ನಮ್ಮ ವಿದ್ಯಾಭ್ಯಾಸ ಹೇಗಿರಬೇಕು? ರವಿ ಚನ್ನಣ್ಣನವರ್ ಹೇಳಿದ ಮಾತುಗಳು

0 3

ಐಪಿಎಸ್ ಅಧಿಕಾರಿಯಾಗಿ ತನ್ನ ಸೇವೆಯನ್ನು ಸರಿಯಾಗಿ ನಿಭಾಯಿಸುತ್ತಾ, ಸರಿಯಾದ ಕ್ರಮಗಳನ್ನು ಕೈ ಗೊಳ್ಳುತ್ತಾ ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದ ಕರ್ನಾಟಕ ಸಿಂಗಂ ಎಂದೆ ಹೆಸರು ಪಡೆದ ರವಿ ಡಿ ಚೆನ್ನಣ್ಣನವರ್ ಅವರು ವಿದ್ಯಾಭ್ಯಾಸದ ಕುರಿತು ಹೇಳಿದ ಸಣ್ಣ ಮಾತಿನ ತುಣುಕು ಇಲ್ಲಿದೆ. ಹಿಂದಿನ ಕಾಲದಲ್ಲಿ ಸಮಯಾವಕಾಶ ಇಲ್ಲದೆ ಓದಲು ಆಗುತ್ತಿರಲಿಲ್ಲ. ಒಬ್ಬರು ಸಚ್ಚಾರಿತ, ಸದ್ಗುಣವುಳ್ಳ, ಸಕಲ ಕಲೆಗಳಲ್ಲಿ ಪಾರಂಗತರಾದವರು ಆ ಊರಿನ ತಂದೆಯ ಸ್ಥಾನ ಅಂದರೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳು ಹಾಗಿಲ್ಲ. ಎಲ್ಲಾ ಮಟಿರಿಲಿಯಾಸ್ಟಿಕ್ ಜಗತ್ತಿನ ವೈಭೋಗ , ಆಡಂಬರ ಇವೆಲ್ಲವೂ ಹೆಚ್ಚಾಗಿ ಪೋಲಿಸ್ ಇಲಾಖೆಯವರಿಗೆ ಎಲ್ಲವನ್ನು ಅನುಮಾನದಲ್ಲೆ ನೋಡುವ ಸ್ವಭಾವವಾಗಿ ಬಿಟ್ಟಿದೆ. ತಿಂಗಳುಗಳಿಂದ ನಡೆಸಿದ ತಯಾರಿಯಲ್ಲಿ ನಡೆಯುತ್ತಿರುವ ಹತ್ತಾರು ದಿನದ ಕಾರ್ಯಕ್ರಮ ಅದಕ್ಕೆ ಭಾಗವಹಿಸಿರುವ ಜನತೆಯ ಬದ್ದತೆ, ಭಾಗವಹಿಸುವಿಕೆ ಇನ್ನೂ ನಮ್ಮಲ್ಲಿ ಸಂಸ್ಕೃತಿಯ ಜೀವಂತಿಕೆ ಇದೆ. ದಯೆ ಧರ್ಮ, ದಾನದ ಧಿಮಂತಿಕೆ ಇದೆ ಎಂದು ಅನಿಸುತ್ತದೆ.

