವ ಎಲ್ಲವೂ ಸಿಕ್ಕರೂ ಇನ್ನೂ ಒಂದೇ ಒಂದು ಕನಸು ಬಾಕಿ ಉಳಿದಿದೆ ಅದನ್ನಿಷ್ಟು ಮಾಡಬೇಕಾಗಿದೆ ಎಂದಾಗ, ಅದು ಯಾವುದು ಎಂದು ಮಾವ ಕೇಳಿದ. ಕಲ್ಯಾಣಿ ಟ್ರೇನಿಂಗ್ ಮುಗಿಸಿ ಬಂದ ಮೇಲೆ ಯೂನಿಫಾರ್ಮ್ ನಲ್ಲಿದ್ದಾಗ ಆಕೆಗೆ ಒಂದು ಸೆಲ್ಯೂಟ್ ಹೊಡೆಯುವ ಆಸೆ ಇದೆ ಎಂದು ಹೇಳಿದನು.

ಸದ್ಯ ಕಲ್ಯಾಣಿ ಮುಂಬಯಿ ಪೊಲೀಸ್ ನಲ್ಲಿ PSI ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯ ನಂತರ ಪತ್ನಿಗೆ ಹನಿಮೂನಿಗೆ ಕರೆದುಕೊಂಡು ಹೋಗದೆ ಸತತ ಎರಡು ವರ್ಷಗಳ ವರೆಗೆ ಅಭ್ಯಾಸ ಮಾಡಿಸಿಕೊಂಡು ಆಕೆಯನ್ನು PSI ಮಾಡಿಸಿ ಆಕೆಗೆ ಗೌರವದ ಸೆಲ್ಯೂಟ್ ಹೊಡೆದ ಜಯದೀಪನಿಗೆ ಒಂದು ಮೆಚ್ಚುಗೆಯನ್ನು ಸಲ್ಲಿಸಬೇಕು.

Leave A Reply

Your email address will not be published.