ನೆನೆಸಿದ ಕಡಲೆ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭಗಳಿವು

0 42

ಕಡಲೆ ಒಂದು ರೀತಿಯ ದ್ವಿದಳ ಧಾನ್ಯದಲ್ಲಿ ಬರುವಂತಹ ಕಾಳು. ಇದರಲ್ಲಿ ಹೆಚ್ಚಾಗಿ ಪ್ರೊಟೀನ್ ಅಂಶಗಳು ಇರುತ್ತವೆ. ಈ ಒಣಗಿದ ಕಡಲೆ ಬೀಜಗಳನ್ನು ನೆನೆಸಿ ತಿನ್ನುವುದರಿಂದ ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕಡಲೆಯನ್ನು ನಾವು ನಮ್ಮ ಮನೆಯ ಅಡುಗೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಕಡಲೆ ಹಿಟ್ಟಿನಿಂದ ಹಲವು ಬಗೆಯ ಸಿಹಿ ತಿನಿಸುಗಳನ್ನು ಸಹ ಮಾಡಲಾಗುತ್ತದೆ. ಆದರೆ ಕಡಲೆಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲ ಆರೋಗ್ಯಕಾರಿ ಅಂಶಗಳು ಇವೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ.

ಕಡಲೆಯಲ್ಲಿ ಫೈಬರ್ ಅಂಶಗಳು ಹೆಚ್ಚಾಗಿ ಇರುತ್ತದೆ ಇದು ಶರೀರದಲ್ಲಿ ಇರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಕೂಡಾ ಬರದಂತೆಯೇ ನೋಡಿಕೊಳ್ಳುತ್ತದೆ. ನಾನ್ ವೆಜ್ ತಿನ್ನದವರಿಗೆ ಕಡಲೆ ಒಂದು ವರದಾನ ಇದ್ದಂತೆ. ಯಾಕೆಂದರೆ ಮಾಂಸದಲ್ಲಿ ಇರುವ ಪ್ರೊಟೆಯುಗಳೆಲ್ಲ ಕಡಲೆಯಲ್ಲಿ ದೊರೆಯುತ್ತದೆ. ಪೊಟ್ಯಾಶಿಯಂ, ಮೆಗ್ನೇಷಿಯಂ, ಕ್ಯಾಲ್ಸಿಯಂ ತರದ ಎಷ್ಟೋ ಮಿನರಲ್ಸ್ ಕಡಲೆಯಲ್ಲಿ ಇರುತ್ತದೆ. ಇದು ಬ್ಲಡ್ ಪ್ರಶರ್ ಅನ್ನು ನಿಯಂತ್ರಣ ಮಾಡುವುದರ ಜೊತೆಗೆ ಬೇಗ ಹಸಿವು ಆಗದಂತೆಯೂ ನೋಡಿಕೊಳ್ಳುತ್ತದೆ. ಇದರಿಂದಾಗಿ ಇದು ತೂಕವನ್ನು ಇಳಿಸಲು ಸಹಕರಿಸುತ್ತದೆ. ಪ್ರತೀ ನಿತ್ಯವೂ ಕಡಲೇಯನ್ನು ಸೇವಿಸುವುದರಿಂದ ನಮ್ಮ ರಕ್ತದಲ್ಲಿರುವ ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ ಜೊತೆಗೆ ಇದು ರಕ್ತ ಹೀನತೆ ಇರುವವರಿಗೆ ತುಂಬಾ ಒಳ್ಳೆಯದು.

ಕಡಲೆಯಲ್ಲಿ ಅಮೈನೋ ಆಸಿಡ್, ಸೇರೋಟಾನಿಕ್ ರೀತಿಯ ಉಪಯೋಗಕಾರಿ ಪೋಷಕಾಂಶಗಳು ಸಮೃದ್ಧವಾಗಿ ಸಿಗುತ್ತವೆ. ಈ ಎಲ್ಲ ಅಮಹಗಳು ಒಳ್ಳೆಯ ನಿದ್ರೆ ಬರುವಂತೆ ನೋಡಿಕೊಳ್ಳುತ್ತದೆ. ಕಡಲೆಯಲ್ಲಿ ಅಲ್ಪನಿಲೋನಿಕ್ ಆಸಿಡ್, ಒಮೆಗ 3 ಆಂಟಿ ಆಸಿಡ್ ಹೆಚ್ಚಾಗಿ ಇರುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯದ ಕಾಯಿಲೆಯನ್ನೂ ಸಹ ನಿಯಂತ್ರಿಸುತ್ತದೆ. ಐರನ್, ಪ್ರೊಟೀನ್, ಮಿನರಲ್ಸ್ ಗಳು ಸಮೃದ್ಧವಾಗಿ ಇರುವುದರಿಂದ ಕಡಲೆ ಶರೀರಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲಿನಲ್ಲಿ ಇರುವ ಕ್ಯಾಲ್ಶಿಯಂ ಗೆ ಸಮಾನವಾದ ಕ್ಯಾಲ್ಶಿಯಂ ಕಡಲೆಯಲ್ಲಿ ಸಿಗುತ್ತದೆ. ಇದರೊಂದಿಗೆ ಮೂಳೆಗಳಿಗೆ ಧೃಢವಾದ ಶಕ್ತಿ ಸಿಗುತ್ತದೆ. ಇದರಲ್ಲಿ ಪ್ರಾಸ್ಪರಸ್ ಅಂಶ ಹೆಚ್ಚು ಇರುವುದರಿಂದ ಶರೀರದಲ್ಲಿ ಹೆಚ್ಚಾದ ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

ಹಳದಿ ಕಾಮಾಲೆ ಇರುವವರು ಕಡಲೆಯನ್ನು ಸೇವಿಸುವುದರಿಂದ ಬೇಗನೆ ಕಡಿಮೆ ಆಗುತ್ತದೆ. ಪ್ರಾಸ್ಪರಸ್ ಹೆಚ್ಚಾಗಿ ಇರುವುದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಸಹ ಹೋಗಲಾಡಿಸುತ್ತದೆ. ತುರಿಕೆ ಕಜ್ಜಿ ಇಂತಹ ಖಾಯಿಲೆಗಳಿಗೆ ಇದು ಒಂದು ಉತ್ತಮ ಆಹಾರ. ರಾತ್ರಿ ನೆನೆಸಿಟ್ಟ ಕಡಲೆ, ಉಪ್ಪು, ಶುಂಠಿ, ಜೀರಿಗೆ ಸೇರಿಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಕಡಲೆಯನ್ನು ಸಿಪ್ಪೆ ತೆಗೆಯದೇ ಸೇವಿಸುವುದರಿಂದ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇಡುಒಂದು ಉತ್ತಮ ಆಹಾರ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕದಲೆಯನ್ನು ಸೇವಿಸುವುದರಿಂದ ಒಳ್ಳೆಯದು. ಹುರಿದ ಕಡಲೆಯನ್ನು ಸೇವಿಸುವುದರಿಂದ ಪದೇ ಪದೇ ಮೂತ್ರ ಬರುವ ಸಮಸ್ಯೆ ಕಡಿಮೆ ಆಗುತ್ತದೆ. ಕಡಲೆಯಲ್ಲಿ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ ದೂರ ಆಗುತ್ತದೆ. ಕಡಲೆ ಹಿಟ್ಟಿನ ಪುಡಿಯನ್ನು ಅರಿಷಿನಕ್ಕೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಹೊಳೆಯುತ್ತದೆ. ಮಹಿಳೆಯರಿಗೂ ಸಹ ಈ ಕಡಲೇಕಾಳು ತುಂಬಾ ಸಹಕರಿಸುತ್ತದೆ. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಸ್ತನ ಕ್ಯಾನ್ಸರ್ ಉಂಟು ಮಾಡುವ ಅಂಶಗಳನ್ನು ನಾಶ ಮಾಡುತ್ತವೆ ಹಾಗೂ ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Leave A Reply

Your email address will not be published.