ಕಲ್ಲುಸಕ್ಕರೆ ಅನ್ನೋದು ಬರಿ ಅಡುಗೆಗೆ ಅಷ್ಟೇ ಅಲ್ಲದೆ ಹಲವು ರೀತಿಯ ಬಳಕೆಯಲ್ಲಿ ಇದನ್ನು ಕಾಣಬಹುದು. ಕಲ್ಲು ಸಕ್ಕರೆ ತಿನ್ನೋದ್ರಿಂದ ಏನ್ ಲಾಭವಿದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಬಹಳಷ್ಟು ಜನಕ್ಕೆ ಈ ಕಲ್ಲುಸಕ್ಕರೆಯಿಂದ ಎಷ್ಟೊಂದು ಲಾಭವಿದೆ ಅನ್ನೋದು ಗೊತ್ತಿರೋದಿಲ್ಲ. ಇದರ ಕುರಿತು ಈ ಮೂಲಕ ಇಲ್ಲಿ ತಿಳಿಯುವ ಚಿಕ್ಕ ಪ್ರಯತ್ನ ಮಾಡೋಣ.

ಕಲ್ಲುಸಕ್ಕರೆ ಸಿಹಿ ಅಂಶವನ್ನು ಹೊಂದಿದೆ, ಇದರಲ್ಲಿ ಹಿಮೋಗ್ಲೋಬಿನ್ ಅಂಶ ಇರೋದ್ರಿಂದ ರಕ್ತ ಹೀನತೆ ಸಮಸ್ಯೆಯನ್ನು ಕಡಿಮೆಮಾಡುತ್ತದೆ, ಅಷ್ಟೇ ಅಲ್ದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣ ಸಮಸ್ಯೆ ಕಾಡೋದಿಲ್ಲ. ಕಲ್ಲುಸಕ್ಕರೆ ತಿನ್ನೋದ್ರಿಂದ ಗಂಟಲು ನೋವು ನಿವಾರಣೆಯಾಗುವುದು. ಕೆಲವರು ತಿನ್ನುವಂತ ಆಹಾರ ಜೀರ್ಣವಾಗದೇ ಬಹಳಷ್ಟು ನೋವು ಪಡುತ್ತಾರೆ ಆದ್ರೆ ಇದರಿಂದ ದೂರ ಉಳಿಯಲು ಒಮ್ಮೊಮ್ಮೆ ಕಲ್ಲುಸಕ್ಕರೆ ತಿನ್ನುವುದು ಉತ್ತಮ.

ಇನ್ನು ಕೆಲವೊಂದು ಅಧ್ಯಯನಗಳ ಪ್ರಕಾರ ಕಲ್ಲು ಸಕ್ಕರೆ ತಿನ್ನುವುದರಿಂದ ಗಂಟಲು ನೋವು ಹಾಗೂ ಕೆಮ್ಮು ನಿವಾರಣೆಯಾಗುತ್ತದೆ ಅನ್ನೋದನ್ನ ಪೋಸ್ಟ್​ ಗ್ರಾಜುಯೇಟ್​ ಮೆಡಿಕಲ್ ಜರ್ನಲ್​ನ ಅಧ್ಯಯನದಲ್ಲಿ ತಿಳಿಸಲಾಗಿದೆ.

ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಕಲ್ಲುಸಕ್ಕರೆಯನ್ನು ರಾತ್ರಿ ಮಲಗುವ ವೇಳೆ ಕಲ್ಲುಸಕ್ಕರೆಯನ್ನು ಕರಿಮೆಣಸಿನ ಪುಡಿಯೊಂದಿಗೆ ಮಿಶ್ರಣ ಮಾಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಕರಿಮೆಣಸು ದೇಹಕ್ಕೆ ರಕ್ಷಾ ಕವಚವಾಗಿ ಕೆಲಸ ಮಾಡುತ್ತೆ, ಯಾವುದೇ ವೈರಸ್ ಗಳು ದೇಹಕ್ಕೆ ನುಸುಳದಂತೆ ಮಾಡುವದು ಇನ್ನು ಮಸಾಲೆ ಪದಾರ್ಥಗಳು ಅರಿಶಿನ ಕಾಳುಮೆಣಸು ಶುಂಠಿ ಇಲ್ಲವು ಕೂಡ ಅಡುಗೆಯಲ್ಲಿ ಇದ್ರೆ ಉತ್ತಮ. ಗಮನಿಸಿ ಕಲ್ಲು ಸಕ್ಕರೆ ತಿಂದ ತಕ್ಷಣ ನೀರು ಕುಡಿಯಬಾರದು, ಇದರಿಂದ ಕೆಮ್ಮು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!