ಎಲ್ಪಿಜಿ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಎಲ್ಪಿಜಿ ಡೀಲರ್ ಬಳಿಯೇ ಹೋಗಬೇಕೆಂದೇನಿಲ್ಲ. ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಜತೆಗೆ ಈ ಪ್ರಕ್ರಿಯೆಯನ್ನು ಪೂರ್ತಿಯಾಗಿ ಡಿಜಿಟಲೀಕರಣ ಮಾಡಿರುವುದರಿಂದ, ಅಗತ್ಯವಿರುವವರು ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆ ಡೀಲರ್ ಬಳಿ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು ಕಿರಿಕಿರಿ ಪ್ರಕ್ರಿಯೆ ಎನ್ನಿಸಿದರೆ, ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿಲಿ ಕಾಯ್ದಿರಿಸುವ ಮೂಲಕ ಎಲ್ಪಿಜಿ ಸಿಲಿಂಡರ್ನಲ್ಲಿ 500 ರೂ.ವರೆಗೆ ರಿಯಾಯಿತಿ ಪಡೆಯುವುದು ಹೇಗೆ? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಕೊಡುಗೆ 31 ಡಿಸೆಂಬರ್ 2020 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಆಫರ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಇದ್ದು, ನೀವು ಪ್ರೋಮೋ ಕೋಡ್ ನಮೂದಿಸಲು ಮರೆತರೆ ಅಂತಹ ಪರಿಸ್ಥಿತಿಯಲ್ಲಿ ಕ್ಯಾಶ್ಬ್ಯಾಕ್ ನೀಡಲಾಗುವುದಿಲ್ಲ. ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಚಂದಾದಾರರಾಗಿದ್ದರೆ ನಿಮಗೆ ಇದು ಶುಭ ಸುದ್ದಿ ಎಂದು ಹೇಳಬಹುದು. ಏಕೆಂದರೆ ಗ್ಯಾಸ್ ಕಂಪನಿ ತನ್ನ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಬುಕಿಂಗ್ಗೆ ರಿಯಾಯಿತಿ ಘೋಷಿಸಿದೆ ಎಂಬ ವಿಚಾರವನ್ನು ತಿಳಿದುಕೊಳ್ಳುವುದು ನಿಮಗೆ ಒಳ್ಳೆಯದು. ಸರ್ಕಾರವು ಒಂದು ವರ್ಷದಲ್ಲಿ ತಲಾ 14.2 ಕೆಜಿ ತೂಕದ 12 ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ಗಳನ್ನು ಸಬ್ಸಿಡಿ ದರದಲ್ಲಿ ಮನೆಗಳಿಗೆ ನೀಡುತ್ತದೆ ಮತ್ತು ಈ ಸಬ್ಸಿಡಿಯನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ಪಾವತಿಸುತ್ತಿದೆ. ಈಗ, ನೀವು ಮುಂದಿನ ಸಿಲಿಂಡರ್ ಅನ್ನು ಆನ್ಲೈನ್ನಲ್ಲಿ ಕಾಯ್ದಿರಿಸುವಾಗ ಸಬ್ಸಿಡಿಯ ಜೊತೆಗೆ ಕ್ಯಾಶ್ಬ್ಯಾಕ್ ಸಹ ಪಡೆಯಬಹುದಾಗಿದೆ. ಪೇಟಿಎಂ ಆ್ಯಪ್ ಮೂಲಕ ಗ್ಯಾಸ್ ಸಿಲಿಂಡರ್ಗಳನ್ನು ಕಾಯ್ದಿರಿಸುವಾಗ ಗ್ರಾಹಕರು 500 ರೂ.ವರೆಗೆ ಕ್ಯಾಶ್ಬ್ಯಾಕ್ ಪಡೆಯುತ್ತಿದ್ದಾರೆ. Paytm ನಿಂದ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ಗಳನ್ನು ಕಾಯ್ದಿರಿಸುವವರಿಗೆ ಮಾತ್ರ ಈ ಕೊಡುಗೆ ಅನ್ವಯವಾಗುತ್ತದೆ ಎಂಬುದು ಉಲ್ಲೇಖಾರ್ಹ.
