ನಿಂಬೆಹಣ್ಣು ನೋಡಲು ಗಾತ್ರದಲ್ಲಿ ಚಿಕ್ಕದು ಅನಿಸಿದರೂ ಇದರಲ್ಲಿರುವ ವಿಶೇಷತೆ ತುಂಬಾನೇ ಉಪಯೋಗಕಾರಿಯಾಗಿದೆ. ಅಡುಗೆಯಿಂದ ಪೂಜೆ ಪುನಸ್ಕಾರಗಳಿಗೆ ಹಾಗೂ ಮನೆಯಲ್ಲಿನ ಈ ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸವನ್ನು ಈ ನಿಂಬೆಹಣ್ಣು ಮಾಡುತ್ತದೆ ಅಷ್ಟಕ್ಕೂ ನಿಂಬೆಹಣ್ಣಿನಲ್ಲಿರುವಂತ ಪ್ರಯೋಜನಗಳೇನು ಅನ್ನೋದನ್ನ ತಿಳಿಯೋಣ
ಮೊದಲನೆಯದಾಗಿ ಅಡುಗೆ ಮನೆಯಲ್ಲಿ ಇಟ್ಟಿರುವಂತ ಹಣ್ಣು ತರಕಾರಿಗಕ ಮೇಲೆ ಕ್ರಿಮಿ ಕೀಟಗಳು ಓಡಾಡಿ ಬಹುಬೇಗನೆ ಹಾಳಾಗುತ್ತವೆ ಹಾಗಾಗಿ ಹಣ್ಣು ತರಕಾರಿಗಳ ಮೇಲೆ ಯಾವುದೇ ಕ್ರಿಮಿ ಕೀಟಗಳು ಓಡಾಡದಂತೆ ನಿಯಂತ್ರಿಸಲು ನಿಂಬೆ ಹಣ್ಣಿನ ರಸವನ್ನು ಸಿಂಪಡಿಸಿದರೆ ಹಣ್ಣು ತರಕಾರಿಗಳು ಪ್ರೆಶ್ ಆಗಿರುತ್ತವೆ. ಅಷ್ಟೇ ಅಲ್ದೆ ಇವುಗಳ ನಿಯಂತ್ರಣವನ್ನು ಕೂಡ ಮಾಡಬಹುದಾಗಿದೆ.
ಹೆಣ್ಣು ಮಕ್ಕಳು ಬಟ್ಟೆಯನ್ನು ಒಗೆಯುವಾಗ ಕಠಿಣವಾದ ಕಲೆಯನ್ನು ಹೋಗಲಾಡಿಸಲು ಬಟ್ಟೆಯನ್ನು ಉಜ್ಜಿ ಉಜ್ಜಿ ಸಾಕಾಗಬಹುದು ಅದಕ್ಕೆ ನಿಂಬೆ ಸಹಕಾರಿ, ಹೌದು ಕಲೆ ಆಗಿರುವಂತ ಜಾಗಕ್ಕೆ ಅರ್ಧ ಹೋಳು ನಿಂಬೆಯಿಂದ ಉಜ್ಜಿ ರಾತ್ರಿಯೆಲ್ಲಾ ಹಾಗೆ ಇಟ್ಟು ಬೆಳಗ್ಗೆ ಅ ಬಟ್ಟೆಯನ್ನು ತೊಳೆಯುವುದರಿಂದ ಬಟ್ಟೆಯ ಮೇಲಿನ ಕಲೆ ನಿವಾರಣೆಯಾಗುವುದು.
ಅಡುಗೆ ಮನೆಯಲ್ಲಿ ಇರುವಂತ ಫ್ರಿಡ್ಜ್ ವಾಸನೆ ಬರುತ್ತಿದ್ದರೆ ಅರ್ಧ ಹೋಳು ನಿಂಬೆಯನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ದುರ್ವಾಸನೆ ನಿವಾರಣೆಯಾಗುವುದು. ಅಷ್ಟೇ ಅಲ್ದೆ ಮನೆಯಲ್ಲಿ ಕ್ರಿಮಿ ಕೀಟ ಜಿರಳೆಗಳ ಹಾವಳಿ ಹೆಚ್ಚಾಗಿದ್ದರೆ. ಅವುಗಳು ಓಡಾಡಗುವ ಜಾಗದಲ್ಲಿ ಅರ್ಧ ಹೋಳು ನಿಂಬೆಯನ್ನು ಇಡುವುದರಿಂದ ನಿಯಂತ್ರಣವಾಗುತ್ತದೆ. ಹೀಗೆ ಅನೇಕ ಉಪಯೋಗಗಳನ್ನು ಈ ಚಿಕ್ಕ ನಿಂಬೆಹಣ್ಣಿನಿಂದ ಪಡೆದುಕೊಳ್ಳಬಹುದಾಗಿದೆ.