ಮಹಾಭಾರತದಲ್ಲಿ ಪಾಂಡವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಪಾಂಡವರಲ್ಲಿ ಧರ್ಮಕ್ಕೆ ಧರ್ಮನಂದನ ಯುಧಿಷ್ಠಿರ, ಶೌರ್ಯಕ್ಕೆ ಅರ್ಜುನ ಮತ್ತು ಬಲಕ್ಕೆಭೀಮ ಎಂದು ಪ್ರಸಿದ್ಧಿ ಪಡೆದಿದ್ದಾರೆ.ಈ ಮೂವರು ಪ್ರಸಿದ್ಧಿ ಹೊಂದಿದಷ್ಟು ನಕುಲ ಮತ್ತು ಸಹದೇವ ಪ್ರಸಿದ್ಧಿ ಹೊಂದಿಲ್ಲ.ನಾವು ಇಲ್ಲಿ ನಕುಲ ಮತ್ತು ಸಹದೇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಕುಲ ಮತ್ತು ಸಹದೇವರು ಮಾದ್ರಿಯ ಮಕ್ಕಳು. ಮಾದ್ರಿ ಪಾಂಡುವಿನ ಎರಡನೇ ಪತ್ನಿ.ಇವರು ಮಾದ್ರಿಯ ವರಪುತ್ರರೇ ಆಗಿದ್ದರೂ ವರ ಕರುಣಿಸಿದ್ದು ಕುಂತಿ. ಮಹಾಮುನಿಯ ಶಾಪದಿಂದ ಪಾಂಡುವು ಅವನ ಶಯನಸುಖವನ್ನೇ ಕಳೆದುಕೊಂಡಿದ್ದ.ಇದೇ ವೈರಾಗ್ಯದಲ್ಲಿ ಸಿಂಹಾಸನವನ್ನು ತೊರೆದು ಅರಣ್ಯವಾಸಕ್ಕೆ ತೆರಳಿ ಜೀವನ ನಡೆಸುತ್ತಿದ್ದರು ಪಾಂಡು,ಕುಂತಿ ಮತ್ತು ಮಾದ್ರಿ.ಸಾತ್ವಿಕ ಆಹಾರವನ್ನು ಸೇವಿಸುತ್ತಿದ್ದರು.ಸಮಯಗಳನ್ನು ಕಳೆಯಲು ಜಪತಪಗಳನ್ನು ಮಾಡುತ್ತಿದ್ದರು.

ಆ ಕಾಲದಲ್ಲಿ ಮಹಾರಾಜ ಎಷ್ಟು ಮದುವೆಯಾಗುವನೋ ಅಷ್ಟು ಪರಾಕ್ರಮಿ ಎಂದು ಹೇಳಲಾಗುತ್ತಿತ್ತು.ಬಾವುಟ ನೆಟ್ಟಲ್ಲೆಲ್ಲಾ ಒಬ್ಬೊಬ್ಬ ರಾಜಕುಮಾರಿಯನ್ನು ಗೆಲ್ಲುವ ಅವಕಾಶ ಇತ್ತು.ಇಲ್ಲವೇ ಸೋತಿದ್ದಕ್ಕಾಗಿ ಸೋತರಾಜರು ಗೆದ್ದವರಿಗೆ ರಾಜಕುಮಾರಿಯನ್ನೇ ನೀಡುತ್ತಿದ್ದರು.ಹಾಗೆಯೇ ದೊರೆತವಳು ಮಾದ್ರಿ. ಬಹಳ ಸುಂದರ ಹೆಣ್ಣು ಮಗಳು ಅಸಹಜವಾಗಿ ಕುಂತಿಗಿಂತ ಸ್ವಲ್ಪ ಹೆಚ್ಚು ಎಂದು ಹೇಳಬಹುದು.ಆದ್ದರಿಂದ ಪಾಂಡುವಿಗೆ ಮಾದ್ರಿಯ ಮೇಲೆ ಬಹಳ ಮೋಹವಿತ್ತು.ಪಾಂಡುವಿನ ದೋಷವನ್ನು ಅರಿತ ಕುಂತಿ ತನಗೆ ದೂರ್ವಾಸ ಮುನಿಗಳು ನೀಡಿದ ವರದ ಬಗ್ಗೆ ಹೇಳುತ್ತಾಳೆ.