ಎಲ್ಪಿಜಿ ಆನ್ಲೈನ್ ಬುಕಿಂಗ್: ಪೇಟಿಎಂ ಆ್ಯಪ್ ಮೂಲಕ ನೀವು ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ಅಂತಾ ನೋಡುವುದಾದರೆ , ಮೊದಲು Paytm ಅಪ್ಲಿಕೇಶನ್ಗೆ ಹೋಗಿ ಮತ್ತು ‘ಬುಕ್ ಸಿಲಿಂಡರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ಅನಿಲ ಪೂರೈಕೆದಾರರ ಹೆಸರಿನ ಮೇಲೆ ಕ್ಲಿಕ್ ಮಾಡಿ ಭಾರತ್ ಗ್ಯಾಸ್, ಇಂಡೇನ್ ಅಥವಾ ಎಚ್ಪಿ ಗ್ಯಾಸ್. ನಂತರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಎಲ್ಪಿಜಿ ಐಡಿ ಅಥವಾ ಗ್ರಾಹಕ ಸಂಖ್ಯೆಯ ಜೊತೆಗೆ ನಿಮ್ಮ ವಿವರಗಳನ್ನು ನಮೂದಿಸಿ ಮುಂದುವರೆಯಬೇಕು. ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪಾವತಿಸಿ ಮುಂದುವರೆಯಬೇಕು. ಪಾವತಿಯನ್ನು ಪೂರ್ಣಗೊಳಿಸುವ ಮೊದಲು, 500 ರೂ.ಗಳ ಕ್ಯಾಶ್ಬ್ಯಾಕ್ ಪಡೆಯುವ ಪ್ರೋಮೋ ಕೋಡ್ನಲ್ಲಿ FIRSTLPG ಅನ್ನು ನಮೂದಿಸಿ. ಈ ಕೊಡುಗೆ 31 ಡಿಸೆಂಬರ್ 2020 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಆಫರ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಇದ್ದು, ನೀವು ಪ್ರೋಮೋ ಕೋಡ್ ನಮೂದಿಸಲು ಮರೆತರೆ ಅಂತಹ ಪರಿಸ್ಥಿತಿಯಲ್ಲಿ ಕ್ಯಾಶ್ಬ್ಯಾಕ್ ನೀಡಲಾಗುವುದಿಲ್ಲ. ಈ ಪ್ರೋಮೋ ಕೋಡ್ Paytm ಮೂಲಕ ಮೊದಲ ಗ್ಯಾಸ್ ಸಿಲಿಂಡರ್ ಅನ್ನು ಕಾಯ್ದಿರಿಸಲು ನೀಡಲಾಗುತ್ತದೆ. ಕೊಡುಗೆ ಅವಧಿಯಲ್ಲಿ ಗ್ರಾಹಕರು ಈ ಕೋಡ್ ಅನ್ನು ಒಮ್ಮೆ ಮಾತ್ರ ಬಳಸಬಹುದು. ಕನಿಷ್ಠ ಮೊತ್ತ 500 ರೂಗಳಿದ್ದಾಗ ಮಾತ್ರ ಈ ಕೊಡುಗೆಯ ಲಾಭವನ್ನು ನೀಡಲಾಗುತ್ತದೆ.
ಈ ಮಧ್ಯೆ ನವೆಂಬರ್ 1 ರಿಂದ ಎಲ್ಪಿಜಿ ಬುಕಿಂಗ್ಗೆ ಸಂಬಂಧಿಸಿದ ಕೆಲವು ನಿಯಮಗಳು ಜಾರಿಗೆ ಬಂದಿವೆ. ಗ್ರಾಹಕರು ತಮ್ಮ ಎಲ್ಪಿಜಿ ಸಿಲಿಂಡರ್ಗಳನ್ನು ಮನೆಗೆ ತಲುಪಿಸಲು ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ನೀಡಬೇಕಾಗುತ್ತದೆ. ಎಲ್ಪಿಜಿ ಸಿಲಿಂಡರ್ಗಳ ಮನೆ ವಿತರಣೆಯನ್ನು ಆರಿಸಿಕೊಳ್ಳುವ ಗ್ರಾಹಕರಿಗೆ ತೈಲ ಕಂಪನಿಗಳು ಡೆಲಿವರಿ ದೃಢೀಕರಣ ಕೋಡ್ (ಡಿಎಸಿ) ಜಾರಿಗೆ ತಂದಿವೆ. ತಮ್ಮ ಎಲ್ಪಿಜಿ ಸಿಲಿಂಡರ್ಗಳನ್ನು ಮನೆಗೆ ತಲುಪಿಸಲು ಬಯಸುವ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಕೋಡ್ ಪಡೆಯುತ್ತಾರೆ. ಗ್ರಾಹಕರು ವಿತರಣಾ ವ್ಯಕ್ತಿಗೆ ಒಟಿಪಿ ಒದಗಿಸಿದಾಗ ಮಾತ್ರ ಎಲ್ಪಿಜಿ ಸಿಲಿಂಡರ್ಗಳ ಯಶಸ್ವಿ ವಿತರಣೆ ಸಾಧ್ಯವಾಗುತ್ತದೆ.