ಈ ರಾಶಿಗಳೆಂದರೆ ಶನಿ ದೇವರಿಗೆ ತುಂಬಾನೇ ಇಷ್ಟ, ಇವರಿಗೆ ಯಾವತ್ತೂ ಶನಿಕಾಟ ಕೊಡುವುದಿಲ್ಲ

0 26,350

Lord Shani ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ನ್ಯಾಯ ದಾತ ಎಂಬುದಾಗಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿಯ ಹೆಸರನ್ನು ಕೇಳಿದಾಗ ಪ್ರತಿಯೊಬ್ಬರೂ ಕೂಡ ಆತ ನಮಗೆ ಕಷ್ಟವನ್ನು ನೀಡುತ್ತಾನೆ ಅಥವಾ ಆತನ ವಕ್ರದೃಷ್ಟಿಯಿಂದ ನಮ್ಮ ಜೀವನವೇ ಹಾಳಾಗಿ ಹೋಗುತ್ತದೆ ಎಂಬುದಾಗಿ ಎಲ್ಲರೂ ಭಾವಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಜವಾಗಿ ಹೇಳಬೇಕೆಂದರೆ ಎಲ್ಲರ ಕರ್ಮಫಲಗಳಿಗನುಸಾರವಾಗಿ ಶನಿದೇವ ಪ್ರತಿಫಲವನ್ನು ಕರುಣಿಸುತ್ತಾನೆ.

ಶನಿ ನಿಮ್ಮ ಮೇಲೆ ಕರುಣೆ ಇಟ್ಟರೆ ಕೋಟ್ಯಾಧೀಶ ಕೂಡ ಆಗಬಹುದು. ಒಂದು ವೇಳೆ ನಿಮ್ಮ ಮೇಲೆ ಶನಿ ಸಾಡೇಸಾತಿ ಅಥವಾ ದೈಯ್ಯ ಪ್ರಭಾವವನ್ನು ಬೀರಿದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಯಾಕೆಂದರೆ ಕೇವಲ ನೀವು ಅಷ್ಟೇ ಅಲ್ಲ ದೇವಾನುದೇವತೆಗಳು ಕೂಡ ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಸಾಧ್ಯವಾಗಲಿಲ್ಲ. ಅದರಲ್ಲೂ ವಿಶೇಷವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗೆ ತುಲಾ ರಾಶಿ ಎಂದರೆ ಅತ್ಯಂತ ನೆಚ್ಚಿನ ರಾಶಿ ಎಂಬುದಾಗಿ ಹೇಳಲಾಗುತ್ತದೆ.

ಕೆಲವೊಂದು ಪ್ರತ್ಯೇಕ ಪರಿಸ್ಥಿತಿಗಳಲ್ಲಿ ಮಾತ್ರ ಶನಿದೇವ ತುಲಾ ರಾಶಿಯವರಿಗೆ ತೊಂದರೆಗಳನ್ನು ನೀಡುತ್ತಾನೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಅದರಲ್ಲೂ ಕೇವಲ ತಪ್ಪು ಅಥವಾ ಬೇಡದ ಕೆಲಸಗಳನ್ನು ಮಾಡಿದರೆ ಮಾತ್ರ. ಹೀಗಾಗಿ ತುಲಾ ರಾಶಿಯವರು ಕೊಂಚಮಟ್ಟಿಗೆ ಪರಿಶ್ರಮವನ್ನು ಪಟ್ಟರೆ ಸಾಕು ಪ್ರತಿಫಲವನ್ನು ಯಥೇಚ್ಛವಾಗಿ ಶನಿದೇವ ಕರುಣಿಸುತ್ತಾನೆ ಎಂದು ಹೇಳಬಹುದಾಗಿದೆ. ಹೀಗಾಗಿ ತುಲಾ ರಾಶಿಯವರು ಶನಿಯಿಂದ ಯಾವುದೇ ಕೆಟ್ಟ ಪರಿಣಾಮಗಳನ್ನು ಅಲ್ಲ ಬದಲಾಗಿ ಒಳ್ಳೆಯ ಅದೃಷ್ಟದ ಪ್ರತಿಫಲವನ್ನು ನಿರೀಕ್ಷಿಸಬಹುದಾಗಿದೆ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ.

ಶನಿಯನು ಒಲಿಸಿಕೊಳ್ಳಲು ಅಥವಾ ಆತನ ದಯೆಗೆ ಪಾತ್ರರಾಗಲು ಪರಿಶ್ರಮ ಪಟ್ಟು ಕೆಲಸ ಮಾಡಬೇಕು ಹಾಗೂ ಯಾವುದೇ ನ್ಯಾಯವಲ್ಲದ ಕೆಲಸಗಳನ್ನು ಮಾಡಬಾರದು. ಸಹಾಯದ ಅಗತ್ಯ ಇರುವವರಿಗೆ ಹಾಗೂ ಅಸಹಾಯಕರಿಗೆ ಅವರಿಗೆ ಬೇಕಾಗಿರುವಂತಹ ಸಹಾಯ ಹಾಗೂ ದಾನಗಳನ್ನು ಮಾಡಬೇಕು. ನೀವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಖಂಡಿತವಾಗಿ ನ್ಯಾಯದಾತ ಹಾಗೂ ಕರ್ಮಫಲದಾತ ಶನಿದೇವ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುವುದರಲ್ಲಿ ಯಾವುದೇ ಅನುಮಾನ ಬೇಡ. ನೀವು ಕೂಡ ತುಲಾ ರಾಶಿ ಅವರಾಗಿದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.