ಲವಂಗ ಇದು ಪ್ರತಿಯೊಬ್ಬರ ಮನೆಯಲ್ಲಿ ಕೂಡ ಅಡುಗೆಗೆ ಬಳಸುವ ವಸ್ತು. ಇದನ್ನ ಅಡುಗೆಗೆ ಮಾತ್ರ ಬಳಸುವುದು ಅಲ್ಲದೇ ನಮ್ಮ ಆರೋಗ್ಯದ ದೃಷ್ಟಿಯಿಂದ ಸಹ ಇದನ್ನ ತಿನ್ನುವುದು ಬಹಳ ಒಳ್ಳೆಯದು. ಹಾಗಾದ್ರೆ ಪ್ರತೀ ದಿನ ಈ ಲವಂಗವನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತೆ ಅನ್ನೋದನ್ನ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳೋಣ.
ಲವಂಗದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಎಷ್ಟೊಂದು ಒಳ್ಳೆಯ ಅಂಶಗಳು ಇವೆ ಅಂದ್ರೆ, ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಸೆಪ್ಟಿಕ್ ಗುಣಗಳು ತುಂಬಾ ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವ ಮೂಲಕ ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಹಾಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೂಡ ತುಂಬಾ ಸಹಾಯ ಮಾಡುತ್ತದೆ. ಶೀತ, ಕೆಮ್ಮು , ಗಂಟಲು ನೋವು ಇದ್ದರೆ ಲವಂಗ ತಿನ್ನುವುದರಿಂದ ಅತಿ ವೇಗ ಗುಣಮುಖ ಆಗಬಹುದು. ಬಾಯಿಯಲ್ಲಿ ಹುಣ್ಣು ಆದರೆ ಕೂಡ ಲವಂಗವನ್ನು ಅಗೆದು ತಿನ್ನುವುದರಿಂದ ಬಾಯಿ ಹುಣ್ಣನ್ನು ಒಣಗುತ್ತದೆ ಮತ್ತು ನೋವನ್ನು ಕೂಡ ನಿವಾರಣೆ ಮಾಡುತ್ತದೆ. ಹಲ್ಲಿನ ನೋವು ಮತ್ತು ವಸಡಿನಲ್ಲಿ ನೋವು ಇದ್ದರೆ ಲವಂಗವನ್ನು ಅಗೆದು ನುಂಗುವುದರಿಂದ ಹಳ್ಳು ಮತ್ತು ವಸಡಿನ ನೋವು ಬಹಳ ಬೇಗ ಕಡಿಮೆ ಆಗತ್ತೆ. ಹಾಗೆ ಒಂದೆರಡು ಲವಂಗವನ್ನು ಅಗೆದು ತಿನ್ನುವುದರಿಂದ ಬಾಯಿಯ ದುರ್ವಾಸನೆಯನ್ನು ಸಹ ನಿವಾರಣೆ ಮಾಡುತ್ತೆ. ಲವಂಗ ಹಲ್ಲು ನೋವು ಮತ್ತೆ ವಸಡುಗಳ ನೋವನ್ನು ಕಡಿಮೆ ಮಾಡುತ್ತೆ ಅಂತಾನೆ ಕೆಲವೊಂದು ಟೂತ್ ಪೇಸ್ಟ್ ಗಳಲ್ಲಿ ಸಹ ಲವಂಗವನ್ನು ಬಳಸಿರುತ್ತಾರೆ.
ಲವಂಗ ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡುತ್ತದೆ ಜೊತೆಗೆ ನಮ್ಮ ದೇಹದ ಕೊಬ್ಬನ್ನು ಕರಗಿಸಲು ಸಹ ಸಹಾಯ ಮಾಡುತ್ತದೆ. ಇನ್ನು ಕೆಲವರಿಗೆ ತು ಬಾ ಮಸಾಲೆ ಪದಾರ್ಥಗಳನ್ನು ತಿಂದಾಗ ಎದೆಯಲ್ಲಿ ಉರಿ ಎನಿಸುತ್ತದೆ ಆಗ ಒಂದು ಕಪ್ ನೀರಿಗೆ ಒಂದೆರಡು ಲವಂಗ ಹಾಕಿ ಬಿಸಿ ಮಾಡಿ ಸ್ವಲ್ಪ ಆರಿಸಿ ಕುಡಿಯುವುದರಿಂದ ತಕ್ಷಣ ಪರಿಹಾರ ಕಾಣಬಹುದು. ಇನ್ನು ತಲೆನೋವಿನ ಸಮಸ್ಯೆ ಅಂತೂ ಎಲ್ಲರಿಗೆ ಸರ್ವೇ ಸಾಮಾನ್ಯ. ಅದಕ್ಕೆ ಒಂದು ಲೋಟ ಹಾಲಿಗೆ ಎರಡು ಲವಂಗವನ್ನು ಕುತ್ತಿ ಪುಡಿ ಮಾಡಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ತಕ್ಷಣವೇ ಆ ಹಾಲನ್ನು ಕುಡಿಯುವುದರಿಂದ ತಲೆ ನೋವು ಬೇಗ ಕಡಿಮೆ ಆಗತ್ತೆ. ಒಂದುವೇಳೆ ಬೇಧಿ ಆಗ್ತಾ ಇದ್ರು ಒಂದೆರಡು ಲವಂಗವನ್ನು ಅಗೆದು ತಿಂದರೆ ಸರಿ ಆಗತ್ತೆ.
