ಪ್ರಸ್ತುತ ನಾವು ತೆಗದುಕೊಳ್ಳುತ್ತಿರುವ ಗಾಳಿ ಹೇಗಿದೆ ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಈಗ ನಾವು ಉಸಿರಾಡುವ ಗಾಳಿಯಿಂದ ಪರಿಸರ ಹಾಳಾಗುವುದು ಮಾತ್ರ ಅಲ್ಲ ಈ ಮಾಲಿನ್ಯ ಭರಿತ ಗಾಳಿಯಿಂದ ನಮಗೂ ಕೂಡ ಉಸಿರಾಡಲು ಕಷ್ಟ ಆಗತ್ತೆ ಅದರ ಜೊತೆಗೇ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಸಹ ಕಾಡುತ್ತಿದೆ. ಕೇವಲ ಗಾಳಿಯಿಂದ ಮಾತ್ರ ಅಲ್ಲದೇ ಈಗಿನ ಆಧುನಿಕ ಯುಗದಲ್ಲಿ, ಸ್ಮೋಕಿಂಗ್, ಡ್ರಿಂಕಿಂಗ್ ಇನ್ನು ಇತರ ದೀರ್ಘ ಕಾಲದ ಸಮಸ್ಯೆಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಹತ್ತು ಹಲವಾರು ರೀತಿಯ ಸಮಸ್ಯೆಗಳು ಬರುತ್ತಾ ಇದೆ. ಹಲವಾರು ಜನರಿಗೆ ಧೂಮಪಾನ ಮತ್ತೆ ಮಧ್ಯಪಾನದಿಂದ ಹಾಳಾದ ತಮ್ಮ ಶ್ವಾಸಕೋಶವನ್ನ ಸುಲಭವಾಗಿ ಹೇಗೆ ಸರಿ ಮಾಡಿಕೊಳ್ಳೋದು ಅನ್ನೋ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತೆ. ಹಾಗಾಗಿ ಅಂತವರಿಗೆ ಎಂದೇ ಈ ಲೇಖನದಲ್ಲಿ ಮನೆ ಮದ್ದನ್ನು ತಿಳಿಸಲಾಗಿದೆ ನೋಡಿ.
ಈ ಮದ್ದು ಒಂದು ರೀತಿಯ ಪಾನೀಯ ಇದನ್ನ ಡಿಟೋಕ್ಸ್ ಡ್ರಿಂಕ್ ಅಂತ ಹೇಳ್ತಾರೆ. ಇದನ್ನ ನಾವು ತಿಳಿಸಿದ ಹಾಗೆ ನಿಯಮಿತವಾಗಿ ಪ್ರಮಾಣದಲ್ಲಿ ತೆಗೆದುಕೊಂಡರೆ ಯಾರೇ ಆದರೂ ಕೂಡಾ ಶ್ವಾಸಕೋಶದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಈ ಡಿಟೋಕ್ಸ್ ಡ್ರಿಂಕ್ ಅನ್ನು ಮಾಡೋಕೆ ಸ್ಟೀಲ್ ಪಾತ್ರೆಗೆ ಒಂದು ಲೋಟ ನೀರು, ಒಂದು ವರೆ ಇಂಚು ಅಷ್ಟು ಸಿಪ್ಪೆ ತೆಗೆದ ಚಿಕ್ಕದಾಗಿ ಕಟ್ ಮಾಡಿದ ಹಸಿ ಶುಂಠಿ, ( ಹಸಿ ಶುಂಠಿಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಶ್ವಾಸಕೋಶದಲ್ಲಿ ಸೇರಿರುವ ವಿಷ ವ್ಯರ್ಥ ಪದಾರ್ಥಗಳನ್ನು ಹಿರಗೆ ಹಾಕಲು ತುಂಬಾ ಚೆನ್ನಾಗಿ ಸಹಾಯ ಮಾಡತ್ತೆ.) ಶುಂಠಿ ನಂತರ ಕಾಲು ಭಾಗ ಈರುಳ್ಳಿಯನ್ನ ಚಿಕ್ಕದಾಗಿ ಕಟ್ ಮಾಡಿ ಹಾಕಬೇಕು. ಈರುಳ್ಳಿಯಲ್ಲಿ ಕೂಡ ಆಂಟಿ ಆಕ್ಸಿಡೆಂಟ್ ಅಂಶಗಳು ಅಧಿಕವಾಗಿ ಇರತ್ತೆ. ಇದು ನಮ್ಮ ಶ್ವಾಸಕೋಶಕ್ಕೆ ತುಂಬಾ ಒಳ್ಳೆಯದು. ಈರುಳ್ಳಿ ನಂತರ ಅರ್ಧ ಸ್ಪೂನ್ ಅರಿಶಿನ ಸೇರಿಸಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೋವ್ ಮೇಲೆ ಇಟ್ಟು ಒಂದು ಲೋಟ ನೀರು ಅರ್ಧ ಲೋಟ ಆಗುವವರೆಗೂ ಕುದಿಸಬೇಕು.
