ಕನ್ನಡ ಸಿನಿರಸಿಕರ ಪಾಲಿನ ಆರಾಧ್ಯ ದೈವ ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ ಇಂದಿಗೂ ಕೂಡ ಅಜರಾಮರವಾಗಿ ಕುಳಿತುಕೊಂಡಿರುವಂತಹ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರು. ನಿಮಗೆಲ್ಲರಿಗೂ ತಿಳಿಸಿರುವಂತೆ ಡಿಸೆಂಬರ್ ಮೂವತ್ತು ಎರಡು ಸಾವಿರದ ಒಂಬತ್ತರಂದು ವಿಷ್ಣುವರ್ಧನ್ ಅವರನ್ನು ಕಳೆದುಕೊಂಡಿದ್ದೆವು. ವಿಷ್ಣುವರ್ಧನ್ ಅವರ ಅಂತಿಮ ಕ್ರಿಯೆಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಲಾಗಿತ್ತು. ನಾವಿಂದು ವಿಷ್ಣುವರ್ಧನ್ ಅವರ ಸಮಾಧಿ ಕುರಿತಾದ ಕೆಲವು ವಿಚಾರಗಳನ್ನು ನಿಮಗೆ ತಿಳಿಸಿಕೊಡುತ್ತವೆ.

ಅಭಿಮಾನ್ ಸ್ಟುಡಿಯೋ ಬಾಲಣ್ಣನವರ ಕನಸಿನ ಕೂಸು. ಸರ್ಕಾರ ಅವರಿಗೆ ನೀವು ಅಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಬಹುದು ಎಂದು ಇಂತಿಷ್ಟು ಜಾಗವನ್ನು ಕೊಟ್ಟಿತ್ತು. ಆ ಪ್ರಕಾರವಾಗಿ ಅವರು ಜೀವನಪೂರ್ತಿ ಕನಸು ಕಂಡಂತಹ ಅಭಿಮಾನ್ ಸ್ಟುಡಿಯೋ ನಿರ್ಮಿಸುತ್ತಾರೆ ಇದೆ ಅಭಿಮಾನ್ ಸ್ಟುಡಿಯೋ ದಿಂದ ಅವರಿಗೆ ಹೆಸರು ಕೂಡ ಬರುತ್ತದೆ ಜೊತೆಗೆ ಇದರಿಂದ ಅವರು ಬದುಕಿನಲ್ಲಿಯೂ ಕೂಡ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಕೊನೆ ಕೊನೆಯಲ್ಲಿ ಅವರು ಒಂದೊಂದು ರೂಪಾಯಿಗೂ ಪರದಾಡುವಂತಹ ಪರಿಸ್ಥಿತಿ ಇತ್ತು ಅಭಿಮಾನ್ ಸ್ಟುಡಿಯೋದಲ್ಲಿ ಹೆಚ್ಚಾಗಿ ಯಾವುದೇ ರೀತಿಯಾದಂತಹ ಚಿತ್ರೀಕರಣಗಳು ನಡೆಯುತ್ತಿರಲಿಲ್ಲ. ಸದ್ಯ ಈಗ ಅಲ್ಲಿ ಚಿತ್ರೀಕರಣಗಳು ನಡೆಯುತ್ತಿದ್ದು ಬಾಲಣ್ಣ ಅವರ ಮೊಮ್ಮಕ್ಕಳು ಇದನ್ನು ನೋಡಿಕೊಳ್ಳುತ್ತಿದ್ದಾರೆ. ಇದೇ ಜಾಗಕ್ಕಾಗಿ ಹೊಡೆದಾಟ ಮಾತಿನ ಚಕಮಕಿಯೂ ನಡೆದಿತ್ತು. ಇನ್ನು ವಿಷ್ಣುವರ್ಧನ್ ಅವರ ಸಮಾಧಿ ವಿಷಯಕ್ಕೆ ಬಂದರೆ ವಿಷ್ಣುವರ್ಧನ್ ಅವರು ವಿಧಿವಶರಾದಾಗ ಎಲ್ಲಿ ಅವರ ಸಮಾಧಿಯನ್ನು ಮಾಡುವುದು ಎಂಬ ಒಂದಷ್ಟು ಗೊಂದಲ ಇರುತ್ತದೆ.

