ಒಬ್ಬ ವ್ಯಕ್ತಿ ಯೋಗ ಅಥವಾ ಯಾವುದೇ ವ್ಯಾಯಾಮವನ್ನು ಮಾಡುವಾಗ ಆತ ಸರಿಯಾದ ನಿಯಮಗಳನ್ನು ತಿಳಿದುಕೊಂಡುರಬೇಕು. ಇಲ್ಲವಾದರೆ ಆತನ ದೇಹದ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗೆಯೇ ಮಲಗುವುದಕ್ಕೂ ಸಹ ಒಂದು ವಿಧಾನ ಇದೆ. ನಾವು ಮಲಗುವ ಭಂಗಿಯಿಂದ ನಮ್ಮ ಹೊಟ್ಟೆ ಮತ್ತು ಮೆದುಳಿನ ಮೇಲೆ ಕೆಟ್ಟ ಮತ್ತು ಒಳ್ಳೆಯ ಎರಡೂ ಪರಿಣಾಮಗಳನ್ನೂ ಬೀರುತ್ತವೆ. ನಾವೆಲ್ಲ ತಿಳಿದಿರುವಂತೆ ಗಾಢವಾದ ಹೆಚ್ಚಿನ ನಿದ್ರೆಯಲ್ಲಿ ನಮ್ಮ ದೇಹ ಹೆಚ್ಚು ಏನರ್ಜಿಯಿಂದ ಕೂಡಿರುತ್ತದೆ. ನಾವು ದಿನ ನಿತ್ಯ ಮಾಡುವ ಕೆಲಸಗಳನ್ನು ಸರಿಯಿಯಾಗಿ ಮಾಡಲು ನಿದ್ದೆ ನೆರವಾಗುತ್ತದೆ. ಗಾಢವಾದ ನಿದ್ರೆ ಹೇಗೆ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆಯೋ ಹಾಗೇ ನಾವು ಮಲಗುವ ಭಂಗಿ ಕೂಡ ಅಷ್ಟೇ ಮುಖ್ಯವಾದುದ್ದು. ಶೇಕಡಾ 70 ರಷ್ಟು ಜನರಿಗೆ ಮಲಗುವ ಸರಿಯಾದ ವಿಧಾನವೇ ತಿಳಿದಿಲ್ಲ. ಸರಿಯಾದ ಭಂಗಿಯಲ್ಲಿ ಮಲಗದೆ ಇರುವ ಕಾರಣ ನಿದ್ರೆಯಲ್ಲಿ ಪದೇ ಪದೇ ಎಚ್ಚರ ಆಗುವುದು, ಸರಿಯಾಗಿ ನಿದ್ರೆ ಬಾರದೆ ಇರುವುದು ಹೀಗೆ ಸರಿಯಾಗಿ ನಿದ್ರೆ ಇಲ್ಲದ ಕಾರಣ ಕಣ್ಣು ಉರಿ, ಮೈ ಕೈ ನೋವು, ಬೆಳಿಗ್ಗೆ ಮಲವಿಸರ್ಜನೆ ಸರಿಯಾಗಿ ಆಗದೆ ಇರುವುದು, ಬೆಳಗಿನ ಕೆಲಸ ಮಾಡಲು ಆಸಕ್ತಿ ಇಲ್ಲದಿರುವುದು, ರಕ್ತದ ಒತ್ತಡದಲ್ಲಿ ಬದಲಾವಣೆ ಆಗುವುದು , ತ್ವಚೆಯಲ್ಲಿ ಗುಳ್ಳೆ ಆಗುವುದು, ಚರ್ಮ ಸುಕ್ಕುಗಟ್ಟುವುದು , ಕೂದಲು ಉದುರುವಂತಹ ಅನೇಕ ತೊಂದರೆಗಳು ಆಗುವುದು ಇನ್ನೂ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಕೆಲವರು ಎಡ ಅಥವಾ ಬಲ ಭಾಗಕ್ಕೆ ತಿರುಗಿ ಮಲಗಿರುತ್ತರೆ. ಕೆಲವರು ಬೆನ್ನಮೇಲೆ ಅಥವಾ ಹೊಟ್ಟೆಯ ಮೇಲೆ ತಿರುಗಿ ಮಲಾಗುತ್ತರೆ. ಇದರಿಂದ ಹಲವಾರು ಅಡ್ಡ ಪರಿಣಾಮಗಳು ಬೀರುತ್ತವೆ. ಕೆಲವರು ಹೊಟ್ಟೆಯ ಮೇಲೆ ಮಲಗುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಹೀಗೆ ಮಲಗುವುದು ಅಪಾಯ. ಹೊಟ್ಟೆಯ ಮೇಲೆ ಮಲಾಗುವುದರಿಂದ ನಮ್ಮ ಬೆನ್ನು ಮತ್ತು ಕತ್ತಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಅಷ್ಟೇ ಅಲ್ಲದೆ ಉಸಿರಾಟದ ತೊಂದರೆಯಿಂದ ಅಸ್ತಮಾ ಅಂತಹ ಕಾಯಿಲೆಗಳು ಶುರು ಆಗುತ್ತವೆ. ಇಮನು ಹೊಟ್ಟೆಯ ಮೇಲೆ ಮಲಗುವವರಿಗೆ ಕ್ರಮೇಬವಾಗಿ ಬೆನ್ನು ಮತ್ತು ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇದು ನಮ್ಮ ಜೀರ್ಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಬಲಗಡೆ ಭಾಗಕ್ಕೆ ತಿರುಗಿ ಮಲಗುವುದರಿಂದಲೂ ಸಹ ಹಲವಾರು ಅಪಾಯಗಳು ಇವೆ. ನಾವು ನಮ್ಮ ದೇಹದ ಪ್ರತಿಕ್ರಿಯೆಯನ್ನು ತಿಳಿದಿದ್ದರೆ, ನಮ್ಮ ಹೊಟ್ಟೆ ನಮ್ಮ ದೇಹದ ಎಡ ಭಾಗದಲ್ಲಿ ಇರುತ್ತದೆ. ಅಲ್ಲೇ ಹೃದಯವೂ ಸಹ ಇರುತ್ತದೆ. ಹೀಗೆ ಬಳ ಭಾಗದಲ್ಲಿ ಮಲಾಗುವುದರಿಂದ ಭೂಮಿಯ ಗುರುತ್ವಾಕರ್ಷಣೆ ಬಲ ಇದರಿಂದಾಗಿ ನಮ್ಮ ಹೊಟ್ಟೆ ಮತ್ತು ಹೃದಯ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಲು ಆರಂಭಿಸುತ್ತವೆ. ಇದರಿಂದಾಗಿ ಹೊಟ್ಟೆಯಲ್ಲಿ ಅಸಿಡಿಟಿ, ತೂಕ ಹೆಚ್ಚಳ, ಮಲಬದ್ಧತೆ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾದ್ರೆ ಯಾವ ದಿಕ್ಕಿಗೆ ತೋಯುಗಿ ಮಲಗಬೇಕು ಅಂದರೆ ಎಡ ಭಾಗದಲ್ಲಿ ತಿರುಗಿ ಮಲಾಗುವುದೇ ಸರಿಯಾದ ಪ್ರಮಾ ಆಗಿರುತ್ತದೆ. ನಾವು ಕೇಳಿರಬಹುದು ಆಯುರ್ವೇದ ಮತ್ತು ಇಂಗ್ಲಿಷ್ ಮೆಡಿಸಿನ್ ಗಳಲ್ಲಿ ಎಡ ಭಾಗಕ್ಕೆ ತಿರುಗಿ ಮಲಗಲು ಸೂಚಿಸುತ್ತಾರೆ. ಹೀಗೆ ಮಲಗುವುದು ನಮ್ಮ ಜೀರ್ಣ ಕ್ರಿಯೆಗೆ ಉತ್ತಮ ಮಾರ್ಗ. ಹಾಗೆ ನಮ ಹೃದಯ, ಮೆದುಳು, ತ್ವಚೆ , ಕೂದಲು ಹೀಗೆ ಶರೀರಕ್ಕೆ ಒಳ್ಳೆಯದು. ಎಡ ಭಾಗಕ್ಕೆ ತಿರುಗಿ ಮಲಾಗುವುದರಿಂದ ನಮ್ಮ ದೇಹದ ಎಷ್ಟೋ ರೋಗಗಳು ನಮಗೆ ತಿಳಿಯದೆ ಗುಣ ಆಗಿರುತ್ತವೆ.

ನಾವು ಎಡ ಭಾಗಕ್ಕೆ ತಿರುಗಿ ಮಲಾಗುವುದರಿಂದ ದೇಹದಲ್ಲಿ ಜೀರ್ಣ ಕ್ರಿಯೆ ಬೇಗ ಆಗುತ್ತದೇ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಈ ಕ್ರಮ ಸಹಾಯಕಾರಿ ಆಗುತ್ತದೆ. ಎಡ ಭಾಗದಲ್ಲಿ ಮಲಗಿದಾಗ ಸೇವಿಶೇದ ಆಹಾರ ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಸುಲಭವಾಗಿ ಚಲಿಸುತ್ತೆ. ಇದರಿಂದ ಮಲವಿಸರ್ಜನೆಗೂ ಸಹಾಯ ಆಗುತ್ತದೆ. ನಮ್ಮ ದೇಹವು ಹೃದಯದ ಎಡ ಭಾಗದಲ್ಲಿ ಇರುವುದರಿಂದ ಹೃದಯಕ್ಕೆ ರಕ್ತ ಸಂಚಾರ ಸುಗಮ ಆಗುತ್ತದೆ. ಗೊರಕೆ ಹೊಡೆಯುವುದರಿಂದಲೂ ಕೂಡಾ ಮುಕ್ತಿ ಹೊಂದಬಹುದು. ಇನ್ನು ಎಡ ಭಾಗಕ್ಕೆ ತಿರುಗಿ ಮಲಗುವುದು ಗರ್ಭಿಣಿಯರಿಗೆ ಅತಿ ಅವಶ್ಯಕ ಆಗಿರುತ್ತದೆ. ಎಲ್ಲ ಡಾಕ್ಟರ್ ಗಳೂ ಸಹ ಗರ್ಭಿಣಿಯರಿಗೆ ಒಡೆ ಸಲಹೆಯನ್ನು ನೀಡುತ್ತಾರೆ. ಒಟ್ಟಿನಲ್ಲಿ ಎಡ ಭಾಗಕ್ಕೆ ತಿರುಗಿ ಮಲಗುವುದು ದೇಹದ ಎಲ್ಲಾ ಭಾಗಗಳಿಗೂ ಒಳ್ಳೆಯದು ಎಂದು ತುಂಬಾ ರಿಸರ್ಚ್ ಗಳಲ್ಲಿ ಕೂಡ ತಿಳಿದುಬಂದಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!