ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಸಲ ಪ್ರೀತಿ ಆಗಿರುತ್ತದೆ ಮನುಷ್ಯ ಉತ್ಸಾಹದಿಂದ ಬದುಕಬೇಕೆಂದರೆ ಪ್ರೀತಿ ಅವಶ್ಯಕ. ತಂದೆ ತಾಯಿ ಜೊತೆ, ಕುಟುಂಬದವರ ಜೊತೆ, ಗೆಳೆಯ ಗೆಳತಿಯರ ಜೊತೆ ಪ್ರೀತಿಯಾಗುತ್ತದೆ. ಜೀವನ ಸಂಗಾತಿಯ ಜೊತೆ ಆಗುವ ಪ್ರೀತಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಪ್ರೀತಿಯನ್ನು ಪ್ಯಾರ್, ಇಷ್ಕ, ಮೊಹಬ್ಬತ್ ಹೀಗೆ ಹಲವಾರು ಪದಗಳಿಂದ ಕರೆಯುತ್ತಾರೆ. ಪ್ರೀತಿಯಲ್ಲಿ ಬಿದ್ದ ವ್ಯಕ್ತಿಯ ಮೆದುಳಿನ ವಿಶಿಷ್ಟ ಭಾಗ ಆಕ್ಟಿವೇಟ್ ಆಗುತ್ತದೆ. ಆಗ ಆತನಿಗೆ ಅಥವಾ ಅವಳಿಗೆ ನಶಾ ಪದಾರ್ಥ ಸೇವಿಸಿದ ವರ್ಣಿಸಲಾಗದ ಅನುಭವ ಆಗುತ್ತದೆ. ಇದೇ ಕಾರಣಕ್ಕೆ ಪ್ರೇಮಿಗಳು ಯಾವುದೇ ಹಂತಕ್ಕೆ ಹೋಗಲು ತಯಾರಾಗಿರುತ್ತಾರೆ. ಪ್ರೀತಿ ಕುರುಡು ಅಂತಾರೆ ವಿಜ್ಞಾನಿಗಳು ಇದನ್ನು ಒಪ್ಪುತ್ತಾರೆ. ಡಾಕ್ಟರ್ ರಾಬರ್ಟ್ ಪ್ರಕಾರ ಪೆನೆಲ್ ಥಾಲಿಮೈನ್ ಎನ್ನುವ ಕೆಮಿಕಲ್ ಮನುಷ್ಯನಲ್ಲಿ ಪ್ರೀತಿಯ ಭಾವನೆ ಸೃಷ್ಟಿಯಾಗಲು ಕಾರಣವಾಗಿದೆ. ಈ ಕೆಮಿಕಲ್ ಮೆದುಳಿನಲ್ಲಿ ಇರುತ್ತದೆ ಇದು ತನ್ನ ಪಾರ್ಟ್ನರ್ ತಪ್ಪು ಮಾಡಿದ್ದರು ಸರಿಯಾಗಿ ಕಾಣುವಂತೆ, ಮೂತಿ ಗೂಬೆ ತರ ಇದ್ದರೂ ಗಿಳಿ ಹಾಗೆ ಕಾಣುವಂತೆ ಮಾಡುತ್ತದೆ. ಜೊತೆಗೆ ವರ್ಣಿಸಲಾಗದ ನೆಮ್ಮದಿ ಕೊಡುತ್ತದೆ. ತನ್ನ ಪ್ರಿಯತಮ ಅಥವಾ ಪ್ರಿಯತಮೆಗೆ ಹೆಚ್ಚಿನ ಸ್ಥಾನ ಕೊಡಲು ಇದೆ ಕಾರಣವಾಗಿದೆ. ಈ ಕೆಮಿಕಲ್ ಪ್ರತಿಯೊಬ್ಬರ ಮೆದುಳಿನಲ್ಲಿ ಇರುತ್ತದೆ ಆದರೆ ಪ್ರೀತಿಯಲ್ಲಿ ಬಿದ್ದ ವ್ಯಕ್ತಿಯ ಮೆದುಳಿನಲ್ಲಿ ಇದರ ಉತ್ಪಾದನೆ ಜಾಸ್ತಿಯಾಗುತ್ತದೆ. ಆದರೆ ಇದು ಸಾಯುವವರೆಗೆ ಇರುವುದಿಲ್ಲ 1-2 ವರ್ಷಗಳಲ್ಲಿ ಇದು ಕಡಿಮೆಯಾಗುತ್ತದೆ 4-5 ವರ್ಷದ ನಂತರ ಇದರ ಉತ್ಪಾದನೆ ನಿಂತುಹೋಗುತ್ತದೆ. ಆದ್ದರಿಂದಲೆ ಮದುವೆಯ ನಂತರ ಒಂದೆರಡು ವರ್ಷಗಳಲ್ಲಿ ಗಿಳಿ ಮೂತಿಯ ಹೆಂಡತಿಯಿದ್ದರೂ ಗೂಬೆ ತರ ಕಾಣುವುದು. ಸೈಕಾಲಜಿಸ್ಟ್ ಆರ್ಥರ್ ಆರಂ ಪ್ರಕಾರ ಪ್ರೀತಿಯಲ್ಲಿ ಬೀಳಲು ಕಾರಣ ಕಣ್ಣುಗಳು ಪ್ರಯೋಗದ ಮೂಲಕ ಕಣ್ಣಲ್ಲಿ ಕಣ್ಣಿಟ್ಟು ಜಾಸ್ತಿ ಹೊತ್ತು ನೋಡುವುದರಿಂದ ಪ್ರೀತಿಯಾಗುವ ಚಾನ್ಸ್ ಇರುತ್ತದೆ ಎಂದು ಕಂಡುಹಿಡಿಯಲಾಗಿದೆ.