ನಾವು ಇಲ್ಲಿ ಬಳಸಿರುವ ಹಸಿ ಶುಂಠಿ, ಅರಿಶಿನ ಹಾಗೂ ಈರುಳ್ಳಿ ಇವು ಮೂರೂ ಪದಾರ್ಥಗಳೂ ಕೂಡಾ ನಮ್ಮ ಶ್ವಾಸಕೋಶದಲ್ಲಿ ಶೇಖರಣೆ ಆದ ವ್ಯರ್ಥ ವಿಷ ಪದಾರ್ಥಗಳನ್ನ ಹೊರ ಹಾಕಲು ಸಹಾಯ ಮಾಡುತ್ತವೆ. ಮುಖ್ಯವಾಗಿ ನಮ್ಮ ಶರೀರದಲ್ಲಿ ಇರುವ ಟ್ಯಾಕ್ಸಿನ್ಸ್ ಅನ್ನು ಹೊರ ಹಾಕಿ, ಶ್ವಾಸಕೋಶದ ಆರೋಗ್ಯವನ್ನ ಕಾಪಾಡುವಲ್ಲಿ ತುಂಬಾ ಸಹಾಯಕಾರಿ ಆಗಿದೆ.
ಕುದಿಸಿದ ಮೂರೂ ಪದಾರ್ಥಗಳು ಮಿಶ್ರಿತ ನೀರನ್ನು ಸ್ವಲ್ಪ ಹೊತ್ತು ಆರಲು ಬಿಟ್ಟು ನಂತರ ಅದನ್ನು ಸೊಸಿಕೊಂಡು, ಒಂದು ಅಥವಾ ಎರಡು ಟಿ ಸ್ಪೂನ್ ಅಷ್ಟು ಜೇನುತುಪ್ಪವನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನ ಒಂದು ಗಾಳಿ ಆಡದ ಬಾಟಲಿ ಅಥವಾ ಡಬ್ಬದಲ್ಲೂ ಶೇಖರಿಸಿ ಫ್ರಿಡ್ಜ್ನಲ್ಲಿ ಅಬ್ಬಬ್ಬಾ ಅಂದರೆ 15 ದಿನ ಆದರೂ ಇಟ್ಟುಕೊಳ್ಳಬಹುದು. ಮಾಡೋದು ಹೇಗೆ ಅಂತ ನೋಡಿ ಆಯ್ತು. ಆದ್ರೆ ಇದನ್ನ ಹೇಗೆ ತಗೊಳೋದು? ಇದನ್ನ ಹೀಗೆ ಮಾಡಿ ಶೇಖರಿಸಿ ಇಟ್ಟುಕೊಂಡು ಬೆಳಿಗ್ಗೆ ಹಾಗೂ ಸಂಜೆ ಅಂತೇ ದಿನಕ್ಕೆ ಎರಡು ಬಾರಿ ತೆಗೆದುಕೊಳ್ಲಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಸ್ಪೂನ್ ಹಾಗೂ ಸಂಜೆ ಅಥವಾ ಮಲಗುವ ಮುನ್ನ 2 ಸ್ಪೂನ್ ತೆಗೆದುಕೊಳ್ಳಬೇಕು. ಒಟ್ಟು ದಿನಕ್ಕೆ 4 ಸ್ಪೂನ್ ಈ ಡ್ರಿಂಕ್ ಅನ್ನು ತೆಗೆದುಕೊಳ್ಳಬೇಕು.
ಒಂದುವೇಳೆ ಮಧ್ಯಪಾನ ಅಥವಾ ಧೂಮಪಾನ ತುಂಬಾ ವರ್ಷಗಳಿಂದ ಅಭ್ಯಾಸದಲ್ಲಿ ಇದ್ದರೆ ಕನಿಷ್ಠ ಪಕ್ಷ ಈ ಔಷಧಿಯನ್ನ ಅಂತವರು 2 ತಿಂಗಳವರೆಗೂ ಮಾಡಲೇಬೇಕು. ಈ ರೀತಿ ಮಾಡಿದ್ತೆ ಉತ್ತಮ ಫಲಿತಾಂಶ ಕಾಣಬಹುದು. ಹಾಗಂತ ಇದನ್ನ ಮಧ್ಯಪಾನ ಅಥವಾ ಧೂಮಪಾನ ಮಾಡುವವರು ಮಾತ್ರ ತೆಗೆದುಕೊಳ್ಳಬೇಕು ಅಂತ ಏನೂ ಇಲ್ಲ. ತುಂಬಾ ಧೂಳಿನಲ್ಲಿ ಓಡಾಡುವವರು, ನಮ್ಮ ಶ್ವಾಸಕೋಶವನ್ನ ಸರಿಯಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅಂತ ಇರುವ ಯಾರೇ ಆದರೂ ಕೂಡ ಇದನ್ನ ಮಾಡಿಕೊಂಡು ಕುಡಿಯಬಹುದು. ಇದರಲ್ಲಿ ಇರುವ ಆಂಟಿ ಇಂಪ್ಲಾಮೇಟರೀ ಗುಣಗಳು ಕೆಮ್ಮು ಹಾಗೂ ಇತರೆ ಶ್ವಾಸಕೋಶ ಸಂಬಂಧಿತ ಕಾಯಿಲೆಗಳನ್ನು ದೂರ ಮಾಡುತ್ತದೆ.