ಕನ್ನಡ ಚಿತ್ರರಂಗದಲ್ಲಿ ಹಲವು ನಾಯಕ ನಟರನ್ನು, ಪ್ರತಿಭಾವಂತರನ್ನು ನೋಡಬಹುದು ಅದರಲ್ಲಿ ವಿನೋದ್ ರಾಜ್ ಅವರು ಒಬ್ಬರು. ಕೆಲವೇ ಸಿನಿಮಾಗಳಲ್ಲಿ ನೈಜವಾಗಿ ನಟಿಸಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ಇನ್ನು ವಿವಾಹವಾಗದೇ ಇದ್ದಾರೆ. ಅವರು ವಿವಾಹವಾಗದೇ ಇರಲು ಕಾರಣವೇನು ಎಂಬ ಪ್ರಶ್ನೆಯ ಬಗ್ಗೆ ಅವರೇ ಹೇಳಿದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ನಾಯಕ ನಟ. ಈತ ಎಲ್ಲ ರೀತಿಯ ಪಾತ್ರಕ್ಕೂ ಜೀವ ತುಂಬಿದ ನಟಿ ಲೀಲಾವತಿ ಅವರ ಮುದ್ದಿನ ಪುತ್ರ. ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿನೋದ್ ಅವರು ಕೃಷ್ಣ ನೀ ಕುಣಿದಾಗ, ಕಾಲೇಜ್ ಹೀರೊ, ನಂಜುಂಡ, ಮಹಾಭಾರತ ಹೀಗೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ವಿನೋದ್ ರಾಜ್ ಅವರನ್ನು ನಮ್ಮ ಕನ್ನಡ ಚಿತ್ರ ರಂಗದ ಡ್ಯಾನ್ಸ್ ಕಿಂಗ್ ಎಂದು ಹೇಳಿದರೆ ತಪ್ಪಾಗಲಾರದು. ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದರೂ ಅವರು ಇನ್ನು ಮದುವೆಯಾಗಲಿಲ್ಲಾ ಇದು ಅವರ ಅಭಿಮಾನಿಗಳಿಗೆ ನಿರಾಸೆ ತಂದಿದೆ. ವಿನೋದ್ ರಾಜ್ ಅವರು ಅವರ ತಾಯಿ ಲೀಲಾವತಿ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ಅವರ ಪ್ರಕಾರ ಲೀಲಾವತಿಯವರನ್ನು ಅವರಷ್ಟು ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವವರು ಯಾರು ಇಲ್ಲ. ಅವರು ತನ್ನನ್ನು ಮದುವೆಯಾಗಿ ಬರುವ ಹುಡುಗಿ ಹೇಗಿರುತ್ತಾಳೋ, ಏನೋ ತಾನು ಬದುಕಿರುವವರೆಗೆ ಅಮ್ಮನನ್ನು ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಂಡು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ ಎಂದು ಅವರೇ ಅಭಿಮಾನಿಗಳಿಗೆ, ಆಪ್ತರಿಗೆ ತಾವು ಏಕೆ ಇನ್ನೂ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದಾರೆ.

ಇಂತಹ ವ್ಯಕ್ತಿ ಅಪರೂಪ ಇವರು ನಮ್ಮ ಕನ್ನಡ ಚಿತ್ರರಂಗದಲ್ಲಿರುವುದು ನಮ್ಮ ಹೆಮ್ಮೆ. ಮದುವೆಯಾಗಿ ಪತ್ನಿ ಬಂದ ನಂತರ ತಾಯಿಯನ್ನು ದೂರ ಮಾಡಿದ ಅದೆಷ್ಟೋ ನಟರ ಕಥೆಯನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಅವರು ತಮ್ಮ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ವಿನೋದ್ ರಾಜ್ ಅವರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ ಉತ್ತಮವಾಗಿ ತಮ್ಮದೇ ಆದ ಶೈಲಿಯಲ್ಲಿ ನಟಿಸುತ್ತಾರೆ ಅಲ್ಲದೇ ಲೀಲಾವತಿ ಅವರು ಯಾವ ಪಾತ್ರಕ್ಕೂ ಸೈ. ಅವರು ತಮ್ಮ ತಾಯಿಯೊಂದಿಗೆ ಸಂತೋಷವಾಗಿ ಇರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *