ಮನುಷ್ಯನ ದೇಹದ ಪ್ರತಿ ಅಂಗಗಳು ಪ್ರಾಮುಖ್ಯತೆವಹಿಸುತ್ತದೆ, ನಾವುಗಳು ಸೇವನೆ ಮಾಡುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ, ಆದ್ದರಿಂದ ದೇಹಕ್ಕೆ ಪೂರಕವಾಗಿ ಬೇಕಾಗುವಂತ ಹಣ್ಣು ತರಕಾರಿ ಮುಂತಾದವುಗಳನ್ನು ಸೇವಿಸಬೇಕಾಗುತ್ತದೆ. ಲಿವರ್ ಆರೋಗ್ಯಕ್ಕೆ ಯಾವ ರೀತಿಯ ಆಹಾರ ಪ್ರಾಮುಖ್ಯತೆವಹಿಸುತ್ತದೆ ಅನ್ನೋದನ್ನ ಮುಂದೆ ನೋಡಿ.
ಸೇಬುಹಣ್ಣು: ಎಲ್ಲ ರೀತಿಯ ರೋಗಿಗಳಿಗೆ ಸೇಬುಹಣ್ಣು ಉತ್ತಮ ಹಣ್ಣಾಗಿದೆ ಇದನ್ನು ತಿನ್ನುವುದರಿಂದ ದೇಹಕ್ಕೆ ಎನರ್ಜಿ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳುವುದರ ಜೊತೆಗೆ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಇನ್ನು ಎಲೆಯುಳ್ಳ ತರಕಾರಿಗಳು ಲಿವರ್ನಲ್ಲಿ ಪಿತ್ತರಸದ ಸ್ರವಿಸುವಿಕೆಯನ್ನು ಹೆಚ್ಚಿಸುವುದು. ಇದರಿಂದ ಪಿತ್ತರಸದ ಮೂಲಕ ವಿಷ ಹೊರಹೋಗಿ ಯಕೃತ್ ಹಾನಿಯಾಗುವ ಸಾಧ್ಯತೆ ತಗ್ಗುತ್ತದೆ.
ಬೆಳ್ಳುಳ್ಳಿ ಅನ್ನೋದು ಬರಿ ಅಡುಗೆಗೆ ಅಷ್ಟೇ ಅಲ್ಲದೆ ಲಿವರ್ ಆರೋಗ್ಯಕ್ಕೆ ಸಹಕಾರಿಯಾಗಿದೆ, ಹೌದು ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಲಿವರ್ ನ ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಅರ್ಜಿನೈನ್ ಎಂಬ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡಿ ಲಿವರ್ನ ರಕ್ತದೊತ್ತಡ ಕಡಿಮೆ ಮಾಡುವುದು.
ಆಲಿವ್ ಆಯಿಲ್ ಅನ್ನು ಮಿತವಾಗಿ ಸೇವಿದರೆ ಲಿವರ್ಗೆ ಒಳ್ಳೆಯದು. ದೇಹದಲ್ಲಿನ ವಿಷ ಹೀರುವಂತಹ ಲಿಪಿಡ್ ಬೇಸ್ ಇದರಲ್ಲಿದೆ. ಇದು ಲಿವರ್ನ ಕಾರ್ಯನಿರ್ವಹಣೆಗೆ ಹೆಚ್ಚು ಸಹಕಾರಿ. ಇನ್ನು ಹಣ್ಣು ತರಕಾರಿಗಳಲ್ಲಿ ಬಸಳೆ ಸೊಪ್ಪು ಬಿಟ್ ರೂಟ್, ಹೋವುಕೋಸು, ಇತ್ಯಾದಿಗಳು ಜೊತೆಗೆ ಪಪ್ಪಾಯಿ ಜ್ಯೂಸ್ ಗೆ ಸ್ವಲ್ಪ ಲಿಂಬೆರಸ ಹಾಕಿಕೊಂಡು ಕುಡಿಯಿರಿ. ಇದು ಯಕೃತ್ತಿನ ಆರೋಗ್ಯಕ್ಕೆ ಬಹಳ ಮುಖ್ಯವಾಗಿ ಕೆಲಸ ಮಾಡತ್ತದೆ. ನಿಮ್ಮ ಅರೋಗ್ಯ ವೃದ್ಧಿಗೆ ಜಂಕ್ ಫುಡ್ ಸೇವನೆ ಮಾಡುವ ಬದಲು ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿಗಳನ್ನು ತಿನ್ನುವುದು ಉತ್ತಮ.