Ultimate magazine theme for WordPress.

ಮದುವೆಯಾದ್ರು ಬೇರೆಯವರ ಜೊತೆ ಸಂಬಂಧ ಬೆಳೆಸಲು ಈ ಕಾರಣವಂತೆ ನಿಜವೇ?

0 33,905

ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಬಹಳಷ್ಟು ದೊಡ್ಡ ಪಾತ್ರವನ್ನು ವಹಿಸುತ್ತದೆ ಯಾಕೆಂದರೆ ನಿಮ್ಮ ಜೀವನ ಪೂರ್ತಿ ಒಬ್ಬರ ಜೊತೆಗೆ ಬದುಕಲು ನೀವು ತೆಗೆದುಕೊಳ್ಳುವಂತಹ ಶಪಥದ ಕಾರ್ಯಕ್ರಮವೆಂದು ಮದುವೆಯನ್ನು ಅರ್ಥವತ್ತಾಗಿ ಹೇಳಬಹುದಾಗಿದೆ. ಆದರೆ ಯಾವುದೇ ಸಂಬಂಧಗಳು ಕೂಡ ಪ್ರೀತಿ ಹಾಗೂ ನಂಬಿಕೆಯ ಮೇಲೆ ನಿಂತು ಕೊಂಡಿರುತ್ತದೆ. ಆದರೆ ಕೆಲವು ಕಡೆಗಳಲ್ಲಿ ಮದುವೆಯೆಂಬ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳುತ್ತಿರುವವರ ಧ್ವನಿ ಒಂದೆಡೆ ಪ್ರಬಲವಾಗುತ್ತಿರುವಂತೆಯೇ ವಿವಾಹ ಬಂಧನ ತುಂಬ ಶ್ರೇಷ್ಠವಾದುದು ಎನ್ನುವವರೂ ಬಹಳಷ್ಟು ಜನರು.

ಈಚೆಗಷ್ಟೇ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ‘ಮದುವೆ ವ್ಯವಸ್ಥೆ ಬಗ್ಗೆ ನನಗೆ ನಂಬಿಕೆ ಇಲ್ಲ’ ಎಂದಿದ್ದರು. ವಿವಾಹಿತರನ್ನೂ ಅವಿವಾಹಿತರನ್ನೂ ರಕ್ಷಿಸುವ ಒಂದು ಸಭ್ಯಸುಂದರ ಚೌಕಟ್ಟು ವಿವಾಹ ಗಂಡು-ಹೆಣ್ಣು ಈ ಸಂಬಂಧದಲ್ಲಿ ಬದ್ಧರಾಗುವಾಗ, ಆಜೀವನವೂ ಪರಸ್ಪರ ಮೈತ್ರಿ-ನಿಷ್ಠೆ ಪ್ರಾಮಾಣಿಕತೆಗಳನ್ನು ಪಾಲಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡುತ್ತಾರೆ. ಇದು ಗುರುಹಿರಿಯರ, ಬಂಧುಮಿತ್ರರ, ಕುಲದೇವರ ಮತ್ತು ಅಗ್ನಿಯ ಸಾಕ್ಷಿಯಾಗಿ ನಡೆಯುತ್ತದೆ.

ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಮದುವೆ ಆದರೂ ಸಹ ಕೆಲವೊಮ್ಮೆ ಬೇರೆರೊಬ್ಬರ ಜೊತೆ ಸಂಬಂಧ ಬೆಳೆಸಲು ಕೆಲವು ಚಿಕ್ಕ ಪುಟ್ಟ ಕಾರಣಗಳು ಇರುತ್ತವೆ. ಕೆಟ್ಟದಾಗಿ ಆಲೋಚನೆ ಮಾಡುವ ಮುನ್ನ ಒಮ್ಮೆ ನೋಡಿ ಆ ಕಾರಣಗಳು ಏನೂ? ಹಾಗೇ ಬೇರೆಯವರ ಜೊತೆ ಸಂಬಂಧ ಬೆಳೆಸುವ ಯೋಚನೆ ಬರದೇ ಇರುವ ಹಾಗೇ ನಾವೇನು ಮಾಡಬೇಕು ಎನ್ನುವುದನ್ನೂ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಂಬಂಧಗಳು ಕೂಡ ಅತಿ ವೇಗವಾಗುವುದು ಅಷ್ಟೇ ಅಲ್ಲದೇ ಪ್ರಾರಂಭವಾದ ಕೆಲವೇ ಕೆಲವು ಸಮಯಗಳಲ್ಲಿ ವಿಚ್ಛೇದನದ ಮೂಲಕ ಅಥವಾ ಬೇರೆ ಆಗುವುದರ ಮೂಲಕ ಅಂತ್ಯಗೊಳ್ಳುತ್ತದೆ. ಇನ್ನು ಹೆಚ್ಚಿನ ಪ್ರಕರಣಗಳಲ್ಲಿ ಬೇರೊಂದು ವ್ಯಕ್ತಿಯ ಆಕರ್ಷಣೆಗೆ ಒಳಗಾಗುವುದರಿಂದ ಆಗಿಯೇ ಸಂಬಂಧಗಳು ಹಾಳಾಗುತ್ತವೆ ಎಂಬುದು ಕೂಡಾ ಸಾಬೀತಾಗಿದೆ. ಇಷ್ಟೊಂದು ಪ್ರೀತಿ ಹಾಗೂ ನಂಬಿಕೆ ಇದ್ದರೂ ಕೂಡ ಬೇರೆ ವ್ಯಕ್ತಿ ಕಡೆಗೆ ಆಕರ್ಷಿತರಾಗಲು ಕಾರಣಗಳೇನು ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತಾಗಿ ನಾವಿಲ್ಲಿ ನೋಡೋಣ. ಪ್ರತಿಯೊಬ್ಬ ಪುರುಷನಿಗೂ ಕೂಡ ಅಥವಾ ಮಹಿಳೆಗೂ ಕೂಡ ಹಿಂದಿನ ನೆನಪುಗಳು ಕಾಡುತ್ತಲೆ ಇರುತ್ತದೆ. ಉದಾಹರಣೆಗೆ ಪರಸ್ಪರ ಪ್ರೀತಿ ಮಾಡಿಕೊಂಡಿರುತ್ತಾರೆ

ಮನೆಯವರ ಮಾತನ್ನು ಕೇಳಿ ಪ್ರೀತಿಸಿದ ಹುಡುಗನನ್ನು ಬಿಟ್ಟು ಅವರು ತೋರಿಸಿದಂತಹ ಹುಡುಗ ಅಥವಾ ಹುಡುಗಿಯನ್ನು ಮದುವೆ ಮಾಡಿಕೊಂಡಿರುತ್ತಾರೆ. ಆದರೆ ಮದುವೆಯಾದ ಮೇಲೆ ಕೂಡ ಒಂದು ಹಂತಕ್ಕೆ ಮತ್ತೊಮ್ಮೆ ಅವರಿಗೆ ತಮ್ಮ ಹಳೆಯ ಪ್ರೀತಿಯ ನೆನಪು ಕಾಡಲು ಪ್ರಾರಂಭವಾಗುತ್ತದೆ ಮದುವೆಯಾಗಿ ತಮ್ಮ ಸಂಗಾತಿಯನ್ನು ಹೊರತುಪಡಿಸಿ ಇನ್ನೊಬ್ಬರ ಮೇಲೆ ಆಕರ್ಷಣೆ ಉಂಟಾಗಲು ಇದು ಕೂಡ ಒಂದು ಕಾರಣ ಎನ್ನಬಹುದು.

