ನರೇಗಾ ಯೋಜನೆಯಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಎಂ.ಎಸ್ಸಿ ಪದವೀಧರೆಗೆ ಉದ್ಯೋಗದ ಭರವಸೆ ನೀಡಿದ ಪಂಚಾಯತ್‌ ರಾಜ್‌ ಸಚಿವ

0 0

ಈಗಾಗಲೇ ಜನರು ರಾಜ್ಯದಲ್ಲಿ ಕರೋನ ಆರ್ಭಟದಿಂದ ತತ್ತರಿಸಿ ಹೋಗಿದ್ದಾರೆ, ಹೀಗಿರಿವಾಗ ಬಡವರು ಹಾಗು ಮಧ್ಯಮ ವರ್ಗದ ಜನರು ಕಷ್ಟ ಪಡುತ್ತಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಸಡಲಿಕೆ ಆಗಿದ್ದು ರಾಜ್ಯ ಸರ್ಕಾರ ನರೇಗಾ ಯೋಜನೆಯಡಿಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸವನ್ನು ನೀಡುತ್ತಿದೆ. ಅಂತಹ ಸಂದರ್ಭದಲ್ಲಿ ಮನೆಯ ಪರಿಸ್ಥಿತಿ ಹಾಗು ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಲುವಾಗಿ ತನ್ನ ತಂದೆ ತಾಯಿಗಳ ಜೊತೆಗೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸಕ್ಕೆ ಎಂ.ಎಸ್ಸಿ ಪದವೀಧರೆ ದೀಪಶ್ರೀ ಬರುತ್ತಿದ್ದಾರೆ.

ಹೌದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಸಮೀಪದ ಅಂಜಿನಾಪುರದಲ್ಲಿ ಈ ದೀಪಾಶ್ರೀ ಅನ್ನೋರು ಕೂಲಿ ಕೆಲಸಕ್ಕೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಾನು ದುಡಿದು ತನ್ನ ತಂದೆ ತಾಯಿಯರ ಕನಸನ್ನು ಪೂರ್ಣಗೊಳಿಸಬೇಕು ಅನ್ನೋ ಛಲದಿಂದ ಉಪನ್ಯಾಸಕಿ ಆಗುವ ಬಯಕೆಯೊಂದಿಗೆ ದಾವಣಗೆರೆ ವಿಶ್ವವಿದ್ಯಾಲದಲ್ಲಿ ಗಣಿತ ವಿಷಯದಲ್ಲಿ ಎಂ.ಎಸ್ಸಿ ಮಾಡಿದ್ದಾರೆ.

ನರೇಗಾ ಕಾಮಗಾರಿ ವೀಕ್ಷಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪನವರು ಇದನ್ನು ಗಮನಿಸಿ ಇವರ ಈ ಕಾರ್ಯ ವೈಖರಿಗೆ ಮೆಚ್ಚಿ ಈ ಪದವೀಧರೆಗೆ ಕರೋನ ಬಿಕ್ಕಟು ಮುಗಿದ ಮೇಲೆ ನನ್ನನು ಸಂಪರ್ಕಿಸಲು ಹೇಳಿ ಯಾವುದಾದರು ಉದ್ಯೋಗ ಕೊಡಿಸುವೆ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ಯೋಗೀಶ್ ಅವರಿಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಶುಕ್ರವಾರ ನರೇಗಾ ಕಾಮಗಾರಿ ವೀಕ್ಷಿಸುವಾಗ ವಿದ್ಯಾರ್ಥಿನಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

‘ಕೊರೊನಾ ಬಿಕ್ಕಟ್ಟು ಮುಗಿದ ನಂತರ ವಿದ್ಯಾರ್ಥಿನಿಗೆ ನನ್ನನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಿ. ಯಾವುದಾದರೂ ಉದ್ಯೋಗ ಕೊಡಿಸುತ್ತೇನೆ’ ಎಂದು ಸಚಿವರು ಜಿಲ್ಲಾ ಪಂಚಾಯಿತಿ ಸಿಇಒ ಯೋಗೀಶ್ ಅವರಿಗೆ ಕೆ.ಎಸ್‌. ಈಶ್ವರಪ್ಪನವರು ಸೂಚಿಸಿದರು.

Leave A Reply

Your email address will not be published.