ದೇವರ ಧ್ಯಾನವನ್ನು ಮಾಡಬೇಕು. ಹಾಗೆಯೇ ಮೋಜು ಮಸ್ತಿಯನ್ನು ಕೂಡ ಮಾಡಬೇಕು. ನೀರಿನಲ್ಲಿ ಈಜಬೇಕು ಎನ್ನುವುದಾದರೆ ಇರುವುದು ಒಂದೇ ಜಾಗ ಅದು ಉತ್ತರಕನ್ನಡ ಜಿಲ್ಲೆಯ ಓಂ ಬೀಚ್.ನಾವು ಇಲ್ಲಿ ಓಂ ಬೀಚ್ ಮತ್ತು ಗೋಕರ್ಣ ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಓಂ ಬೀಚ್ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿದೆ.ಶಿವನ ಆತ್ಮಲಿಂಗವೇ ಭೂಮಿಯನ್ನು ಸ್ಪರ್ಶಿಸಿದ ಮಹಾನ್ ಸ್ಥಳ ಗೋಕರ್ಣ.ಗೋಕರ್ಣ ಕೇವಲ ಪುಣ್ಯಕ್ಷೇತ್ರವಲ್ಲ ಇದು ಸೌಂದರ್ಯದ ನೆಲೆಬೀಡು.ಪ್ರಕೃತಿ ದೇವಿಯ ಈ ಅನುಗ್ರಹಕ್ಕೆ ಪಾತ್ರವಾದ ಸಿರಿನಾಡು.ಸುಂದರ ಬೆಟ್ಟಗುಡ್ಡಗಳ ಮಡಿಲಲ್ಲಿ ಮೈ ಚಳಿರುವ ಸಮುದ್ರದಲ್ಲಿ ಈ ಊರು ಆಸ್ತಿಕ ಹಾಗೂ ನಾಸ್ತಿಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಗೋಕರ್ಣವು ಎಷ್ಟು ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿದೆಯೋ ಅಷ್ಟೇ ಪ್ರವಾಸೀತಾಣವಾಗಿ ಪ್ರಸಿದ್ಧಿ ಪಡೆದಿದೆ.ಮುಖ್ಯವಾಗಿ ಗೋಕರ್ಣ ಬೀಚ್ ಗಳಿಗೆ ಪ್ರಸಿದ್ಧಿ ಆಗಿದೆ.ಸಾಕಷ್ಟು ಜಲತೀರಗಳಲ್ಲಿ ಜಲಕ್ರೀಡೆ ಆಡಬಹುದು.

ಪ್ರತಿವರ್ಷ ಪ್ರವಾಸಿಗರು ಗೋಕರ್ಣಕ್ಕೆ  ಬಂದು ಮಹಾಬಲೇಶ್ವರನ ದರ್ಶನ ಪಡೆದು ಮೋಕ್ಷವನ್ನು ಹುಡುಕುವವರು ಕೆಲವರು ಆದರೆ ಇನ್ನೂ ಕೆಲವರು ತಮ್ಮ ಸ್ನೇಹಿತರ ಜೊತೆ ಮೋಜು ಮಸ್ತಿ ಪಡೆಯುವವರು ಕೆಲವರು.ಹಾಗೆಯೇ ವಿಶ್ರಾಂತಿಗಾಗಿ ಗೋಕರ್ಣ ಬೀಚ್ ಗೆ ಬರುವವರು ತುಂಬಾ ಜನ ಇದ್ದಾರೆ.ಇಲ್ಲಿಗೆ ದೇಶ ವಿದೇಶದಿಂದ ಸಾವಿರಾರು ಜನರು ಆಗಮಿಸುತ್ತಾರೆ.ಇಲ್ಲಿಯೇ ಬಿಡಾರ ಹೂಡಿ ವಾರಗಟ್ಟಲೆ  ಅಥವಾ ತಿಂಗಳುಗೆಟ್ಟಲೆ ಇದ್ದು ಆನಂದವನ್ನು ಅನುಭವಿಸುತ್ತಾರೆ.ಇದು ದೇಶದಲ್ಲೇ ಪ್ರಮುಖ ಬೀಚ್ ಗಳಲ್ಲಿ ಒಂದಾಗಿದೆ.

