ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸವೆಲ್ ಅರ್ಧಶತಕ, ಶತಕಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಭಾರತೀಯ ಹುಡುಗಿಗೆ ಕ್ಲೀನ್ ಬೋಲ್ಡ್ ಆಗಿದ್ದಾನೆ. ಗ್ಲೆನ್ ಮ್ಯಾಕ್ಸವೆಲ್ ಯಾರನ್ನು ವಿವಾಹವಾಗಲಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸವೆಲ್ ಭಾರತೀಯ ಮೂಲದ ಹುಡುಗಿಗೆ ಮನಸೋತಿದ್ದಾರೆ. ಎರಡು ವರ್ಷದ ಹಿಂದೆ ನಿಶ್ಚಿತಾರ್ಥವಾಗಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಆಸ್ಟ್ರೇಲಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ನಾಲ್ಕು ವರ್ಷಗಳ ಪರಿಚಯದ ಇವರಿಬ್ಬರೂ 2020 ಫೆಬ್ರುವರಿಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು. ಮ್ಯಾಕ್ಸ್ ವೆಲ್ ಅವರು ವಿನಿ ರಾಮನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ಭಾರತೀಯ ಹುಡುಗಿಗೆ ಮನಸೋತ ಕ್ರಿಕೆಟಿಗ ಈಗ ಮದುವೆ ಬಂಧನಕ್ಕೆ ಒಳಗಾಗಲಿದ್ದಾರೆ. ಆಸ್ಟ್ರೇಲಿಯಾ ಬ್ಯಾಟ್ಸ್ ಮೆನ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ತಮಿಳು ಬ್ರಾಹ್ಮಣ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಮಾರ್ಚ್ 27 ರಂದು ಸಪ್ತಪದಿ ತುಳಿಯಲಿದ್ದಾರೆ. ತಮಿಳನಾಡು ಮೂಲದ ಬ್ರಾಹ್ಮಣ ಕುಟುಂಬದ ವಿನಿ ರಾಮನ್ ಅವರ ಜೊತೆ ಮ್ಯಾಕ್ಸ್ ವೆಲ್ ಮದುವೆಯಾಗಲಿದ್ದಾರೆ. ಮೆಲ್ಬೋರ್ನ್ ನಲ್ಲಿ ಈ ಮದುವೆ ಸಮಾರಂಭ ನಡೆಯಲಿದೆ.

ವಿನಿ ಅವರು ತಮಿಳುನಾಡಿನ ಮೂಲದವರಾದರೂ ಹುಟ್ಟಿ ಬೆಳೆದಿದ್ದು ಆಸ್ಟ್ರೇಲಿಯಾದಲ್ಲಿ. ವಿನಿ ರಾಮನ್ ಕುಟುಂಬ ಕೂಡ ಆಸ್ಟ್ರೇಲಿಯಾದಲ್ಲೆ ಸೆಟ್ಲ್ ಆಗಿದೆ. ಹೀಗಾಗಿ ಮೆಲ್ಬೋರ್ನ್ ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿನಿ ಅವರು ಮೆಲ್ಬೋರ್ನ್ ನಲ್ಲಿ ಸದ್ಯ ಔಷಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ ಟಿ 20 ಕ್ರಿಕೆಟ್ ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಎಡ ಮೊಣಕೈ ಗಾಯದ ಸಮಸ್ಯೆಯ ಕಾರಣ ಮ್ಯಾಕ್ಸ್ ವೆಲ್ ತಂಡದಿಂದ ಹೊರಗಿದ್ದಾರೆ ಗಾಯದ ಕಾರಣ 6-8 ವಾರ ಮ್ಯಾಕ್ಸ್ ವೆಲ್ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿಕೆ ನೀಡಲಾಗಿತ್ತು. 31 ವರ್ಷದ ಸ್ಫೋಟಕ ಬ್ಯಾಟ್ಸ್ ಮನ್ ಇತ್ತೀಚಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅದಕ್ಕೂ ಮುನ್ನ ಆರೋಗ್ಯ ಸಮಸ್ಯೆ ಎದುರಿಸಿ ಆಸೀಸ್ ತಂಡದಿಂದ ಅನಿರ್ದಿಷ್ಟಾವಧಿ ವಿಶ್ರಾಂತಿ ತೆಗೆದುಕೊಂಡಿದ್ದರು.

ಈ ವೇಳೆ ಅವರ ಸ್ವಭಾವದಲ್ಲಿ ಬದಲಾವಣೆಯಾಗಿರುವುದನ್ನು ಪ್ರೇಯಸಿ ಮೊದಲ ಬಾರಿಗೆ ತಮ್ಮ ಗಮನಕ್ಕೆ ತಂದಿದ್ದರು ಹಾಗೂ ವೈದ್ಯರ ಸಲಹೆ ಪಡೆಯಲು ಹೇಳಿದ್ದರು ಎಂದು ಮ್ಯಾಕ್ಸ್ ವೆಲ್ ಹೇಳಿಕೊಂಡಿದ್ದರು. ವೈದ್ಯರ ಸಲಹೆ ಪಡೆದ ನಂತರ ನನ್ನ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಮ್ಯಾಕ್ಸ್ ವೆಲ್ ಹೇಳಿಕೊಂಡರು. ಮದುವೆಯಾಗುವ ಜೋಡಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸೋಣ. ಈ ಮಾಹಿತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿಸಿ.

Leave a Reply

Your email address will not be published. Required fields are marked *