ಶಿವನ ಹಣೆ ಮೇಲೆ ಸದಾ ಇರುವ ವಿಭೂತಿ ರ ಹಸ್ಯ

0 3

ಶಿವನು ಯಾವಾಗಲೂ ವಿಭೂತಿಯನ್ನು ಧರಿಸುತ್ತಾನೆ ಇದಕ್ಕೆ ಕಾರಣವೇನು, ಮೊದಲು ಅವನು ವಿಭೂತಿಯನ್ನು ಯಾವಾಗ ಧರಿಸಿದನು, ಶಿವನು ದೇವರ ದೇವ ಅದು ಹೇಗೆ ಹಾಗೂ ತ್ರಿಪುರದ ನಿರ್ಮಾಣ ಹೇಗಾಯಿತು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಶಿವ ಎಂದಾಕ್ಷಣ ಡಮರುಗ, ತ್ರಿಶೂಲ ನೆನಪಿಗೆ ಬಂದ ಹಾಗೆ ದಿವ್ಯ ವಿಭೂತಿಯು ಸಹ ನೆನಪಾಗುತ್ತದೆ. ಕಾರ್ತಿಕೇಯ ತಾರಕಾಸುರನನ್ನು ಕೊಂದನು ಆಗ ತಾರಕಾಸುರನ ಮಕ್ಕಳು ಬ್ರಹ್ಮನನ್ನು ಕುರಿತು ಘೋರ ತಪಸ್ಸನ್ನು ಮಾಡಿದರು ಹಲವು ಋತುಗಳು ಕಳೆಯಿತು ಪ್ರತ್ಯಕ್ಷನಾಗದೆ ವಿಧಿ ಇಲ್ಲದೆ ಬ್ರಹ್ಮ ದೇವನು ಪ್ರತ್ಯಕ್ಷನಾಗಿ ನಿಮಗೇನು ವರ ಬೇಕು ಕೇಳಿ ಎಂದು ಹೇಳುತ್ತಾನೆ. ಆಗ ತಾರಕಾಸುರನ ಮೂರು ಮಕ್ಕಳು ನಮ್ಮ ತಂದೆಯ ವಧೆಯಾಗಿದೆ, ರಾಜ್ಯವನ್ನು ಕಳೆದುಕೊಂಡಿದ್ದೇವೆ ನಮಗೆ ಇರಲು ನೆಲೆಯಿಲ್ಲ ಹೀಗಾಗಿ ಹೊಸ ನಗರವನ್ನು ನಿರ್ಮಿಸಬೇಕು ಎಂಬುದು ನಮ್ಮ ಆಶಯ ಆ ನಗರ ಶಾಶ್ವತವಾಗಿರಬೇಕು ಎಂದು ಬ್ರಹ್ಮ ದೇವನ ಬಳಿ ವರ ಕೇಳುತ್ತಾರೆ. ಆಗ ಬ್ರಹ್ಮದೇವನು ನಸುನಕ್ಕು ಈ ಲೋಕದಲ್ಲಿ ಶಾಶ್ವತವಾದದ್ದು ಯಾವುದು ಇಲ್ಲ ಈ ವರವನ್ನು ಕೊಡಲಾಗುವುದಿಲ್ಲ ಎಂದು ಹೇಳುತ್ತಾನೆ. ಆಗ ಅಸುರ ಸಹೋದರರು ಹಾಗಾದರೆ ನಾವು ಮೂವರು ಒಂದೊಂದು ನಗರವನ್ನು ನಿರ್ಮಿಸುತ್ತೇವೆ ನಗರವನ್ನು ಯಾರಾದರೂ ನಾಶ ಮಾಡಲು ಮುಂದಾದರೆ ಒಂದು ಬಾಣದಿಂದ ಮಾತ್ರ ನಾಶವಾಗುವಂತಿರಬೇಕು ಎಂಬ ವರವನ್ನು ಕೇಳುತ್ತಾರೆ.

