Leo Horoscope: ಸಿಂಹ ರಾಶಿಯವರಿಗೆ ಜುಲೈ 2023 ಈ ತಿಂಗಳಲ್ಲಿ ಆಗಲಿದೆ ಹಲವು ಬದಲಾವಣೆ

0 835

Leo Horoscope july 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ರಾಶಿ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಒಂದು ತಿಂಗಳು ಇದ್ದ ಹಾಗೆ ಪ್ರತಿ ತಿಂಗಳು ಇರುವುದು ಇಲ್ಲ ಕೆಲವರಿಗೆ ಶುಭ ಫಲ ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಇವೆಲ್ಲವೂ ಸಹ ಗ್ರಹಗಳ ಸ್ಥಾನ ಬದಲಾವಣೆಯಿಂದ ಉಂಟಾಗುತ್ತದೆ 2023 ಜುಲೈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಆತ್ಮ ವಿಶ್ವಾಸದಿಂದ ಬಹಳಷ್ಟು ಲಾಭವನ್ನು ತಂದುಕೊಡುತ್ತದೆ ವ್ಯಾಪಾರ ವ್ಯವಹಾರ ಬಿಸ್ನೆಸ್ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹಾಗೂ ಕಾಳಜಿಯನ್ನು ವಹಿಸಬೇಕು.

ಕುಜನಿಂದಾಗಿ ಅನಾರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಎಚ್ವರ ವಹಿಸಬೇಕು ಮತ್ತು ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ರಾಹು ಗ್ರಹ ಗುರುವಿನೊಂದಿಗೆ ಇದ್ದರು ಸಹ ಹಣಕಾಸಿನ ಖರ್ಚನ್ನು ತಂದು ಕೊಡುತ್ತಾನೆ ಹಾಗಾಗಿ ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು ಭಾಗ್ಯ ಸ್ಥಾನದಲ್ಲಿ ಇರುವ ಗುರು ಅದೃಷ್ಟ ತಂದು ಕೊಡುತ್ತಾನೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಸಿಂಹ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸಿಂಹ ರಾಶಿಯವರಿಗೆ ರವಿಯಿಂದ ಆತ್ಮ ವಿಶ್ವಾಸ ವೃದ್ಧಿ ಆಗುತ್ತದೆ ರಾಶಿಯ ಅಧಿಪತಿ ಮಿಥುನ ರಾಶಿಗೆ ಬರುತ್ತಾನೆ ರವಿ ಲಾಭ ಸ್ಥಾನದಲ್ಲಿ ಇದ್ದಾಗ ಒಳ್ಳೆಯ ಫಲಗಳು ಲಭಿಸುತ್ತದೆ ರವಿಯು ಧೈರ್ಯವನ್ನು ಕೊಡುತ್ತಾನೆ ಮುನ್ನುಗ್ಗುವ ಸ್ವಭಾವವನ್ನು ಕೊಡುತ್ತಾನೆ ಆತ್ಮ ವಿಶ್ವಾಸದಿಂದ ಬಹಳಷ್ಟು ಲಾಭವನ್ನು ತಂದುಕೊಡುತ್ತದೆ ವ್ಯಾಪಾರಸ್ಥರಿಗೆ ಸ್ವ ಉದ್ಯೋಗಿಗಳಿಗೆ ಲಾಭಗಳು ಜಾಸ್ತಿ ಆಗುತ್ತದೆ ಅದರಲ್ಲಿ ಹೆಚ್ಚಿನ ಅಭಿವೃದ್ದಿಯನ್ನು ತಂದು ಕೊಡುತ್ತಾನೆ ರಾಶಿಯ ಅಧಿಪತಿ ಲಾಭದಲ್ಲಿ ಇದ್ದಾಗ ಒಟ್ಟಾರೆಯಾಗಿ ಲಾಭದ ಕಡೆಗೆ ಹೆಚ್ಚಿನ ಫಲಗಳು ಲಭಿಸುತ್ತದೆ

