ಮಧುಮೇಹ ಅಂದರೆ ಡಯಾಬಿಟಿಸ್ ಯಾರಿಗೆ ಗೊತ್ತಿಲ್ಲ ಹೇಳಿ ಮಧುಮೇಹ ಎಂಬುದು ಈ ನಡುವೆ ಎಲ್ಲಾ ವರ್ಗದ ಜನರಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸುತ್ತಿರುವಂತಹ ಕಾಯಿಲೆ ಮಧುಮೇಹ ಬಂತಂದ್ರೆ ಸಾಕು ಅವರ ಜೀವನ ಕ್ರಮವೇ ಭಿನ್ನವಾಗಿಬಿಡುತ್ತದೆ ಎಲ್ಲರೂ ತಿನ್ನುವ ಆಹಾರವನ್ನು ತಿನ್ನುವಹಾಗಿಲ್ಲ ಸಿಹಿಪದಾರ್ಥಗಳನ್ನು ತಿನ್ನುವಹಾಗಿಲ್ಲ ಸಕ್ಕರೆ ಅಂಶ ಇಲ್ಲದಿರುವ ಪದಾರ್ಥಗಳನ್ನೇ ತಿನ್ನಬೇಕು. ಹೀಗೆ ಹಲವಾರು ಕ್ರಮಗಳನ್ನು ಅವರು ಅನುಸರಿಸಬೇಕಾಗುತ್ತದೆ ಹಾಗೆಯೇ ನಾವು ಹೇಳಹೊರಟಿರೋದು ಎನಂದ್ರೆ ಮುಧುಮೇಹ ಇರುವವರು ಯಾವ ಯಾವ ಪದಾರ್ಥಗಳನ್ನು ತಿನ್ನಲೇಬಾರದು ಅಂತ ಹಾಗಿದ್ರೆ ಆ ಪದಾರ್ಥಗಳು ಯಾವುವು ಅವುಗಳನ್ನು ತಿನ್ನುವುದರಿಂದ ಏನಾಗುತ್ತದೆ ಎಂಬುದನ್ನೂ ತಿಳಿಯೋಣ ಬನ್ನಿ

ಮೊದಲೇನೆಯದಾಗಿ ಬ್ರೆಡ್ ಅನ್ನು ಮಧುಮೇಹ ಇರುವವರು ತಿನ್ನಲೇಬಾರದು ಯಾಕಂದ್ರೆ ಬ್ರೆಡ್ ತಿನ್ನುವುದರಿಂದ ಅದು ನಮ್ಮ ದೇಹದಲ್ಲಿರುವ ಹಾಗೂ ರಕ್ತದಲ್ಲಿರುವ ಗ್ಲುಕೋಸ್ ಅಂಶವನ್ನು ಹಾಗೂ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ ಅಲ್ಲದೆ ಅದರಲ್ಲಿರುವ ಅಂಶಗಳು ಮಧುಮೆಹಿಗಳ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ ಹಾಗೆಯೇ ಹಾಲಿನಿಂದ ಮಾಡಿದ ಪದಾರ್ಥಗಳನ್ನು ತಿನ್ನದೇ ಇರುವುದೇ ಉತ್ತಮ ಯಾಕಂದ್ರೆ ಹಾಲಿನಲ್ಲಿರುವ ಅಧಿಕ ಕೊಬ್ಬಿನಾಂಶ ರಕ್ತದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಅಲ್ಲದೇ ನಮ್ಮ ದೇಹಕ್ಕೆ ಬೇಡದಿರುವ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಅದರಿಂದ ಮಧುಮೇಹ ಇರುವವರು ಈ ಹಾಲಿನ ಪದಾರ್ಥಗಳನ್ನು ಆದಷ್ಟು ಸೇವಿಸದಿರುವುದೇ ಉತ್ತಮ

ಹಾಗೆಯೇ ಬೇಕರಿಗಳಲ್ಲಿನ ತಂಪು ಪಾನೀಯಗಳನ್ನು ಮಧುಮೆಹಿಗಳು ಕುಡಿಯಬಾರದು ಯಾಕಂದ್ರೆ ತಂಪು ಪಾನೀಯಗಳಲ್ಲಿ ಬಳಸಲಾಗಿರುವ ಕೃತಕ ಸಕ್ಕರೆ ಅಂಶವೂ ದೇಹಕ್ಕೆ ಸೇರಿ ದೇಹದಲ್ಲಿನ ಗ್ಲೂಕೋಸ್ ಅಂಶವನ್ನು ಹೆಚ್ಚಿಸುವುದಲ್ಲದೆ ದೇಹದ ಹಲವಾರು ಅಂಗಾಂಗಗಳಿಗೆ ಇದು ಹಾನಿಕಾರಕವಾದದ್ದು ಹಾಗೆಯೇ ವೈಟ್ ರೈಸ್ ಅಂದರೆ ಅನ್ನವನ್ನು ಮಧುಮೆಹಿಗಳು ಸೇವಿಸುವುದರಿಂದ ಅದರಲ್ಲಿರುವ ಸಕ್ಕರೆ ಅಂಶ ನಮ್ಮ ದೇಹಕ್ಕೆ ಸೇರುವುದರಿಂದ ರಕ್ತದಲ್ಲಿರುವ ಶುಗರ್ ಲೆವೆಲ್ ಹೆಚ್ಚಾಗಿ ದೇಹಕ್ಕೆ ತಕ್ಷಣದಲ್ಲೇ ಹಾನಿಯುಂಟಾಗುವ ಸಾಧತೆಗಳಿರುತ್ತವೆ

ಇನ್ನೂ ಕೊನೆಯದಾಗಿ ಫ್ರೇಶ್ ಫ್ರೂಟ್ ಜ್ಯೂಸ್ ಗಳನ್ನು ಸಹ ಮಧುಮೇಹ ಇರುವವರು ಸೇವಿಸಬಾರದು ಯಾಕಂದ್ರೆ ಈ ಜ್ಯೂಸ್ ಗಳಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಇರುವುದಲ್ಲದೆ ಕೃತಕ ಸಕ್ಕರೆ ಅಂಶಗಳನ್ನು ಸಹ ಈ ಜ್ಯೂಸ್ ಗಳಲ್ಲಿ ಬಳಸುವುದರಿಂದ ಇದು ಮಧುಮೇಹ ಇರುವವರ ಆರೋಗ್ಯಕ್ಕೆ ಬಹಳ ಹಾನಿಕರವಾದುದ್ದು ಹಾಗೆಯೇ ಆಲೂಗಡ್ಡೆಯಲ್ಲಿ ಅತಿ ಹೆಚ್ಚು ಗ್ಲುಕೋಸ್ ಅನ್ನು ಉತ್ಪಾದಿಸುವ ಶಕ್ತಿ ಇರುವುದರಿಂದ ಆಲುಗಡ್ಡೆಯೂ ಸಹ ಮಧುಮೆಹಿಗಳಿಗೆ ಹಾನಿಕಾರಕವಾದದ್ದು ಈ ಮಾಹಿತಿಯನ್ನು ಆದಷ್ಟು ಮಧುಮೇಹ ಇರುವವರಲ್ಲಿ ಹಂಚಿಕೊಳ್ಳಿ ಈ ಮಾಹಿತಿಯು ಆವರಿಗೆ ಅತ್ಯುಪಕಾರಿ ಎಂಬುದಷ್ಟೇ ನಮ್ಮ ಆಶಯ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!