ಪ್ರೇಮಿಗಳ ದಿನದ ಸಮಯಕ್ಕೆ ಬಿಡುಗಡೆಗೊಂಡ ಈ ಲವ್ ಮಾಕ್ಟೇಲ್ 2 ಸಿನಿಮಾ ನಿಜಕ್ಕೂ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ

0 1

ನಾವಿಂದು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಯಾವ ರೀತಿಯಾದಂತಹ ಫಲಾಫಲಗಳು ದೊರೆಯುತ್ತವೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಿನಲ್ಲಿ ಬಹಳ ವಿಶೇಷವಾಗಿ ಕರ್ಕಾಟಕ ರಾಶಿಯವರಿಗೆ ದೈವಾನುಕೂಲ ಸಿದ್ಧಿ ಆಗಲಿದೆ ಈ ರಾಶಿಯವರ ಮೇಲೆ ಭಗವಂತನ ದೈವಾನುಕುಲ ಅಪಾರವಾಗಿರುತ್ತದೆ. ಕರ್ಕಾಟಕ ರಾಶಿಯವರಿಗೆ ಯೋಗದ ಮೇಲೆ ಯೋಗ ಬರುತ್ತದೆ. ಅಖಂಡ ರಾಜಯೋಗ ಕರ್ಕಾಟಕ ರಾಶಿಯವರಿಗೆ ಬರುತ್ತದೆ ಮಾರ್ಚ್ ತಿಂಗಳಲ್ಲಿ ಕರ್ಕಾಟಕ ರಾಶಿಯವರು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರು ಅದು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ.

ಕರ್ಕಾಟಕ ರಾಶಿಯ ಕೆಲವರಿಗೆ ವಿವಾಹವಾಗುವ ಯೋಗ ಇರುತ್ತವೆ ಪ್ರೇಮಿಗಳಿಗೂ ಕೂಡ ತಾವು ಪ್ರೀತಿಸುವವರೊಂದಿಗೆ ವಿವಾಹವಾಗುವಂತಹ ಒಳ್ಳೆಯ ಪರಿಸ್ಥಿತಿ ಎದುರಾಗುತ್ತದೆ. ಕರ್ಕಾಟಕ ರಾಶಿಯವರಿಗೆ ತಮ್ಮ ದಾಯಾದಿಗಳೊಂದಿಗೆ ಇರುವಂತಹ ಕಲಹಗಳು ಈ ತಿಂಗಳಿನಲ್ಲಿ ಶಮನವಾಗುತ್ತದೆ. ನೀವು ಈಗಾಗಲೇ ಯಾರಿಗಾದರೂ ಹಣವನ್ನು ಕೊಟ್ಟಿದ್ದರೆ ಅಂತಹ ಹಣ ನಿಮಗೆ ಹಿಂತಿರುಗಿ ಬರುತ್ತದೆ ಜೊತೆಗೆ ಭಗವಂತನ ಆಶೀರ್ವಾದ ನವಗ್ರಹಗಳ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಅಷ್ಟೇ ಅಲ್ಲದೆ ಬಹಳ ವಿಶೇಷವಾಗಿ ಕಲೆ-ಸಾಹಿತ್ಯ ಸಂಗೀತ ಚಿತ್ರದಲ್ಲಿ ಕೆಲಸ ಮಾಡುವಂತಹ ದಿಗ್ಗಜರಿಗೂ ಕೂಡ ಇದು ಒಳ್ಳೆಯ ಪ್ರೋತ್ಸಾಹ ಸಿಗುವ ಸಮಯ ಎಂದು ಹೇಳಬಹುದು. ಅದೇರೀತಿ ಪ್ರಶಸ್ತಿಗಳು ಮುನ್ನಡೆ ಜಯ ಕೀರ್ತಿಗಳು ಜೊತೆಗೆ ಅತ್ಯಧಿಕ ಧನಲಾಭವೂ ಕೂಡ ಉಂಟಾಗುತ್ತದೆ.

ಜನರ ಪ್ರೀತಿ ವಿಶ್ವಾಸಗಳಿಕೆಯಲ್ಲಿ ನೀವು ಹೆಚ್ಚು ಪರಿಣಿತರಾಗುತ್ತೀರಿ. ಮಾರ್ಚ್ ತಿಂಗಳು ಕರ್ಕಾಟಕ ರಾಶಿಯವರಿಗೆ ಸಂಭ್ರಮದ ಸುದಿನಗಳು ಎಂದು ಹೇಳಬಹುದು. ಜೊತೆಗೆ ಕರ್ಕಾಟಕ ರಾಶಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಕೂಡ ಉತ್ತಮವಾದಂತಹ ಬುದ್ಧಿಶಕ್ತಿ ಜ್ಞಾಪಕಶಕ್ತಿ ಇರುತ್ತದೆ ಹೆದರಿಕೆ ಭಯ ಇವೆಲ್ಲವೂ ಕೂಡ ದೂರವಾಗುತ್ತದೆ. ಐಎಎಸ್ ಐಪಿಎಸ್ ಕೆಪಿಎಸ್ ಉನ್ನತ ವ್ಯಾಸಂಗದಲ್ಲಿರುವವರಿಗು ಕೂಡ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ. ಉತ್ತಮ ಅಂಕಗಳನ್ನು ಗಳಿಸಿ ತಂದೆ-ತಾಯಿಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರರಾಗಿರುತ್ತಿರಿ.