ಗೋಕರ್ಣ ತೆಂಗಿನಮರಗಳು ಮತ್ತು ತಾಳೆಮರಗಳು ಮತ್ತು ಸ್ವಚ್ಛವಾದ ಮರಳುಗಳಿಂದ ಕೂಡಿದೆ.ಇದರ ಹತ್ತಿರದಲ್ಲಿ ಹಲವಾರು ಬೀಚ್ ಗಳಿವೆ.ಅದರಲ್ಲಿ ಓಂ ಬೀಚ್ ಮತ್ತು ಕೂಡ್ಲೆ ಬೀಚ್ ವಿಶೇಷವಾಗಿದೆ.ಓಂ ಬೀಚ್ ತನ್ನ ಆಕಾರದಿಂದಲೇ ಈ ಹೆಸರನ್ನು ಪಡೆದುಕೊಂಡಿದೆ.ಅಂದರೆ ಈ ಕಡಲ ತೀರ ಓಂ ಆಕಾರದಲ್ಲಿ ಇದೆ.ಕೂಡ್ಲೆ ಬೀಚ್ ತನ್ನ ಸ್ವಚ್ಛತೆಯಿಂದ ಪ್ರವಾಸಿಗರನ್ನು ಸೆಳೆಯುತ್ತದೆ.ಅರ್ಧಚಂದ್ರಾಕೃತಿಯಲ್ಲಿರುವ ಈ ಬೀಚ್ ನಯನ ಮನೋಹರವಾಗಿದೆ.ಗೋಕರ್ಣವು ಹತ್ತಿರದ ನಗರಗಳೊಂದಿಗೆ ಉತ್ತಮ ರಸ್ತೆಯ ಸಂಪರ್ಕ ಹೊಂದಿದೆ.

ಒಂದು ವೇಳೆ ಇಲ್ಲಿಗೆ ವಿಮಾನದ ಮೂಲಕ ತಲುಪುವುದಾದರೆ ಹುಬ್ಬಳ್ಳಿ ಅಥವಾ ಗೋವಾದ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು.ಗೋಕರ್ಣದಲ್ಲಿ ರೈಲ್ವೆಯ ನಿಲ್ದಾಣ ಕೂಡ ಇದೆ.ಗೋಕರ್ಣವು ಬೆಳಗಾವಿಯಿಂದ 236km ದೂರದಲ್ಲಿ, ಹುಬ್ಬಳ್ಳಿ ಧಾರವಾಡದಿಂದ 158km, ಮಂಗಳೂರಿನಿಂದ 230km, ಬೆಂಗಳೂರಿನಿಂದ 482km ದೂರದಲ್ಲಿ ಇದೆ.ಇಲ್ಲಿಗೆ ಯಾವಾಗ ಬೇಕಾದರೂ ಭೇಟಿ ನೀಡಬಹುದು ಏಕೆಂದರೆ ಇದು ಪ್ರತಿ ಋತುವಿನಲ್ಲಿ ಒಂದೊಂದು ರೀತಿಯಾಗಿ ತನ್ನ ಸೌಂದರ್ಯವನ್ನು ಹೆಚ್ಚಿಸುತ್ತದೆ.ಕೊನೆಯದಾಗಿ ಹೇಳುವುದು ಏನೆಂದರೆ ನೀವು ಸಹ ಗೋಕರ್ಣಕ್ಕೆ ಬಂದು ಎಲ್ಲಾ ಬೀಚ್ ಗಳಲ್ಲಿ ಮೋಜು ಮಸ್ತಿಗಳನ್ನು ಮಾಡಿ ಆನಂದ ಪಡೆಯಿರಿ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave a Reply

Your email address will not be published. Required fields are marked *