ಇನ್ನೂ ಎರಡನೆಯದಾಗಿ ಒಂಟಿತನದ ಭಾವನೆ. ಮದುವೆ ಆದ ಮೇಲೆ ಕೂಡ ಗಂಡ-ಹೆಂಡತಿಯಾಗಿ ಭಾವನಾತ್ಮಕವಾಗಿ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು. ಭಾವನಾತ್ಮಕವಾಗಿ ಒಂಟಿತನ ಎನ್ನುವುದು ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ಖಂಡಿತವಾಗಿಯೂ ಮೂರನೇ ವ್ಯಕ್ತಿಯ ಆಸರೆಗಾಗಿ ಹಾತೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂಬಂಧದಲ್ಲಿ ಬೇಸರ ಗೊಂಡಿರುವುದು ಸಂಬಂಧದಲ್ಲಿ ಪ್ರತಿಯೊಬ್ಬರು ಕೂಡ ಪರಸ್ಪರ ಇಬ್ಬರಿಗೂ ಸಮಯ ಹಾಗೂ ಪ್ರೀತಿಯನ್ನು ನೀಡಬೇಕು. ಒಂದು ವೇಳೆ ನೀವು ನಿಮ್ಮ ಕೆಲಸದಲ್ಲಿ ಮಗ್ನರಾಗಿದ್ದರೆ ನಿಮ್ಮ ಸಂಗಾತಿಗೆ ಸಮಯವನ್ನು ನೀಡದಿದ್ದರೆ ಅವರು ಖಂಡಿತವಾಗಿಯೂ ಮೂರನೇ ವ್ಯಕ್ತಿಯ ಆಶ್ರಯವನ್ನು ಹುಡುಕಿಕೊಂಡು ಹೋಗುವುದು ಗ್ಯಾರಂಟಿ.

ಹಾಗೂ ಮೂರನೆಯದಾಗಿ ಜಗಳ. ಇದು ಮದುವೆ ಆದಮೇಲೆ ಕರ ಸಂಸಾರದಲ್ಲಿ ಕೂಡಾ ಇದ್ದೇ ಇರುತ್ತದೆ. ಆದರೆ ಅದೇ ಜೀವನವಾಗಿ ಬಿಟ್ಟರೆ ಅದರಿಂದ ರೋಸಿಹೋಗಿ ಖಂಡಿತವಾಗಿ ನಿಮ್ಮ ಸಂಗಾತಿ ಮೂರನೇ ವ್ಯಕ್ತಿಯ ಆಶ್ರಯಕ್ಕೆ ಅತ್ಯಂತ ಹತ್ತಿರವಾಗುತ್ತಾರೆ. ಕೊನೆಯದಾಗಿ ದೈಹಿಕ ಅವಶ್ಯಕತೆಗಳು. ಮದುವೆ ಆದ ಮೇಲೆ ಪ್ರತಿಯೊಬ್ಬರಿಗೂ ಕೂಡ ಮಾನಸಿಕ ಪ್ರೀತಿ ಜೊತೆಗೆ ದೈಹಿಕವಾದ ಪ್ರೀತಿಯು ಕೂಡ ಅಗತ್ಯವಿರುತ್ತದೆ.

ಒಂದು ವೇಳೆ ತನ್ನ ಸಂಗಾತಿಯಿಂದ ದೈಹಿಕ ಪ್ರೀತಿ ಸರಿಯಾಗಿ ಸಿಗುತ್ತಿಲ್ಲ ಎಂದು ದೃಢವಾದರೆ ಆ ವ್ಯಕ್ತಿ ಮೂರನೇ ವ್ಯಕ್ತಿಯನ್ನು ದೈಹಿಕ ಪ್ರೀತಿಗಾಗಿ ಖಂಡಿತವಾಗಿಯೂ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಾರೆ ಇದರಿಂದಾಗಿ ದಾಂಪತ್ಯ ಎನ್ನುವುದು ಅರ್ಧದಲ್ಲಿ ಮುರಿದು ಹೋಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನವವಿವಾಹಿತರು ದಾಂಪತ್ಯ ಜೀವನವನ್ನು ನಡೆಸಿದರೆ ಖಂಡಿತವಾಗಿ ನಿಮ್ಮ ದಾಂಪತ್ಯ ಜೀವನ ಎನ್ನುವುದು ಸಾಕಷ್ಟು ಯಶಸ್ವಿಯಾಗಿ ದೀರ್ಘಕಾಲದವರೆಗೆ ನಡೆಯುತ್ತದೆ.

Leave A Reply

Your email address will not be published.