ಸರ್ಕಾರ ಆಗ ಒಂದು ಸಲಹೆಯನ್ನು ಕೊಡುತ್ತದೆ ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿಯವರು ಕಂಠೀರವ ಸ್ಟುಡಿಯೋದಲ್ಲಿ ಮಾಡೋಣ ಅಲ್ಲಿ ಈಗಾಗಲೇ ಡಾಕ್ಟರ್ ರಾಜಕುಮಾರ್ ಅವರ ಸಮಾಧಿ ಇದೆ ಎಂದು ಹೇಳುತ್ತಾರೆ. ಆಗ ಕುಟುಂಬಸ್ಥರು ಅಲ್ಲಿ ಮಾಡಿದರೆ ಏನಾದರು ವಿವಾದ ಉಂಟಾಗಬಹುದು ಎಂಬ ಕಾರಣಕ್ಕೆ ಬೇಡ ಎಂದು ಹೇಳುತ್ತಾರೆ.

ಅಂತಿಮವಾಗಿ ಆಯ್ಕೆ ಮಾಡಿದ್ದು ಅಭಿಮಾನ್ ಸ್ಟುಡಿಯೋವನ್ನು ಆದರೆ ಅಂತ್ಯಕ್ರಿಯೆ ನಡೆಯುವಂತಹ ಸಮಯದಲ್ಲಿಯೇ ಆ ಜಾಗದ ಕುರಿತಾದಂತಹ ಒಂದಿಷ್ಟು ವಿವಾದ ಕೋರ್ಟನಲ್ಲಿ ಇತ್ತು. ಅಂತ್ಯಕ್ರಿಯೆ ಆದಮೇಲೆ ಆ ಸ್ಥಳ ವಿವಾದದಲ್ಲಿದೆ ಎಂಬುದು ತಿಳಿಯುತ್ತದೆ. ಬಾಲಣ್ಣನವರ ಮಗಳು ಕೂಡ ಕೋರ್ಟಿನಲ್ಲಿ ಕೇಸ್ ಮಾಡುತ್ತಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಅಂತಿಮಕ್ರಿಯೆ ನಡೆದಿರುವ ಕಾರಣ ಅಭಿಮಾನಿಗಳು ಅಲ್ಲಿಯೇ ಸಮಾಧಿ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ.

ಆದರೆ ನಿರಂತರವಾದ ಸಮಸ್ಯೆಗಳ ಕಾರಣದಿಂದಾಗಿ ಅದಕ್ಕೆ ಅವಕಾಶವಾಗಲಿಲ್ಲ. ಅಂತಿಮವಾಗಿ ಸಮಾಧಿ ಮೈಸೂರಿಗೆ ಶಿಫ್ಟ್ ಆಗುತ್ತದೆ ಅಲ್ಲಿ ಒಂದಿಷ್ಟು ಪ್ರಕ್ರಿಯೆಗಳು ನಡೆಯುತ್ತಿವೆ. ಅಲ್ಲಿಯೂ ಕೂಡ ಒಂದಷ್ಟು ಸಮಸ್ಯೆಗಳು ಉಂಟಾಗುತ್ತವೆ ಆದರೆ ಸದ್ಯ ಸಮಾಧಿ ನಿರ್ಮಾಣ ಕೆಲಸ ನಡೆಯುತ್ತಿದೆ. ನೀವು ಎಲ್ಲೇ ಸಮಾಧಿಯನ್ನ ಮಾಡಿದರು ಭಾವನಾತ್ಮಕವಾಗಿ ಸಂಪರ್ಕವಾಗುವುದು ಅಭಿಮಾನ್ ಸ್ಟುಡಿಯೋದಲ್ಲಿ ಇರುವಂತಹ ಜಾಗಕ್ಕೆ ಯಾಕೆಂದರೆ ಅಲ್ಲಿಯ ಅಂತ್ಯಕ್ರಿಯೆ ನಡೆದ ಕಾರಣ ಅಭಿಮಾನಿಗಳಿಗೆ ವಿಷ್ಣುವರ್ಧನ್ ಅವರು ಇಲ್ಲೇ ಇದ್ದಾರೆ ಎಂಬ ಭಾವನೆ ಬರುತ್ತದೆ.