Leo Horoscope july 2023

ಜುಲೈ 17 ರ ನಂತರ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ ಜುಲೈ 17ರ ನಂತರ ರವಿ ದುರ್ಬಲ ಸ್ಥಾನಕ್ಕೆ ಹೋಗುತ್ತದೆ ಅಥವಾ ವ್ಯಯ ಸ್ಥಾನಕ್ಕೆ ಹೋಗುತ್ತಾನೆ ಸಿಂಹ ರಾಶಿಯವರಿಗೆ ಗುರು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೆ ಗುರು ಹಿರಿಯರಿಂದ ಒಳ್ಳೆಯ ಮಾರ್ಗ ದರ್ಶನ ಸಿಗುತ್ತದೆ. ಆತ್ಮ ವಿಶ್ವಾಸ ಅಥವಾ ಆತ್ಮ ಶಕ್ತಿ ಹೆಚ್ಚಾಗಿ ಇರುತ್ತದೆ ರಾಹು ಸ್ವಲ್ಪ ದಿಕ್ಕನ್ನು ತಪ್ಲಿಸುತ್ತಾನೆ ಆದರೆ ಭಾಗ್ಯ ಸ್ಥಾನದಲ್ಲಿ ಇರುವ ಗುರು ಅದೃಷ್ಟ ತಂದು ಕೊಡುತ್ತಾನೆ ಹಾಗೆಯೇ ಇಚ್ಛಾಶಕ್ತಿಯನ್ನು ತಂದು ಕೊಡುತ್ತಾನೆ ಹಾಗಾಗಿ ಗುರುವಾರ ಗುರುಗಳನ್ನು ಸ್ಮರಿಸಬೇಕು ರಾಯರ ದರ್ಶನವನ್ನು ಪಡೆದುಕೊಳ್ಳಬೇಕು ಹಾಗೆ ಮಠಕ್ಕೆ ಹೋಗುವ ಸಾತ್ವಿಕ ಕ್ರಮಗಳನ್ನು ರೂಢಿಸಿಕೊಳ್ಳಬೇಕು ತ್ರಿ ಮೂರ್ತಿಗಳ ಸ್ವರೂಪವಾದ ಅಶ್ವತ್ಥ ಮರವನ್ನು ಪ್ರದಕ್ಷಿಣೆ ಮಾಡಬೇಕು.

ಅತ್ತಿ ಮರವನ್ನು ಸಹ ಪ್ರದಕ್ಷಿಣೆ ಮಾಡಬೇಕು ಈ ರೀತಿಯ ಕ್ರಮಗಳಿಂದ ಪಾಸಿಟಿವ್ ಆಗಿ ಮುಂದುವರಿಯಲು ಸಾಧ್ಯ ಆಗುತ್ತದೆ ಈ ಆಚರಣೆಗಳು ಸಾಕಷ್ಟು ಧೈರ್ಯವನ್ನು ತಂದು ಕೊಡುತ್ತದೆ ರಾಹುವಿನಿಂದ ಸಣ್ಣ ಪುಟ್ಟ ಕಿರಿಕಿರಿಗಳು ಕಂಡು ಬರುತ್ತದೆ ರಾಹು ನಷ್ಟವನ್ನು ತರುತ್ತಾನೆ ಜುಲೈ ಆರಂಭದಲ್ಲಿ ಕುಜ ಸಿಂಹ ರಾಶಿಗೆ ಬರುತ್ತಾನೆ ಇದರಿಂದಾಗಿ ಆರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ ಉಷ್ಣತೆ ದೇಹದ ತಾಪಮಾನದ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು ಮಲಬದ್ಧತೆ ಹಾಗೂ ಮೈಯಲ್ಲಿ ಉರಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತದೆ

ಜುಲೈ 17ರಂದು ವ್ಯಯ ಸ್ಥಾನಕ್ಕೆ ಬರುವ ರವಿ ಖರ್ಚುಗಳನ್ನು ಜಾಸ್ತಿ ಮಾಡುವ ಹಾಗೆ ಪ್ರೇರೇಪಿಸುತ್ತಾನೆ. ಖರ್ಚಿನ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಶುಕ್ರ ಗ್ರಹ ಸಿಂಹ ರಾಶಿಗೆ ಬಂದಾಗ ಚಟುವಟಿಕೆ ಜಾಸ್ತಿ ಆಗುತ್ತದೆ ಕೆಲಸ ಕಾರ್ಯಗಳಲ್ಲಿ ಗಮನ ಹೆಚ್ಚಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವವರು ಸಹ ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡುತ್ತಾರೆ ಮಾಡುವ ಕೆಲಸದಲ್ಲಿ ತಕ್ಕ ಪ್ರತಿಫಲ ಹಾಗೂ ಲಾಭಗಳು ಸಹ ದೊರಕುತ್ತದೆ

ಸಾಹಸಿಗರಾಗಿ ಇರುತ್ತಾರೆ ಕಷ್ಟಗಳು ಬಂದರು ಸಹ ಮುಂದಿನ ದಿನದಲ್ಲಿ ಸರಿ ಹೋಗುತ್ತದೆ ಎನ್ನುವ ಆಶಾಭಾವದಿಂದ ಬದುಕುತ್ತಾರೆ ಬುಧನು ಸಹ ಸಿಂಹ ರಾಶಿಗೆ ಬರುತ್ತಾನೆ ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಹೀಗೆ 2023 ಜುಲೈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಆತ್ಮ ವಿಶ್ವಾಸ ಹಾಗೂ ಧೈರ್ಯ ಕಂಡು ಬರುತ್ತದೆ ತುಂಬಾ ಶ್ರಮ ಜೀವಿಗಳಾಗಿದ್ದು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. (ಇದನ್ನು ಓದಿ) Gemini Horoscope: ಮಿಥುನ ರಾಶಿಯವರಿಗೆ ಜುಲೈ ತಿಂಗಳ ಆರಂಭದಲ್ಲೇ ಸೂಪರ್ ಆಗಿದೆ.

Leave A Reply

Your email address will not be published.