ಜೀವನದಲ್ಲಿ ಒಬ್ಬಂಟಿ ಅನಿಸಿದಾಗ ಚಾಣಿಕ್ಯನ ಈ ಮಾತನ್ನು ನೆನೆಸಿಕೊಳ್ಳಿ

0 1

ಚಾಣಕ್ಯನ ಬಗ್ಗೆ ಯಾರಿಗೆ ತಿಳಿದಿಲ್ಲ. ಅವರು ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿ ಇದ್ದರು. ಅವರು ಹಲವಾರು ನೀತಿಗಳನ್ನು ನಮಗೆ ಆದರ್ಶವಾಗಿ ನೀಡಿ ಹೋಗಿದ್ದಾರೆ. ನಾವು ಇಲ್ಲಿ ಚಾಣಕ್ಯ ನೀಡಿದ ನೀತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಾಣಕ್ಯರು ಹೇಳುವ ಮಾತು ಮತ್ತು ನೀತಿಗಳು ಹೀಗಿವೆ. ಅಲ್ಪಕಾಲದ ಸುಖದಲ್ಲಿ ಮೈಮರೆಯಬಾರದು. ತಕ್ಷಣದ ಸುಖಕ್ಕಾಗಿ ದೀರ್ಘಕಾಲದ ಆನಂದ ಬಿಟ್ಟುಕೊಡುವವನು ಕಡು ಮೂರ್ಖನೇ ಸರಿ. ವಿಷಯುಕ್ತಹಾವು ಕೂಡ ತನ್ನಲ್ಲಿ ವಿಷವಿದೆ ಎಂದು ಬಹಿರಂಗ ಪಡಿಸಿಕೊಳ್ಳುವುದಿಲ್ಲ. ಆದರೆ ತಾನು ಅಪಾಯದಲ್ಲಿರುವ ಮುನ್ಸೂಚನೆ ತಿಳಿದ ಕೂಡಲೇ ಎರಗುವುದು. ಹಾಗೇ ಮನುಷ್ಯನು ತನ್ನ ಶಕ್ತಿಯನ್ನು ಬೇಕಾದಾಗ ಉಪಯೋಗಿಸಬೇಕು. ದೇಶದ ಬುದ್ಧಿಜೀವಿಗಳು ಮತ್ತು ಅಪರಾಧಿಗಳು ತಳಮಳಗೊಂಡಿದ್ದಾರೆ ಎಂದರೆ ಆ ದೇಶದ ಆಡಳಿತ ನಡೆಸುವಾತ ಸರಿಯಾದ ದಾರಿಯಲ್ಲಿ ಇದ್ದಾನೆಂದೇ ಅರ್ಥ.

ಏನೇ ಕೆಲಸ ಮಾಡಿದರೂ ಕೊನೆಗೆ ಅದರಲ್ಲಿ ಸಮಾಧಾನ ಇಲ್ಲದಿದ್ದರೆ ಜೀವನವೇ ನರಕವಾಗಿ ಬಿಡುತ್ತದೆ. ಆದುದರಿಂದ ನಮ್ಮ ಪಾಲಿಗೆ ಬಂದುದರಲ್ಲಿ ಮೊದಲಿಗೆ ಸಂತುಷ್ಟಗೊಳ್ಳಬೇಕು. ಸಿಂಹದಿಂದ ಕಲಿಯಬೇಕಾದದ್ದು ಏನೆಂದರೆ ಎಷ್ಟೇ ಸಣ್ಣ ಕೆಲಸವಿದ್ದರೂ ಅದು ತನ್ನ ಕೆಲಸ ಮುಗಿಯುವ ತನಕ ತನ್ನ ಶಕ್ತಿ ಮರೆತು ವಿಶ್ರಮಿಸುವುದಿಲ್ಲ. ಸ್ನೇಹಿತರನ್ನು ಹತ್ತಿರ ಇಟ್ಟುಕೊಳ್ಳಬೇಕು. ಆದರೆ ಶತ್ರುಗಳನ್ನು ಇನ್ನೂ ಹತ್ತಿರದಿಂದ ಗಮನಿಸಬೇಕು. ಬುದ್ಧಿವಂತ ವ್ಯಕ್ತಿಗೆ ಜೀವನದಲ್ಲಿ ಭಯ ಇರುವುದಿಲ್ಲ. ಎಲ್ಲರನ್ನು ನಂಬುವುದು ಅಪಾಯವಾಗಿದೆ. ಹಾಗೆಯೇ ಯಾರನ್ನೇ ನಂಬದೇ ಇರುವುದು ಇನ್ನೂ ದೊಡ್ಡ ಅಪಾಯವಾಗಿದೆ. ಯಾವುದು ವ್ಯಕ್ತಿಯನ್ನು ಮುಂದೆ ಬರುವ ಸಂಕಷ್ಟಗಳನ್ನು ಎದುರಿಸುವಂತೆ ಮಾಡುತ್ತದೆಯೋ ಅದೇ ಶಿಕ್ಷಣ.

ಮನುಷ್ಯ ಯಾರನ್ನು ಹೆಚ್ಚಾಗಿ ಪ್ರೀತಿಸುತ್ತಾನೋ ಅವರಿಂದ ತುಂಬಾ ಸುಲಭವಾಗಿ ಮೋಸ ಹೋಗುತ್ತಾನೆ. ದುರ್ಬಲ ಮನಸ್ಸಿನ ಮನುಷ್ಯ ವಿಷಯಗಳನ್ನು ದೊಡ್ಡದು ಮಾಡುತ್ತಾನೆ. ಆದರೆ ಅವನಿಂದ ದೊಡ್ಡದನ್ನು ಪಡೆಯಲಾಗುವುದಿಲ್ಲ. ಹಾಲಿನ ಜೊತೆ ಸೇರಿದ ನೀರು ಸಹ ಹಾಲಾಗುತ್ತದೆ. ಅದೇರೀತಿ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ. ಮರ್ಯಾದೆ ಮೀರಿದವರನ್ನು ಯಾವತ್ತೂ ಕೂಡ ನಂಬಬಾರದು. ಯಶಸ್ವಿ ವ್ಯಕ್ತಿ ಯಾವುದೇ ಕಳೆದುಹೋದ ಕ್ಷಣ ತೀರ್ಮಾನಗಳನ್ನು ನೆನೆದು ಕಾಲಹರಣ ಮಾಡಿ ಚಿಂತಿಸುವುದಿಲ್ಲ. ಮೌಲ್ಯಗಳನ್ನು ಮತ್ತು ತತ್ವಗಳನ್ನು ಮಾರಿಕೊಂಡು ಇತರರನ್ನು ಮೋಸ ಮಾಡಿ ಸಂಪಾದಿಸಿದ ಹಣ ವಿಷಕ್ಕೆ ಸಮ. ಯಾವ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಾನಾಗಿ ಹೋರಾಟ ಮಾಡುತ್ತಾನೋ ಆತನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ.

Leave A Reply

Your email address will not be published.