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಂತಹ ಸ್ಥಳದಲ್ಲಿ ಒಂದು ಚಿಕ್ಕದಾದ ಸಮಾಧಿಯಲ್ಲಿ ಅವರ ಫೋಟೋಗಳನ್ನು ಹಾಕಲಾಗಿದೆ. ಪ್ರತಿದಿನ ಸಾವಿರಾರು ಅಭಿಮಾನಿಗಳು ಅಲ್ಲಿಗೆ ಬರುತ್ತಾರೆ ವಿಷ್ಣುವರ್ಧನ್ ಅವರನ್ನು ಸ್ಮರಿಸುತ್ತಾರೆ. ಅಲ್ಲಿರುವ ಸೆಕ್ಯೂರಿಟಿ ಹೇಳುವ ಪ್ರಕಾರ ಅಲ್ಲಿಗೆ ಪ್ರತಿದಿನ ಸಾವಿರಾರು ಜನರು ಬರುತ್ತಾರೆ ಚಿತ್ರೀಕರಣಕ್ಕೆ ಬಂದಂತಹ ಕಲಾವಿದರು ಅಲ್ಲಿಗೆ ಬಂದು ನಮಸ್ಕಾರವನ್ನ ಮಾಡಿಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ.

ಜೊತೆಗೆ ಭಾರತೀ ವಿಷ್ಣುವರ್ಧನ್ ಅವರು ಹೆಚ್ಚುಕಮ್ಮಿ ನಾಲ್ಕು ವರ್ಷಗಳಿಂದ ಆ ಕಡೆ ಬಂದಿಲ್ಲ ಅವರ ಕುಟುಂಬದವರು ಯಾರು ಕೂಡ ಬಂದಿಲ್ಲ ಎಂಬುದಾಗಿ ಹೇಳುತ್ತಾರೆ. ಬರಿ ಅಭಿಮಾನಿಗಳು ಮಾತ್ರ ಸಮಾಧಿಗೆ ಭೇಟಿ ನೀಡುತ್ತಾರೆ ಹೊರತು ಕುಟುಂಬದವರಾಗಲಿ ಅಥವಾ ಸಂಬಂಧಿಕರಾಗಲಿ ಯಾರು ಕೂಡ ಬರುವುದಿಲ್ಲ. ಅಭಿಮಾನಿಗಳೇ ಅಲ್ಲಿ ಸ್ವಚ್ಛಮಾಡಿ ಹೂವುಗಳನ್ನು ಜೋಡಿಸಿ ಪ್ರೀತಿಯಿಂದ ಅವರ ಸಮಾಧಿಗೆ ಸೇವೆಯನ್ನು ಸಲ್ಲಿಸುತ್ತಾರೆ. ನೀವು ಅಭಿಮಾನ್ ಸ್ಟುಡಿಯೋದಲ್ಲಿ ಇರುವಂತಹ ಸಮಾಧಿಗೆ ಭೇಟಿ ಕೊಟ್ಟಾಗ ಆಗುವಂತಹ ಭಾವನೆ ಬೇರೆ ಸ್ಥಳದಲ್ಲಿ ಸಮಾಧಿ ನಿರ್ಮಾಣವಾದಾಗ ಅಲ್ಲಿ ಈ ಭಾವನೆ ಸಿಗುವುದು ತುಂಬಾ ವಿರಳ ಏಕೆಂದರೆ ವಿಷ್ಣುವರ್ಧನ್ ಅವರು ಅಭಿಮಾನ್ ಸ್ಟುಡಿಯೋದಲ್ಲಿ ಇರುವಂತಹ ಜಾಗದಲ್ಲಿ ಭಾವನಾತ್ಮಕವಾಗಿ ನೆಲೆಸಿದ್ದಾರೆ.

Leave a Reply

Your email address will not be published. Required fields are marked *