ಮೂಗು ಸಹ ಮುಖ್ಯವಾಗಿದೆ ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯ ಸ್ಮೆಲ್ ಇರುತ್ತದೆ ಮೂಗು ಅದನ್ನು ಮೆದುಳಿಗೆ ರವಾನಿಸುತ್ತದೆ ಮೆದುಳು ಪ್ರೊಸೆಸ್ ಮಾಡಿ ಎದುರಿಗಿರುವ ವ್ಯಕ್ತಿಯ ಗುಣ, ಸ್ವಭಾವದ ಬಗ್ಗೆ ಅನಾಲಿಸಿಸ್ ಶುರು ಮಾಡುತ್ತದೆ ಆ ವ್ಯಕ್ತಿ ನಮಗೆ ಸೂಟ್ ಆಗುತ್ತಾರಾ ಇಲ್ಲವಾ ಎಂದು ಚೆಕ್ ಮಾಡುತ್ತದೆ. ಸೂಟ್ ಆಗುವುದಿದ್ದರೆ ಲವ್ ಹಾರ್ಮೋನ್ ಬಿಡುಗಡೆಯಾಗುತ್ತದೆ ಇದರ ಪರಿಣಾಮ ಎದುರಿಗಿರುವ ವ್ಯಕ್ತಿ ಇಷ್ಟವಾಗಿಬಿಡುತ್ತಾರೆ. ಪ್ರೀತಿಯ ಮೊದಲು ಆಕರ್ಷಣೆಯಾಗುತ್ತದೆ ಇದು 80 ಸೆಕೆಂಡ್ ಗಳಿಂದ 4 ನಿಮಿಷದವರೆಗೆ ಆಗುತ್ತದೆ. ಈ ಆಕರ್ಷಣೆಯಲ್ಲಿ 50 ಪರ್ಸೆಂಟ್ ಕೊಡುಗೆ ನಮ್ಮ ಪರ್ಸನಾಲಿಟಿ ಮತ್ತು ಬಾಡಿ ಲ್ಯಾಂಗ್ವೇಜ್ ಹೊಂದಿರುತ್ತದೆ. 38% ಮಾತನಾಡುವ ಮ್ಯಾನರ್ಸ್ ಮೇಲೆ ಹೋಗುತ್ತದೆ. ಉಳಿದ 7% ಮಾತನಾಡುವ ಕಲೆಯಲ್ಲಿ ಎಷ್ಟು ಪಳಗಿದ್ದಾರೆ ಅನ್ನೋದರ ಮೇಲೆ ಹೋಗುತ್ತದೆ. ವೈ ವಿ ಲವ್ ಪುಸ್ತಕದ ಲೇಖಕಿ ಪ್ರೀತಿಯನ್ನು 3 ರೀತಿಯಲ್ಲಿ ವಿಭಾಗಿಸಿದ್ದಾರೆ. ದೈಹಿಕ ಆಕರ್ಷಣೆ, ಮಾನಸಿಕ ಆಕರ್ಷಣೆ, ಆಳವಾದ ಪ್ರೀತಿ. ದೈಹಿಕ ಆಕರ್ಷಣೆ ಮೆದುಳಿನಲ್ಲಿರುವ ಲೈಂಗಿಕ ಹಾರ್ಮೋನುಗಳಿಂದ ಉಂಟಾಗುತ್ತದೆ. ಟೆಸ್ಟೋಸ್ಟಿರಾನ್ ಮತ್ತು ಈಸ್ಟ್ರೋಜನ್ ಹಾರ್ಮೋನ್ ಗಳು ಈ ಕೆಲಸವನ್ನು ಮಾಡುತ್ತದೆ. ಮಾನಸಿಕ ಆಕರ್ಷಣೆಗೆ ಡೋಪಮೈನ್ ಮತ್ತು ನೊರೇಪೈನ್ ಪ್ರೇಮ್ ಕೆಮಿಕಲ್ ಕಾರಣವಾಗಿದೆ. ಸೆರೋಟೋನಿನ್ ಉತ್ಪತ್ತಿಯಾಗಿ ಪ್ರೀತಿ ಹೆಚ್ಚಾಗುವಂತೆ ಮಾಡುತ್ತದೆ. ಇವೆರಡರ ನಂತರ ಜನ್ಮ ಜನ್ಮಗಳ ಪ್ರೀತಿ ಹುಟ್ಟುತ್ತದೆ. ಆಕ್ಸಿಟೋಸಿನ್ ಮತ್ತು ವಾಸೋಪ್ರೊಸಿನ್ ಕೆಮಿಕಲ್ ಈ ಸುದೀರ್ಘ ಸಂಬಂಧಕ್ಕೆ ಕಾರಣವಾಗಿದೆ.