ಶಿವನ ಪೂಜೆಗೆ ಸೋಮವಾರ ದಿನವೇ ಶ್ರೇಷ್ಠ ದಿನ ಯಾಕೆ? ನಿಜಕ್ಕೂ ಶಿವನ ಭಕ್ತರು ತಿಳಿಯಬೇಕು

0 4

ಶಿವ ಎಂದರೆ ತ್ರಿಮೂರ್ತಿಗಳಲ್ಲಿ ಒಬ್ಬ. ಹಿಂದೂ ಧರ್ಮದಲ್ಲಿ ಶಿವನಿಗೆ ವಿಶೇಷ ಸ್ಥಾನವಿದೆ. ವಾರದ ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ಯಾವುದಾದರೂ ಒಬ್ಬ ದೇವನಿಗೆ ಅರ್ಪಿತವಾಗಿರುತ್ತದೆ. ಆ ದಿನದಂದು ಆ ದೇವರಿಗೆ ಪೂಜೆ, ವೃತಗಳನ್ನು ಮಾಡಿದರೆ ಇಷ್ಟಾರ್ಥ ಸಿದ್ದಿಸುತ್ತದೆ, ನಮ್ಮ ಆಸೆ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಅದರಂತೆ ಸೋಮವಾರ ಶಿವನಿಗೆ ಮೀಸಲು. ಸೋಮವಾರದಂದು ಶಿವಪೂಜೆ, ವೃತ ಮಾಡಿದರೆ ವಿಶೇಷ ಫಲವನ್ನು ಒದಗಿಸುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಸೋಮವಾರದಂದು ಶಿವ ಪೂಜೆ ಹೇಗೆ ಮಾಡಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಸೋಮವಾರ ಅನೇಕರು ಶಿವನನ್ನು ಪೂಜಿಸುತ್ತಾರೆ ಮತ್ತು ಉಪವಾಸ ಮಾಡುತ್ತಾರೆ. ಸೋಮವಾರ ಮಾಡುವ ಉಪವಾಸವನ್ನು ಸೋಮೇಶ್ವರ ವೃತ ಎಂದು ಕರೆಯುತ್ತಾರೆ. ಸೋಮ ಅಂದರೆ ಚಂದ್ರ. ಪೌರಾಣಿಕ ನಂಬಿಕೆಗಳ ಪ್ರಕಾರ ಚಂದ್ರ ಸೋಮವಾರದ ದಿನವೇ ಶಿವನನ್ನು ಪೂಜಿಸಿದ್ದನು. ಈ ಪೂಜಾ ಫಲವಾಗಿಯೇ ಚಂದ್ರ ಕ್ಷಯರೋಗದಿಂದ ಮುಕ್ತಿ ಪಡೆದನು ಹೀಗಾಗಿ ಸೋಮವಾರ ಈಶ್ವರನ ಪೂಜೆಗೆ ಅತ್ಯಂತ ಶ್ರೇಷ್ಠವಾದ ದಿನ ಎಂದು ಹೇಳುತ್ತಾರೆ. ಇದಲ್ಲದೆ ಸೋಮ ಎಂದರೆ ಸೌಮ್ಯ ಎಂಬ ಅರ್ಥವು ಇದೆ. ಭಗವಾನ್ ಶಂಕರ ಬಹಳ ಶಾಂತವಾಗಿರುತ್ತಾನೆ, ಭಕ್ತರ ಭಕ್ತಿಗೆ ಬೇಗನೆ ಪ್ರಸನ್ನನಾಗಿ ಬಿಡುತ್ತಾನೆ. ಹೀಗಾಗಿಯೇ ಈಶ್ವರನನ್ನು ಬೋಲೆನಾಥ್, ಬೋಲೆ ಬಾಬಾ ಎಂದೂ ಕರೆಯುತ್ತಾರೆ.

ಶಿವನ ಆರಾಧನೆಯಲ್ಲಿ ಯಾವುದೇ ತಪ್ಪಾಗಬಾರದು. ಶಿವನ ಕೃಪೆಯು ಯಾವಾಗಲೂ ಉಳಿಯಲು ಕೆಲವು ಪ್ರಮುಖ ವಿಷಯಗಳು ಮತ್ತು ನಿಯಮಗಳನ್ನು ನೋಡಿಕೊಳ್ಳಬೇಕು ಸೋಮವಾರದ ದಿನ ಶಿವಲಿಂಗಕ್ಕೆ ಮೊದಲು ನೀರು ಮತ್ತು ಹಾಲಿನಿಂದ ಅಭಿಷೇಕ ಮಾಡಬೇಕು. ನಂತರ ಬಿಲ್ವಪತ್ರೆಯನ್ನು  ಅರ್ಪಿಸಿ  ಓಂ ನಮಃ ಶಿವಾಯಃ ಎಂಬ ಶಿವಮಂತ್ರವನ್ನು ಜಪಿಸಬೇಕು ಜೊತೆಗೆ ಈ ದಿನ ಶಿವನನ್ನು ಪೂಜಿಸಿದ ನಂತರ ಶಿವ ಚಾಲೀಸಾ ಅಥವಾ ಶಿವಾಷ್ಟಕವನ್ನು ಪಠಿಸಬೇಕು. ಶಿವನ ಪೂಜೆಯ ವೇಳೆ ಕೇದಗೆ ಹೂವನ್ನು ಬಳಸಬೇಡಿ. ಶಿವಪೂಜೆಗೆ ತುಳಸಿ ಎಲೆಗಳ ಬಳಕೆಯೂ ನಿಷಿದ್ಧ. ಶಿವಲಿಂಗಕ್ಕೆ ಯಾವುದೇ ಕಾರಣಕ್ಕೂ ಶಂಖದಿಂದ ನೀರನ್ನು ಅರ್ಪಿಸಬಾರದು ಮತ್ತು ಶಿವನ ಆರಾಧನೆಯಲ್ಲಿ ಎಳ್ಳು ಬಳಸಬಾರದು. ಹಾಗೆಯೇ ಶಿವಲಿಂಗಕ್ಕೆ ಅಥವಾ ಶಿವನ ಮೂರ್ತಿಗೆ ಅರಿಶಿಣ ಮತ್ತು ಕುಂಕುಮವನ್ನು ಕೂಡಾ ಹಚ್ಚಬಾರದು. 

ಶಿವನ ಪೂಜೆ ಮಾಡುವಾಗ ಶ್ರದ್ಧೆ, ಭಕ್ತಿ ಇರಬೇಕು. ಶ್ರದ್ಧೆಯಿಂದ ಶಿವನನ್ನು ಆರಾಧಿಸಿದರೆ ಬೇಡಿದ್ದನ್ನು ಕರುಣಿಸುತ್ತಾನೆ. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದು ಬಹಳ ಒಳ್ಳೆಯದು. ಶಿವನಿಗೆ ಸಂಬಂಧಿಸಿದ ಶ್ಲೋಕಗಳನ್ನು ಪ್ರತಿದಿನ ಹೇಳುವುದರಿಂದ ಒಳ್ಳೆಯದಾಗುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ. ಸಮಯ ಸಿಕ್ಕಾಗ ಶಿವನನ್ನು ನೆನೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸೋಮವಾರದ ದಿನದಂದು ಶಿವ ಪೂಜೆ, ವೃತ ಮಾಡುವುದನ್ನು ಮರೆಯಬೇಡಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.