ಹಳೆಯ ಜನರ ಮಾತುಗಳಾದ ಜ್ವಾಳ, ಬಾರುಕೋಲು, ತತ್ರಾಣಿಗಿ, ಲಪಾಟಿ ಈ ತರಹದ ಶಬ್ದಗಳ ಉಚ್ಚಾರ ಕೇಳದೆ ಎಷ್ಟು ದಿನಗಳು ಕಳೆದಿವೆಯೊ ತಿಳಿದಿಲ್ಲ. ಶಂಭು ಬಳಿಗಾರನ್ನು ಭೇಟಿ ಆದ ನಂತರ ಈ ಎಲ್ಲ ಪದಗಳ ಉಚ್ಚಾರ ಕೇಳಿದ ನಂತರ ನಾವುಗಳು ಹತಾಷರಾಗುವ ಯಾವ ಕಾರಣವೂ ಉಳಿದಿಲ್ಲ. ಹಳೆಯತನ ಇನ್ನು ಜೀವಂತವಾಗಿದೆ ಎನ್ನಿಸುತ್ತದೆ ಒಂದು ಸಂಕಲ್ಪ ಇಟ್ಟು ಕೊಂಡು ಕಾರ್ಯಕ್ರಮ ಮಾಡಬೇಕು.. ಕೊಪ್ಪಳದಲ್ಲಿ ಎಂದು ಬರಗಾಲ ಬರಬಾರದು ಎಲ್ಲಾ ಕಡೆ ಹೇಗೆ ನೀರು ಹರಿಯುವುದೊ ಹಾಗೆ ಇಲ್ಲಿಯೂ ಇರಬೇಕು ಹಾಗಾದರೆ ಏನು ಮಾಡಬೇಕು ವೃಕ್ಷಗಳನ್ನು ನೆಡಬೇಕು‌ ಇಂಥದೊಂದು ಸಂಕಲ್ಪ ಮಾಡಿದ ಮಠದ ಪೂಜ್ಯರನ್ನು ಪಡೆದಿರುವುದು ಭಾಗ್ಯವೇ ಸರಿ. ಹಾಗೆಂದು ಬಂದು ಸಿಳ್ಳೆ ಚಪ್ಪಾಳೆ ಹೊಡೆದು ಹೋದರೆ ಆಗುವುದಿಲ್ಲ. ಇಲ್ಲಿ ರವಿ ಚೆನ್ಬಣ್ಣನವರ್ ಎಂದು ಮುಖ್ಯವಲ್ಲ. ರವಿ ಚೆನ್ನಣ್ಣನವರ್ ಬಗ್ಗೆ ಕೆಲವು ದಂತ ಕಥೆಗಳಿದೆ, ಹೈಪ್ ಇದೆ ಆದರೆ ಅದು ಹಾಗಿಲ್ಲ ಪೋಲಿಸ್ ಅಧಿಕ್ಷಕನಾಗಿ ಎಲ್ಲರಂತೆ ಸರಕಾರ ಕೊಟ್ಟ ಕೆಲಸ ಮಾಡುವ ಸಾಮಾನ್ಯ ಪೋಲಿಸ್ ಶೇ. ಎಪ್ಪತ್ತರಷ್ಟು ನನ್ನ ಕೆಲಸ ಮಾಡಿದ್ದಿನಿ. ಶೇ. ಎಪ್ಪತ್ತರಷ್ಟು ಕೆಲಸಕ್ಕೆ ಯಾವುದೋ ಹಾಡಿಗೆ ನನ್ನ ಪೋಟೊ ಹಾಕಿ ಸಾಮಾಜಿಕ ಜಾಲತಾಣದಲ್ಲಿ ನಾಯಕ ಎಂದು ಬಿಂಬಿಸಿದರೆ ಇನ್ನೂ ನೂರರಷ್ಟು ಮಾಡಿದಾಗ ಏನು ಮಾಡಬಹುದು. ಮಾಡುವ ಕೆಲಸಕ್ಕೆ ನನಗೆ ಸಂಬಳ ಬರುತ್ತದೆ. ತುಂಬಾ ಜನ ಬುದ್ದಿವಂತರು ತರಬೇತಿಯನ್ನು ನೀಡಿದ್ದಾರೆ. ಆಡಳಿತದ ವೈಕರಿಯ ಬಗ್ಗೆ ಬಹಷ್ಟು ವಿದ್ವಾಂಸರು ತಿಳಿಸಿ ಕೊಟ್ಟಿದ್ದಾರೆ. ಅದರ ಅನುಭವದ ಆಧಾರದ ಮೇಲೆ ನನಗೆ ತಿಳಿದ ಮಟ್ಟಿಗೆ ಒಂದು ನಾಲ್ಕು ಜಿಲ್ಲೆಯಲ್ಲಿ ಕೆಲಸಮಾಡಿರುವೆ ಅಷ್ಟೇ. ಸಾಮಾಜಿಕ ಜಾಲತಾಣದಲ್ಲಿನ ರವಿ ಚೆನ್ನಣ್ಣನವರ್ ನಿಜವಾದ ಚೆನ್ನಣ್ಣನವರ್ ಅಲ್ಲ.