ಅದರಂತೆ ಕುಂತಿ ಧರ್ಮರಾಯನಿಂದ ಯುಧಿಷ್ಠಿರನನ್ನು, ವಾಯುದೇವರಿಂದ ಭೀಮನನ್ನು, ಇಂದ್ರನಿಂದ ಅರ್ಜುನನನ್ನು ಪಡೆದಳು.ಇದರಿಂದ ಹೊಟ್ಟೆಉರಿ ಆದ ಮಾದ್ರಿ ಕುಂತಿಯನ್ನು ನಿಂದಿಸಲು ಶುರು ಮಾಡಿದಳು.ಎಷ್ಟೇ ನೋವಾದರೂ ಬೇಸರಮಾಡಿಕೊಳ್ಳದೇ ಮಾದ್ರಿಗೂ ಸಹ ಸಂತಾನದ ಸುಖ ನೀಡಿದಳು.ಇದರ ಫಲವೇ ನಕುಲ ಮತ್ತು ಸಹದೇವ. ಇವರು ಅಶ್ವಿನಿ ದೇವತೆಗಳ ಆಶೀರ್ವಾದದಿಂದ ಜನಿಸಿದರು.ಮುಂದೆ ಮಕ್ಕಳಾದರೂ ಸಹ ಪಾಂಡುವಿನ ಪ್ರಾಣವನ್ನೇ ಕಸಿದುಕೊಂಡಳು.

ಐವರಲ್ಲಿ ಆ ಕಾಲಕ್ಕೆ ನಕುಲ ಅತ್ಯಂತ ಸುಂದರ ರಾಜಕುಮಾರ ಆಗಿದ್ದ.ಅವನ ಮುಖ ಬಹಳ ಮೋಹಕವಾಗಿದ್ದು ಆ ಕಾಲದ ಕಾಮದೇವ ಎಂದು ಕರೆಯಲಾಗುತ್ತಿತ್ತು.ಕುದುರೆಗಳನ್ನು ಪಳಗಿಸಲು ನಕುಲ ಬಹಳ ಪ್ರವೀಣನಾಗಿದ್ದ. ನಕುಲನು ಕುದುರೆಗಳ ಯಾವುದೇ ರೋಗವನ್ನು ಕ್ಷಣಮಾತ್ರದಲ್ಲಿ ಕಡಿಮೆ ಮಾಡುತ್ತಿದ್ದ.ಇವನು ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಸ್ಯೆನ್ಯದ ಲಕ್ಷಾಂತರ ಕುದುರೆಗಳನ್ನು ಉಳಿಸಿದ್ದ.ಅಜ್ಞಾತವಾಸದ ಸಮಯದಲ್ಲಿ ನಕುಲ ಮತ್ಸ್ಯದೇಶದ ರಾಜ ವಿರಾಟನ ಕುದುರೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದ.ಈತನು ಪರಾಕ್ರಮಿ ಕೂಡ ಆಗಿದ್ದು ರಾಜಸೂಯಯಜ್ಞದ ಸಮಯದಲ್ಲಿ ಅನೇಕ ರಾಜರುಗಳನ್ನು ಸೋಲಿಸಿ ಬಂದಿದ್ದ.

ಸಹದೇವ ಎಂದರೆ ದೇವರ ಜೊತೆ ವಾಸಿಸುವವ ಎಂದು ಅರ್ಥ. ಸಹದೇವನು ಹೆಸರಿಗೆ ತಕ್ಕಂತೆ ದೈವಜ್ಞ ಮತ್ತು ಕಾಲದರ್ಶಿಯಾಗಿದ್ದ.ಭವಿಷ್ಯದ ವಿಚಾರಗಳು ಇವನಿಗೆ ತಿಳಿಯುತ್ತಿತ್ತು.ಎಲ್ಲರಿಗೂ ಉದ್ಭವಿಸುವ ಪ್ರಶ್ನೆ ಎಂದರೆ ”ಮಹಾಭಾರತ ಯುದ್ಧದ ಬಗ್ಗೆ ತಿಳಿದಿರಲಿಲ್ಲವೇ” ಎನ್ನುವುದು.ಆದರೆ ಇವನಿಗೆ ಎಲ್ಲಾ ತಿಳಿದಿತ್ತು.ಯಾರಿಗೂ ಹೇಳಲಿಲ್ಲ. ಕಾರಣ ಇವನು ಹೇಳಿದರೆ ಅವನ ಸಾವು ನಿಶ್ಚಯವಾಗಿತ್ತು. ತಂದೆ ಪಾಂಡು ತಾನು ಸಾಯುವ ಮುನ್ನ ತನ್ನ ಕೊನೆ ಆಸೆ ತಿಳಿಸಿದ್ದ.ಅದೇನೆಂದರೆ ತನ್ನ ಮೆದುಳನ್ನು ಎಲ್ಲ ಮಕ್ಕಳೂ ತಿನ್ನಬೇಕು.ಇದರಿಂದ ತನ್ನ ಜ್ಞಾನ ಎಲ್ಲರಿಗೂ ಹೋಗಬೇಕು ಎಂದು. ಆದರೆ ಇದಕ್ಕೆ ನಾಲ್ವರು ಒಪ್ಪಲಿಲ್ಲ. ಸಹದೇವ ಮಾತ್ರ ಮೆದುಳನ್ನು ಮೂರು ಭಾಗವಾಗಿ ತಿಂದ.ಇದರ ಫಲವಾಗಿ ಸಹದೇವ ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು ಅರಿಯುವ ಸಾಮರ್ಥ್ಯ ಹೊಂದಿದ್ದ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave a Reply

Your email address will not be published. Required fields are marked *