ಇನ್ನು ಕೆಲವರಿಗೆ ಹೊಟ್ಟೆ ಉಬ್ಬು, ಗ್ಯಾಸ್ಟ್ರಿಕ್ ಸಮಸ್ಯೆ ಈ ರೀತಿ ಕಂಡು ಬಂದರೆ ಲವಂಗ ತಿಂದರೆ ಬೇಗ ಕಡಿಮೆ ಆಗತ್ತೆ. ಅಜೀರ್ಣ ಸಮಸ್ಯೆಗೂ ಊಟದ ನಂತರ ಲವಂಗ ತಿನ್ನುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆ ಆಗತ್ತೆ. ಸಂಧಿ ನೋವು ಇದ್ದವರು ಲವಂಗದ ಪೇಸ್ಟ್ ತಯಾರಿಸಿ ನೋವಿರುವ ಭಾಗಕ್ಕೆ ಹಚ್ಚಿದರೆ ಸಂಧಿ ನೋವು ಕಡಿಮೆ ಆಗುತ್ತದೆ. ಕೆಲವರಿಗೆ ಮುಖದಲ್ಲಿ ಮೊಡವೆಗಳು ಹಾಗೂ ಮೊಡವೆಯ ಕಲೆಗಳು ತುಂಬಾ ಹೆಚ್ಚಾಗಿ ಇರತ್ತೆ ಅಂತವರು ನಾಲ್ಕೈದು ಪುದೀನಾ ಎಲೆಗಳನ್ನು ತೊಳೆದು ಅದರ ಜೊತೆಗೆ ಒಂದು ಲವಂಗವನ್ನು ಕುಟ್ಟಿ ಪುಡಿ ಮಾಡಿ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿ ಮೊಡವೆಗಳು ಇರುವ ಜಾಗಕ್ಕೆ ಈ ಪೇಸ್ಟ್ ಹಚ್ಚಿದರೆ ಮೊಡವೆಗಳು ನಿವಾರಣೆ ಆಗುತ್ತವೆ. ಇನ್ನು ತುಂಬಾ ಗಂಟಲು ನೀವು ಇರುವವರು ಪ್ರತೀ ದಿನ ಲವಂಗದ ಎನ್ನೆಯನ್ನು ಹಚ್ಚುವುದರಿಂದ ಗಂಟಲು ನೋವು ಬೇಗ ಗುಣ ಆಗುತ್ತದೆ. ವಯಸ್ಸಾದವರಿಗೆ ಗಂಟಲು ನೋವು ತುಂಬಾ ಹೆಚ್ಚು ಇರತ್ತೆ ಅಂತವರು ಲವಂಗದ ಎನ್ನೆಯನ್ನೂ ಹಚ್ಚಿದರೆ ತುಂಬಾ ಒಳ್ಳೆಯದು.
ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ ಮಧುಮೇಹ ಕಾಯಿಲೆಯನ್ನು ನಿವಾರಿಸಬಹುದು. ಅತಿಯಾಗಿ ಸೇವಿಸಬಾರದು. ಆಯುರ್ವೇದದ ಪ್ರಕಾರ, ಕೆಲವೊಂದು ಸಾಂಬಾರ ಪದಾರ್ಥಗಳು ಪ್ರತಿ ರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಲವಂಗ ಕೂಡಾ ಒಂದು. ಲವಂಗ ಮೋಗ್ಗಿನಲ್ಲಿ ಇರುವ ವಿಶೇಷ ಗುಣಗಳು ಬಿಳಿ ರಕ್ತ ಕಣಗಳು ಹೆಚ್ಚಾಗಲು ಸಹಾಯ ಆಗುತ್ತವೆ. ಇದರಿಂದಾಗಿ ಹಲವಾರು ಆರೋಗ್ಯ ಸಮಸ್ಯೆಯ ವಿರುದ್ಧ ಹೋರಾಡಬಹುದು. ಇದನ್ನ ಪ್ರತಿ ದಿನ ತಿನ್ನಬೇಕು ಅಂದುಕೊಂಡರೆ ಬ್ರಷ್ ಮಾಡಿದ ನಂತರ ಒಂದೆರಡು ಲವಂಗವನ್ನು ಅಗೆದು ತಿನ್ನಬೇಕು ಅಥವಾ ಮಧ್ಯಾಹ್ನ ಊಟದ ನಂತರವು ತಿನ್ನಬಹುದು. ಇದರಿಂದಾಗಿ ಗ್ಯಾಸ್ಟ್ರಿಕ್ ಆಸಿಡಿಟಿ ಸಮಸ್ಯೆಗಳು ಇರಲ್ಲ.
ಅಂದ ಹಾಗೆ ಇದನ್ನ ಯಾರೆಲ್ಲ ತಾಗೊಬಹುದು ಅಂತ ನೋಡೋದಾಡ್ರೆ ೨೦ ವರ್ಷ ಮೇಲ್ಪಟ್ಟವರು ಹುಡುಗರು, ಹುಡುಗಿಯರು ಯಾರ್ ಬೇಕಿದ್ರು ಇದನ್ನ ತಿನ್ನಬಹುದು. ಗರ್ಭಿಣಿಯರು ಲವಂಗವನ್ನು ತಿನ್ನಬಾರದು. ಇವಿಷ್ಟು ಲವಂಗದ ಉಪಯೋಗಗಳು.