ನಾನು ಸಿಂಗಂ ಅಲ್ಲ. ಒಬ್ಬ ರವಿ ಚೆನ್ನಣ್ಣನವರ್ ಸಾಕಾ ಎಲ್ಲರಿಗೂ, ಒಬ್ಬ ಧಿರೆಂದ್ರ, ಅಶೋಕ್ ಸಾಕೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಹೋಲಿಕೆ ಮಾಡಿದರೆ. ವೈರುದ್ಯ ತೋರುವಂತೆ ಅಲ್ಲ ಅಲ್ಲಿರುವವರೆಲ್ಲರೂ ಐಎಎಸ್, ಐಪಿಎಸ್, ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದರೆ ನಮ್ಮ ಕಡೆ ಹೆಡ್ ಕಾನ್ಸ್ಟೇಬಲ್, ಪಿಸಿ, ಎಸ್ ಡಿಎ, ಎಪ್ ಡಿಎ, ಟೀಚರ್ ಹೀಗೆ ಆಗ್ತಾರೆ ಯಾವ ಶಕ್ತಿ ನಮ್ಮನ್ನು ತಡೆದು ಹಿಡಿದಿರುವುದು, ಯಾವ ವ್ಯತ್ಯಾಸ ಇರುವುದು ನಮ್ಮಲ್ಲಿ, ಪ್ರತಿಭಾವಂತರು ಕೂಡ ಮಾಡೊಕೆ ಅಡ್ಡಿಯಾಗಿದ್ದು ಏನು, ನಾವು ಯಾಕೆ ಹಾಗೆ ಆಗಬಾರದು ಎಂದು ಪ್ರಶ್ನಿಸಿಕೊಂಡು ನೋಡಿದರೆ ತಿಳಿದು ಬಂದಿದ್ದು ಏನೆಂದರೆ ಕೀಳರಿಮೆ. 2009 ರಿಂದ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿದ್ದು ಅಲ್ಲಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರೊಫೆಷನರ್, ಎ.ಎಸ್.ಪಿ, ಎಸ್.ಪಿ, ಡಿ.ಸಿ ಯಾಗಿ ಕೆಲಸ ನಿರ್ವಹಿಸಿದ್ದೆನೆ. ನೂರಾರು ಶಾಲೆಗಳಲ್ಲಿ, ನೂರಾರು ಮಕ್ಕಳೊಂದಿಗೆ ಬೆರೆತಾಗ, ಗೊತ್ತಿರುವುದು ಹೇಳಿ ಕೊಟ್ಟಾಗ ಅನಿಸಿದ್ದು ಕೀಳರಿಮೆ ಭಾವನೆ ನಮ್ಮನ್ನು ತುಂಬಾ ದೊಡ್ಡದಾಗಿ ಕಾಡುತ್ತಿದೆ. ದೊಡ್ಡ ದೊಡ್ಡ ಹುದ್ದೆಗಳು ನಮಗಲ್ಲ, ನನ್ನಿಂದ ಅದು ಆಗಲ್ಲ, ನಾನು ಹಳ್ಳಿಯ ಬಡಕುಟುಂಬದವನು, ಅದಕ್ಕೆ ದುಡ್ಡು ಹಾಕಬೇಕಂತೆ, ಇಂಗ್ಲಿಷ್ ಬರಲ್ಲ ಅರ್ಥ ಮಾಡಿಕೊಳ್ಳಲು ಬರಲ್ಲ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಅರ್ಥ ಆಗಲ್ಲ. ವರ್ಷಗಳು ಬೇಕಂತೆ, ರ್ಯಾಂಕ್, ಗೋಲ್ಡ್ ಮೆಡಲ್ ಇರಬೇಕಂತೆ, ಗೈಡ್ ಇರಬೇಕಂತೆ ಇದೆಲ್ಲಾ ಬರಿಯ ಸುಳ್ಳು.

ಇದಕ್ಕೆ ಒಂದು ಉದಾಹರಣೆ ಎಂದರೆ ಶರಣಬಸಪ್ಪ ಕಪ್ಪತ್ತನವರ್ ಎಂಬ ಹುಡುಗ ಶಿರಹಟ್ಟಿ ತಾಲೂಕಿನವನು. ಆ ಹುಡುಗ S.S.L.C ಫೇಲ್, ಪಿಯುಸಿ ಫೇಲ್, ಡಿಗ್ರಿಯಲ್ಲಿ ಇಂಗ್ಲಿಷ್ ಫೇಲ್, ಬಿಎಡ್ ಗೆ ಸೀಟು ಸಿಗಲಿಲ್ಲ. ಯಾರೋ ಸಂಬಂಧಿಕರ ಮನೆಗೆ ಹೋದವನು ಓದಿ ಮೂರು, ನಾಲ್ಕು ಸಲ ಪರೀಕ್ಷೆ ಬರೆದು 365-366 ರ್ಯಾಂಕ್ ಪಡೆದು 2013-14 ರಲ್ಲಿ ಐ.ಆರ್.ಎಸ್ ಅಧಿಕಾರಿಯಾಗಿ ಶಿರಹಟ್ಟಿಗೆ ಮರಳಿ ಬರುತ್ತಾನೆ. ಹಾಗೆ ಅವನು ಬಂದಾಗ ಊರಲ್ಲಿ ಶರಣಬಸಪ್ಪ ಊರಿಗೆ ಡಿಸಿ ಆಗಿ ಬಂದಿದ್ದಾನೆ ಎಂದರೆ ಯಾರು ಹತ್ತನೆಯ ಕ್ಲಾಸ್ ಫೇಲ್ ಆದವನಾ, ಪಿಯುಸಿ ಫೇಲ್ ಆದವನಾ ಎನ್ನುತ್ತಿದ್ದರಂತೆ. ಇಂಗ್ಲಿಷ್ ಬರದಿದ್ದವ ಅವನು ಮಾಡಿದ್ದ ಅಂದರೆ ನಾವು ಯಾಕೆ ಮಾಡಬಾರದು. ಪ್ರಯತ್ನವಿದ್ದಲ್ಲಿ ಮಾತ್ರ ಫಲವಿದೆ. ಕೀಳರಿಮೆಯಲ್ಲಿಯೆ ಕುಳಿತರೆ ಏನು ಮಾಡುವುದಕ್ಕೆ ಆಗುವುದಿಲ್ಲ ಎಂಬುದು ರವಿ ಚೆನ್ನಣ್ಣನವರ್ ಅವರ ನಿಲುವು. ಸತ್ಯವೇ ಅಲ್ಲವೆ.

Leave A Reply

Your email address will not be published.