ಕಷ್ಟ ಯಾರಿಗೆ ತಾನೆ ಬರುವುದಿಲ್ಲ. ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಕಷ್ಟ ತಪ್ಪಿದ್ದಲ್ಲ. ಕಷ್ಟ ಪಟ್ಟರೆ ಮಾತ್ರ ಸುಖವಾಗಿರಬಹುದು. ಹದ್ದು ಪಕ್ಷಿಗಳ ರಾಜ, ಅದು ಶಕ್ತಿವಂತ ಪಕ್ಷಿ ಆದರೂ ಅದು ಕಷ್ಟ ಪಡೆಬೇಕಾಗುತ್ತದೆ. ಹದ್ದು ಹೇಗೆ ಕಷ್ಟ ಪಡುತ್ತದೆ, ಜೀವನದಲ್ಲಿ ನಾವು ಕಷ್ಟ ಬಂದಾಗ ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಪ್ರಕೃತಿ ನಮಗೆ ಏನನ್ನೊ ಹೇಳಿಕೊಡಲು ಪ್ರಯತ್ನಿಸುತ್ತದೆ ಆದರೆ ನಾವು ಕಲಿತು ಕೊಳ್ಳುವುದಿಲ್ಲ. ಹದ್ದನ್ನು ಪಕ್ಷಿಗಳ ರಾಜ ಎಂದು ಕರೆಯುತ್ತಾರೆ. ಹದ್ದು ಚೆನ್ನಾಗಿ ಬೇಟೆಯಾಡುತ್ತದೆ, ಗುರಿಯಿಟ್ಟ ಬೇಟೆಯನ್ನು ತನ್ನದಾಗಿಸಿಕೊಳ್ಳುತ್ತದೆ. ಅದು 70 ವರ್ಷಗಳವರೆಗೆ ಬದುಕುತ್ತದೆ. ಹದ್ದಿಗೆ 30- 40 ವರ್ಷ ಆದಾಗ ಅದರ ರೆಕ್ಕೆ ಭಾರವಾಗುತ್ತದೆ, ಮೂಗು ಸೊಟ್ಟವಾಗುತ್ತದೆ, ಬೇಟೆಯಾಡಲು ಕಷ್ಟವಾಗುತ್ತದೆ ಅದು ಪ್ರಯತ್ನಪಡದೆ ಇದ್ದರೆ ಬೇಟೆಯಾಡಲು ಆಗದೆ 40 ವರ್ಷಕ್ಕೆ ಸತ್ತು ಹೋಗುತ್ತದೆ. ನಾನು ಬದುಕಬೇಕು ಎಂಬ ಛಲದಿಂದ ಬೇಟೆಯಾಡಲು ಪ್ರಯತ್ನಪಟ್ಟರೆ 70 ವರ್ಷಗಳು ಬದುಕುತ್ತದೆ. ಯಾರು ಇಲ್ಲದ ಬೆಟ್ಟ ಅಥವಾ ಶಿಖರಕ್ಕೆ ಹೋಗಿ ಗುಹೆ ಒಳಗೆ ಹೋಗುತ್ತದೆ ಅಲ್ಲಿ ಒಂದು ಕಲ್ಲಿಗೆ ತನ್ನ ಮೂಗನ್ನು ಜೋರಾಗಿ ಹೊಡೆಯುತ್ತದೆ ಎಷ್ಟೆ ನೋವಾದರೂ ಹೊಡೆದು ಹೊಸ ಮೂಗು ಬರುವವರೆಗೂ ಕಾಯುತ್ತದೆ. ಅದರ ಕಾಲಿನ ಉಗುರು ವಯಸ್ಸಾದ ಹದ್ದಿನ ಉಗುರಿನಂತಾಗುತ್ತದೆ ಅದಕ್ಕಾಗಿ ಕಲ್ಲಿಗೆ ಉಗುರನ್ನು ಜೋರಾಗಿ ಹೊಡೆದುಕೊಳ್ಳುತ್ತದೆ ಆಗ ಉಗುರು ಬಿದ್ದುಹೋಗುತ್ತದೆ. ಹೊಸ ಉಗುರು ಬರುವರೆಗೂ ಕಾಯುತ್ತದೆ.
ನಂತರ ತನ್ನ ಹೊಸ ಉಗುರಿನಿಂದ ಭಾರವಾದ ರೆಕ್ಕೆಗಳಲ್ಲಿ ಒಂದೊಂದು ರೆಕ್ಕೆಯನ್ನು ಕಿತ್ತುಹಾಕುತ್ತದೆ ನಂತರ ಹೊಸ ರೆಕ್ಕೆ ಬರುತ್ತದೆ. ಈ ಪ್ರಕ್ರಿಯೆ ನಡೆಯಲು 150 ದಿನ ಬೇಕು, ಅದು ಕಷ್ಟ ಪಡುತ್ತದೆ. ನಂತರ ಅದು ಬೇಟೆಯಾಡಲು ಪ್ರಾರಂಭಿಸುತ್ತದೆ. 150 ದಿನ ಅದು ಕಷ್ಟಪಡದೆ ಇದ್ದಿದ್ದರೆ ಮುಂದಿನ 30 ವರ್ಷ ಅದು ಬದುಕುತ್ತಿರಲಿಲ್ಲ. 150 ದಿನ ಅದು ಕಷ್ಟಪಡುವುದರಿಂದಲೆ ಮುಂದಿನ 30 ವರ್ಷ ಅದು ಆರಾಮಾಗಿ ಬದುಕುತ್ತದೆ. ಹಾಗೆಯೆ ನಮ್ಮ ಜೀವನದಲ್ಲಿ ಒಂದು ಟೈಮ್ ನಲ್ಲಿ ಕಷ್ಟ ಬರುತ್ತದೆ. ಆ ಸಮಯದಲ್ಲಿ ನಾವು ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಜನರು ಹೇಳುತ್ತಾರೆಂದು ತಲೆಕೆಡಿಸಿಕೊಳ್ಳಬಾರದು. ನೀವು ಮಾಡುತ್ತಿರುವ ಕೆಲಸ ಸರಿ, ತಪ್ಪು ಎಂದು ನಿಮ್ಮ ಮನಸ್ಸು ಅಥವಾ ಆತ್ಮ ಹೇಳುತ್ತದೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಅದರತ್ತ ಮನಸ್ಸನ್ನು ಏಕಾಗ್ರತೆಗೊಳಿಸಿಕೊಳ್ಳಬೇಕು. ಕಷ್ಟದ ಸಮಯದಲ್ಲಿ ಎದೆಗುಂದದೆ ಮುನ್ನುಗ್ಗಿದರೆ ಜೀವನಪೂರ್ತಿ ಸುಖವಾಗಿರಬಹುದು. ಮನುಷ್ಯ ಅಂದಮೇಲೆ ಎಲ್ಲರಿಗೂ ಕಷ್ಟ ಇದ್ದೆ ಇರುತ್ತದೆ. ಜನರು ಅವಮಾನ ಮಾಡುತ್ತಾರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದೆ ಜೀವನದಲ್ಲಿ ಮುನ್ನುಗ್ಗುತ್ತಿರಬೇಕು. ಏನೆ ಕಷ್ಟ ಬಂದರೂ ನಗುನಗುತ್ತಾ ಇರಿ.