ಚಳಿಗಾಲ ಮುಗಿದು ಬೇಸಿಗೆಕಾಲ ಬಂದಿದೆ. ಈ ಸಮಯದಲ್ಲಿ ಗಟ್ಟಿಯಾದ ಆಹಾರ ಪದಾರ್ಥಗಳಿಗಿಂತ ಹೆಚ್ಚು ದ್ರವ ಪದಾರ್ಥಗಳನ್ನು ಕುಡಿಯಬೇಕು ಎಂದು ಅನಿಸುತ್ತದೆ. ಹೆಚ್ಚು ನೀರು ಕುಡಿಯಬೇಕು ಅನಿಸುತ್ತದೆ. ಹಾಗಾದರೆ ಬೇಸಿಗೆಯಲ್ಲಿ ಎಷ್ಟು ನೀರು ಸೇವಿಸಬೇಕು ಎಂದು ನೋಡೋಣ.

ನೀರು ಒಂದು ಆಹಾರವೂ ಹೌದು ಮತ್ತು ಆಹಾರಾಂಶವೂ ಹೌದು. ನೀರು ಇಲ್ಲದೆ ಮನುಷ್ಯ ಬದುಕುವುದು ಬಹಳ ಕಷ್ಟ. ಹಾಗೋ ಹೀಗೋ ಮಾಡಿ ನೀರಿಲ್ಲದೆ ಒಂದು ವಾರ ಕಲಿಯಬಹುದು. ಆದ್ದರಿಂದ ಬೇರೇ ಎಲ್ಲಾ ಆಹಾರಕ್ಕಿಂತಲೂ ಮನುಷ್ಯನ ದೇಹಕ್ಕೆ ನೀರು ಬಹಳ ಮುಖ್ಯ.

ನಮ್ಮ ದೇಹದ ಒಳಗಡೆ ಹೆಚ್ಚಿನ ಭಾಗ ಇರುವುದೇ ನೀರು. ಪುರುಷರ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುತ್ತದೆ. ಮಹಿಳೆಯರಲ್ಲಿ ನೀರಿನ ಪ್ರಮಾಣ ಕಡಿಮೆ. ಮಕ್ಕಳಲ್ಲೂ ಅಧಿಕವಾಗಿರುತ್ತದೆ.ಅವರವರ ವಯಸ್ಸಿಗನುಗುಣವಾಗಿ ನೀರು ಇರುತ್ತದೆ.

ನೀರು ಜೀವಕೋಶದ ಹೊರಗೂ ಮತ್ತು ಒಳಗೂ ಇರುತ್ತದೆ. ನೀರು ಎಷ್ಟು ಕುಡಿಯಬೇಕು ಈ ಎನ್ನುವುದು ಎಲ್ಲರನ್ನು ಕಾಡುವ ಪ್ರಶ್ನೆ. ಒಂದು ಕ್ಯಾಲೋರಿ ಊಟ ಮಾಡಿದರೆ ಒಂದು ml ನಷ್ಟು ನೀರನ್ನು ಕುಡಿಯಬೇಕು. ಋತುವಿಗೆ ತಕ್ಕ ಹಾಗೆ ನೀರನ್ನು ಕುಡಿಯಬೇಕು. ನಾವು ಸೆಕೆಯ ದೇಶದಲ್ಲಿ ಇರುತ್ತೇವೆ. ಆದ್ದರಿಂದ ದಿನಕ್ಕೆ 4ಲೀಟರ್ ನೀರು ಕುಡಿಯಲೇಬೇಕು.

ನಮ್ಮ ದೇಹದಲ್ಲಿ ಆಗುವ ಉಷ್ಣವನ್ನು ಬಿಸಿಲಿಗೆ ಹೋದಾಗ ದೇಹವು ಬೆವರಿನ ಮೂಲಕ ಹೊರ ಹಾಕುತ್ತದೆ. ನಮ್ಮ ದೇಹದಲ್ಲಿ ಹೆಚ್ಚಿನ ಮೂತ್ರಕೋಶದಿಂದ ಹೊರ ಹೋಗುತ್ತದೆ.ಹೊರಗಡೆ ಆಟ ಅಡುವವರಿಗೆ, ಪೋಲಿಸ್ ರವರಿಗೆ ಹೀಗೆ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ 5ಲೀಟರ್ ನೀರು ಅವಶ್ಯವಾಗಿರುತ್ತದೆ.

ನೀರನ್ನು ಯಾವ ರೂಪದಲ್ಲಿ ಕುಡಿಯಬೇಕು ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ನೆ. ಮಾಂಸಾಹಾರದಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ. ಪ್ರಮುಖವಾಗಿ ಸಸ್ಯಾಹಾರಿಯಲ್ಲಿ ನೀರಿನ ಅಂಶ ಹೆಚ್ಚಾಗಿ ಕಂಡುಬರುತ್ತದೆ. ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಕಿಡ್ನಿಯ ಸಮಸ್ಯೆಗಳನ್ನು ದೂರ ಇಡಬಹುದು. ದೇಹದ ತೂಕ ಸಮತೋಲನದಲ್ಲಿಡಬಹುದು. ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕೊನೆಯದಾಗಿ ಹೇಳುವುದೇನೆಂದರೆ ಹೆಚ್ಚಾಗಿ ನೀರನ್ನು ಕುಡಿದು ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಿ.

By

Leave a Reply

Your email address will not be published. Required fields are marked *