ಮೂರು ಜನ ಬೇರೆ ಬೇರ ಕಡೆ ನಗರವನ್ನು ನಿರ್ಮಿಸಿಕೊಂಡರೆ ಒಂದು ಬಾಣದಿಂದ ಹೇಗೆ ನಾಶವಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಬ್ರಹ್ಮದೇವನು ತಥಾಸ್ತು ಎಂದು ಹೇಳುತ್ತಾನೆ. ಅಸುರ ಸಹೋದರರು ಸಂತೋಷದಿಂದ ಅಸುರ ಶಿಲ್ಪಿ ಮಾಯಾಸುರನಿಗೆ ನಗರವನ್ನು ನಿರ್ಮಿಸಲು ಹೇಳುತ್ತಾರೆ. ಮೊದಲ ನಗರ ಕಬ್ಬಿಣದಿಂದ ನಿರ್ಮಾಣವಾಗಿ ಭೂಮಿಯ ಮೇಲಿತ್ತು, ಎರಡನೆಯ ನಗರ ಬೆಳ್ಳಿಯಿಂದ ನಿರ್ಮಿತವಾಗಿ ಅಂತರಿಕ್ಷದಲ್ಲಿತ್ತು, ಮೂರನೇ ನಗರ ಚಿನ್ನದಿಂದ ನಿರ್ಮಿತವಾಗಿ ಸ್ವರ್ಗಕ್ಕೆ ಚಾಚಿಕೊಂಡಂತೆ ಇತ್ತು. ಈ ನಗರಗಳಿಗೆ ಅಸುರ ಸಹೋದರರು ತ್ರಿಪುರ ಎಂದು ಹೆಸರಿಟ್ಟರು. ಮೂರು ನಗರಗಳು ಚಲಿಸುತ್ತವೆ ಅವು ಒಂದೇ ರೇಖೆಯಲ್ಲಿ ಬರುವುದು ಅಪರೂಪವಾದ ಪುಷ್ಯ ನಕ್ಷತ್ರ ಚಂದ್ರನನ್ನು ಸೇರಿದಾಗ ಮಾತ್ರ ಇದು ಸಾವಿರ ವರ್ಷಕ್ಕೆ ಘಟಿಸುವುದು ಜೊತೆಗೆ ಒಂದೇ ರೇಖೆಯಲ್ಲಿ ಹೆಚ್ಚು ಸಮಯ ಇರುವುದಿಲ್ಲ ಆ ಸಮಯದಲ್ಲಿ ಒಂದು ಬಾಣದ ಮೂಲಕ ದ್ವಂಸ ಮಾಡಲು ಶಿವನಿಂದ ಮಾತ್ರ ಸಾಧ್ಯ ಆದರೆ ಶಿವ ಅಸುರರ ಆರಾಧ್ಯ ದೇವ. ತ್ರಿಪುರದ ಬಗ್ಗೆ ಎಲ್ಲೆಲ್ಲೂ ಸುದ್ದಿ ಹಬ್ಬಿತು ತ್ರಿಪುರದಲ್ಲಿ ತೋಟ, ಕೊಳಗಳು ಇದ್ದು ಸೌಂದರ್ಯಯುತವಾಗಿತ್ತು. ಒಮ್ಮೆ ಮಾಯಾಸುರನಿಗೆ ಕನಸಿನಲ್ಲಿ ತ್ರಿಪುರ ಅಂಧಕಾರದಲ್ಲಿ ಮುಳುಗಿದ್ದು, ಎಲ್ಲರ ಮನೆಗಳು ಸಾಗರದಲ್ಲಿ ಮುಳುಗಿ ಹೋಗಿತ್ತು. ನಾಲ್ಕು ಕಾಲಿನ ಮನುಷ್ಯ ಹಣೆಯಲ್ಲಿ ರಕ್ತವರ್ಣದ ಚೂರ್ಣವನ್ನು ಬಳಿದುಕೊಂಡು ಸ್ತ್ರೀಯೊಬ್ಬಳನ್ನು ಬೆನ್ನಟ್ಟಿದ ರೀತಿ ಕಂಡಿತು.

ಆಗ ಮಾಯಾಸುರ ಅಸುರ ಸಹೋದರರಿಗೆ ಕೇಡಾಗುವ ಸೂಚನೆ ಇದೆ ನೀವು ಧರ್ಮ ಮಾರ್ಗದಲ್ಲಿರಿ, ನಾನು ತಪಸ್ಸು ಮಾಡುತ್ತೇನೆ ಎಂದು ಹೇಳುತ್ತಾನೆ ಆದರೆ ಅಸುರ ಸಹೋದರರು ನಮ್ಮ ಏಳ್ಗೆ ನೋಡಿ ದೇವತೆಗಳು ತಂತ್ರ ಮಾಡಿದ್ದಾರೆ ಎಂದು ಅಂದುಕೊಂಡು ಅವರ ಮೇಲೆ ಧಾಳಿ ಮಾಡುತ್ತಾರೆ ಆಗ ಇಂದ್ರನ ನೇತೃತ್ವದಲ್ಲಿ ದೇವತೆಗಳು ಬ್ರಹ್ಮನ ಮೊರೆ ಹೋಗುತ್ತಾರೆ. ಬ್ರಹ್ಮನು ಹೆದರಬೇಡಿ ತ್ರಿಪುರದ ನಾಶ ಶಿವನಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾರೆ. ಕೈಲಾಸಕ್ಕೆ ಹೋದ ದೇವತೆಗಳಿಗೆ ಶಿವನು ತ್ರಿಪುರವನ್ನು ಸುಟ್ಟು ಭಸ್ಮ ಮಾಡುತ್ತೇನೆ ಎಂದು ಅಭಯ ನೀಡುತ್ತಾನೆ. ದೇವತೆಗಳು ಅಸುರರ ಮೇಲೆ ಧಾಳಿ ಮಾಡುತ್ತಾರೆ ಅಸುರರು ಸೋಲುವ ಭಯ ಶುರುವಾದಾಗ ಮಾಯಸುರ ಮಾಯಾಜಾಲ ನಿರ್ಮಿಸಿದ ತ್ರಿಪುರದಲ್ಲಿ ಸಂಜೀವಿನಿ ಕೊಳವನ್ನು ನಿರ್ಮಿಸಿ ಸತ್ತವರನ್ನು ಈ ಕೊಳದಲ್ಲಿ ತೇಲಿಬಿಟ್ಟರೆ ಅವರು ಮತ್ತೆ ಬದುಕುತ್ತಿದ್ದರು.