ಒಟ್ಟಾರೆಯಾಗಿ ಕರ್ಕಾಟಕ ರಾಶಿಯವರಿಗೆ ಮಾರ್ಚ್ ತಿಂಗಳು ಶುಭ ಸಮಯ ಎಂದು ಹೇಳಬಹುದು. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶಿಸಿ ನಟಿಸಿರುವ ಲವ್ ಮಾಕ್ಟೇಲ್ ಚಿತ್ರ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು ಈಗ ಅದರ ಮುಂದುವರೆದ ಭಾಗವಾಗಿ ಲವ್ ಮಾಕ್ಟೇಲ್ ಟು ಚಿತ್ರ ತೆರೆಕಂಡಿದ್ದು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಒಳ್ಳೆ ಕಥೆ ಇರುವ ಸಿನಿಮಾಗಳು ಮೂಡಿ ಬರುತ್ತಿವೆ ಎಂದು ಹೇಳಬಹುದು. ಈಗ ಕನ್ನಡದ ಸಿನಿಮಾರಂಗದಲ್ಲಿ ಸುದ್ದಿಯಲ್ಲಿರುವ ಚಿತ್ರ ಎಂದರೆ ಅದು ಲವ್ ಮಾಕ್ಟೇಲ್ 2 ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಈ ಚಿತ್ರವನ್ನು ವೀಕ್ಷಿಸಿದಂತಹ ಪ್ರೇಕ್ಷಕರು ಉತ್ತಮವಾದಂತಹ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾದ ಮೊದಲ ಭಾಗ ನೋಡಿದಂತಹ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಕಲೆಕ್ಷನ್ ಕೂಡ ಭರ್ಜರಿಯಾಗಿದೆ ಎಂದು ಹೇಳಬಹುದು. ಲವ್ ಮಾಕ್ಟೇಲ್ ಮೊದಲ ಭಾಗವನ್ನು ವೀಕ್ಷಿಸಿದ ಎಲ್ಲರೂ ಕೂಡ ಲವ್ ಮಾಕ್ಟೇಲ್ 2 ನೋಡುಲು ಚಿತ್ರ ಮಂದಿರಗಳಿಗೆ ಬರುತ್ತಿರುವುದು ಚಿತ್ರದ ಯಶಸ್ಸಿಗೆ ಕಾರಣ ಎಂದು ಹೇಳಬಹುದು. ಲವ್ ಮಾಕ್ಟೇಲ್ ಮೊದಲ ಭಾಗದ ಹಾಗೆ ಎರಡನೇ ಭಾಗ ಕೂಡ ಯಶಸ್ಸನ್ನು ಸಾಧಿಸಿದ್ದು ಚಿತ್ರದಲ್ಲಿ ಬರುವಂತಹ ಕಥೆ ಪಾತ್ರಗಳು ಅಭಿಮಾನಿಗಳ ಮನಸ್ಸಿಗೆ ಖುಷಿ ನೀಡಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರಾಚೆಲ್ ಡೇವಿಡ್ ನಾಯಕಿಯಾಗಿ ನಟಿಸಿದ್ದಾರೆ.

ಲವ್ ಮಾಕ್ಟೇಲ್ 2 ಚಿತ್ರದ ಯಶಸ್ಸಿನ ಕುರಿತು ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆಯನ್ನು ಹೇಳಿಕೊಂಡ ಆ ಸಮಯದಲ್ಲಿ ಮಿಲನ ನಾಗರಾಜ್ ಅವರು ಚಿತ್ರ ಅದ್ಭುತವಾದ ಕಲೆಕ್ಷನ್ ಮಾಡಿದ್ದು ಸರಿಯಾದ ಸಂಖ್ಯೆ ನನಗಿನ್ನು ಬಂದಿಲ್ಲ ಬಂದ ನಂತರ ಅದನ್ನು ಹೇಳುತ್ತೇವೆ ಆದರೆ ತುಂಬಾ ಚೆನ್ನಾಗಿ ಕಲೆಕ್ಷನ್ ಆಗಿದೆ ಎಂದು ಹೇಳಿದರು. ಕೃಷ್ಣ ಅವರು ಕೂಡ ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಚೆನ್ನಾಗಿ ಓಡುತ್ತಿದೆ ಒಂದು ಕುಟುಂಬ ಕುಳಿತು ಚಿತ್ರವನ್ನು ನೋಡಬಹುದು ಎಂದು ಹೇಳಿದ್ದಾರೆ. ಲವ್ ಮಾಕ್ಟೇಲ್ 2 ಸಿನಿಮಾ ಇನ್ನೂ ಹೆಚ್ಚಿನ ಯಶಸ್ವಿ ಪ್ರದರ್ಶನವನ್ನು ಕಾಣಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ. ಡಾರ್ಲಿಂಗ್ ಕೃಷ್ಣ ಅವರ ಕಡೆಯಿಂದ ಈ ರೀತಿಯ ಒಳ್ಳೆ ಕಥೆ ಇರುವಂತಹ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಮೇಲೆ ಬರಲಿ ಎಂದು ನಾವು ಆಶಿಸೋಣ.

Leave A Reply

Your email address will not be published.