ಭೂಮಿ ಆಯ ತಪ್ಪಿ ಬೀಳುವವರೆಗೆ ರಾಕ್ಷಸರು ದೇವತೆಗಳ ಮೇಲೆ ಧಾಳಿ ಮಾಡಿದರು. ಆಗ ವಿಷ್ಣು ಗೂಳಿಯ ರೂಪದಲ್ಲಿ ತ್ರಿಪುರದ ಒಳಗೆ ನುಗ್ಗಿ ಸಂಜೀವಿನಿ ಕೊಳದಲ್ಲಿರುವ ನೀರನ್ನು ಕುಡಿದು ಅಸುರರ ಮೇಲೆ ಧಾಳಿ ಮಾಡಿದ. ಮಾರನೆಯ ದಿನ ಪುಷ್ಯ ನಕ್ಷತ್ರ ಚಂದ್ರನನ್ನು ಸೇರುವ ದಿನ ಅರೆ ಘಳಿಗೆಯಲ್ಲಿ ಮೂರು ನಗರಗಳು ಒಂದೇ ರೇಖೆಗೆ ಬರುತ್ತವೆ ಆಗ ಶಿವನು ಯುದ್ಧಕ್ಕೆ ಹೋಗುತ್ತಾನೆ ಸೂರ್ಯ, ಚಂದ್ರ ರಥದ ಚಕ್ರಗಳು, ಬ್ರಹ್ಮ ರಥದ ಸಾರಥಿ, ವಿಷ್ಣು ಬಾಣ, ಅಗ್ನಿದೇವ ಬಾಣದ ಚೂಪು ವಿದ್ಯುನ್ಮಾಲಿ ನಂದಿಗೆ ಚುಚ್ಚಿ ಬಿಟ್ಟ ಆಗ ಶಿವನು ವಿದ್ಯುನ್ಮಾಲಿಯನ್ನು ಸಂಹರಿಸಿದ ಮೂರು ನಗರ ಒಂದು ರೇಖೆಗೆ ಬಂದ ಸಮಯದಲ್ಲಿ ಶಿವನು ಬಾಣ ಬಿಡುತ್ತಾನೆ ಮೂರು ನಗರಗಳು ನಾಶವಾಗುತ್ತದೆ. ಅಸುರರ ಸಂಹಾರವಾಗುತ್ತದೆ ಆದರೆ ಶಿವನು ಕಣ್ಣೀರಿಡುತ್ತಾನೆ ಆಗ ದೇವತೆಗಳು ಕಣ್ಣೀರಿಗೆ ಕಾರಣವನ್ನು ಕೇಳಿದಾಗ ಶಿವನು ಅವರು ದುರುಳರು ಆದರೆ ಅವರು ನನ್ನ ಭಕ್ತರು ಅವರ ಭಕ್ತಿಯ ಫಲವಾದ ಈ ಮೂರು ನಗರಗಳ ನಾಶವನ್ನು ನಾನು ಸಂಭ್ರಮಿಸಲಾಗುವುದಿಲ್ಲ ಎಂದು ಹೇಳುತ್ತಾನೆ. ಮೂರು ನಗರಗಳ ಸುಟ್ಟ ಭಸ್ಮವನ್ನು ಶಿವನು ಕೈಗೆ ತೆಗೆದುಕೊಂಡು ಮೂರು ಬೆರಳುಗಳಿಂದ ಹಣೆಯ ಮೇಲೆ ಧರಿಸಿಕೊಂಡನು ಅದು ಅವನ ಭಕ್ತರ ಭಕ್ತಿಗೆ ಶಿವ ಕೊಟ್ಟ ಗೌರವವಾಗಿತ್ತು ಈ ಮೂರು ಸಾಲುಗಳೇ ವಿಭೂತಿಯಾಗಿದೆ. ವಿಭೂತಿಯ ಕಥೆಯನ್ನು ಎಲ್ಲರೂ ತಿಳಿಯಲೇ ಬೇಕು.

Leave A Reply

Your email address will not be published.